ಟಾಲಿವುಡ್ ನಟ ನಾಗಚೈತನ್ಯ ತಮ್ಮ ಪತ್ನಿ ಸಮಂತಾ ಜೊತೆ ಮಹಾರಾಷ್ಟ್ರದ ತಡೋಬ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. ತಡೋಬ, ಭಾರತ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದು. ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಡೋಬದ ಸುಂದರ ತಾಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಅರಣ್ಯ ಪ್ರದೇಶದಲ್ಲೇ ಉಳಿದುಕೊಂಡಿದ್ದ ಈ ಸೆಲಬ್ರಿಟಿ ಜೋಡಿ, ಹುಲಿಗಳನ್ನು ಬಹಳ ಹತ್ತಿರದಿಂದ ನೋಡಿ ಥ್ರಿಲ್ ಆಗಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡೂ ದಿನಗಳು ಇಬ್ಬರೂ ಸಫಾರಿಯನ್ನು ಎಂಜಾಯ್ ಮಾಡಿದ್ದಾರೆ. ಲಾಕ್ಡೌನ್ ತೆರವಾದ ನಂತರ ಮೃಗಾಲಯಗಳು ಹಾಗೂ ರಾಷ್ಟ್ರೀಯ ಉದ್ಯಾನವನಗಳನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಕೊರೊನಾ ಲಾಕ್ಡೌನ್ನಿಂದ ಹೊರಗೆ ಹೋಗಲು ಸಾಧ್ಯವಾಗದೆ ಹೈರಾಣಾಗಿದ್ದ ಜನರು ಈ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ಸಮಂತಾ ಹಾಗೂ ನಾಗಚೈತನ್ಯ ಕೂಡಾ ಬಹಳ ದಿನಗಳ ನಂತರ ಹೊರಗೆ ಸುತ್ತಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಪರಿಸರ ಪ್ರೇಮಿಗಳಾಗಿದ್ದು ರಿಲ್ಯಾಕ್ಸ್ ಮಾಡಲು ಈ ಸ್ಥಳಕ್ಕೆ ಬಂದಿದ್ದಾರೆ.