ನವರಸ ನಾಯಕ ಜಗ್ಗೇಶ್ ಸಿನಿಮಾ ಅಂದ್ರೆ ಅದ್ರಲ್ಲಿ ಕಾಮಿಡಿ ಮಾಸಾಲೆ ಹೆಚ್ಚೇ ಇರುತ್ತೆ. ಇದೀಗ ಜಗ್ಗಣ್ಣ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ.
ಇನ್ನು, ಈ ಸಿನಿಮಾ ಟ್ರೈಲರ್ ಇಂದು ಸಂಜೆ ಬಿಡುಗಡೆಯಾಗಲಿದ್ದು, ಚಾಲೆಂಜಿಂಗ್ಸ್ಟಾರ್ ದರ್ಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಜಗ್ಗೇಶ್ಗೆ ಜೋಡಿಯಾಗಿ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರ ಓರ್ವ ಕನ್ನಡ ಶಿಕ್ಷಕನಿಗೆ ಸಂಬಂಧಿಸಿದೆ. ಇದರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಸಿನಿಮಾದ ಡೈಲಾಗ್ಗಳು ಕೇಳಿಬರುತ್ತವೆ.
ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾವನ್ನು ಕವಿರಾಜ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಸಾಧುಕೋಕಿಲ, ತಬಲಾ ನಾಣಿ ಸೇರಿದಂತೆ ಬಹುತಾರಾಗಣ ಅಭಿನಯಿಸುತ್ತಿದೆ. ಸಿನಿಮಾಕ್ಕೆ ಗುರುಕಿರಣ್ ಸಂಗೀತ ನೀಡಲಿದ್ದಾರೆ.