ETV Bharat / sitara

ಹೊಸಬರು ಹಳಬರ ಮಧ್ಯೆ ಪೈಪೋಟಿ: ಇಂದು ಏಳು ಚಿತ್ರಗಳು ತೆರೆಗೆ

ಆಯುಷ್ಮಾನ್ ಭವ, ಮನೆ ಮಾರಾಟಕ್ಕಿದೆ, ನಂ ಗಣಿ ಬಿ ಕಾಂ ಪಾಸ್, ಭಾಗ್ಯಶ್ರೀ, ರಿಲ್ಯಾಕ್ಸ್ ಸತ್ಯ, ಪ್ರೀತಿ ಇರಬಾರದೆ ಹಾಗು ರಾಜ ಪಥ ಈ ದಿನ ಬಿಡುಗಡೆಗೊಳ್ಳುತ್ತಿರುವ ಸಿನಿಮಾಗಳು

author img

By

Published : Nov 15, 2019, 9:46 AM IST

ಈ ವಾರ ತೆರೆಕಾಣಲಿವೆ ಏಳು ಚಿತ್ರಗಳು

ಕಳೆದ ವಾರ ಆರು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಇಂದು ಏಳು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ಹೊಸಬರ ಹಾಗೂ ಹಳಬರ ನಡುವೆ ಪೈಪೋಟಿ ಏರ್ಪಟಿದ್ದು, ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕು.

ಬಹು ನಿರೀಕ್ಷಿತ ಶಿವರಾಜಕುಮಾರ್ ಅವರ ‘ಆಯುಷ್ಮಾನ್ ಭವ’, ನಾಲ್ಕು ಹಾಸ್ಯ ನಟರುಗಳಾದ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಅಭಿನಯದ ‘ಮನೆ ಮಾರಾಟಕ್ಕಿದೆ’, ಹೊಸ ತಂಡದ ‘ನಂ ಗಣಿ ಬಿ ಕಾಂ ಪಾಸ್’, ರಾಜ ಪಥ, ರಿಲ್ಯಾಕ್ಸ್ ಸತ್ಯ, ಪ್ರೀತಿ ಇರಬಾರದೇ ಮತ್ತು ಉತ್ತರ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗುತ್ತಿರುವ ‘ಭಾಗ್ಯಶ್ರೀ’ ಸಿನಿಮಾಗಳು ಇಂದು ಬಿಡುಗಡೆಯಾಗುತ್ತಿದೆ.

ಆಯುಷ್ಮಾನ್ ಭವ ದ್ವಾರಕೀಶ್ ಚಿತ್ರ ಲಾಂಛನದ 52 ನೇ ಸಿನಿಮಾ, ದ್ವಾರಕೀಶ್ ಅವರ 50ನೇ ವರ್ಷದ ಸಂಭ್ರಮದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಆಯುಷ್ಮಾನ್ ಭವ ಚಿತ್ರದಲ್ಲಿ ಮೊದಲ ಬಾರಿಗೆ ಡಾ ಶಿವರಾಜಕುಮಾರ್ ಜೊತೆ ರಚಿತ ರಾಮ್ ನಾಯಕಿ ಆಗಿದ್ದಾರೆ. ಅನಂತ್ ನಾಗ್, ರಮೇಶ್ ಭಟ್, ನಿಧಿ ಸುಬ್ಬಯ್ಯ, ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ರಂಗಾಯಣ ರಘು, ಯಷ್ ಶೆಟ್ಟಿ ಹಾಗೂ ಇತರರು ಪಾತ್ರ ನಿರ್ವಹಿಸಿದ್ದಾರೆ.

Ayushman Bhava
ಆಯುಷ್ಮಾನ್ ಭವ

ಮನೆ ಮಾರಾಟಕ್ಕಿದೆ ಎಸ್ ವಿ ಬಾಬು ಅವರ 16 ನೇ ಕನ್ನಡ ಸಿನಿಮಾ. ಇದು ನಾಲ್ಕು ಕಾಮಿಡಿ ನಟರುಗಳ ಸಂಗಮ. ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಜೊತೆ ಶೃತಿ ಹರಿಹರನ್, ಕಾರುಣ್ಯ ರಾಮ್, ಬೇಬಿ ಪರಿಶ್ವಿತ, ರಾಜೇಶ್ ನಟರಂಗ, ಶಿವರಾಮಣ್ಣ, ಗಿರಿ, ನಿನಾಸಂ ಅಶ್ವಥ್ ತಾರಾಗಣದಲ್ಲಿದ್ದಾರೆ.

ನಂ ಗಣಿ ಬಿ ಕಾಂ ಪಾಸ್ ಇದು ಬೃಂದಾವನ್ ಫಿಲ್ಮ್ಸ್ ಅಡಿಯಲ್ಲಿ ನಾಗೇಶ್ ಕುಮಾರ್ ಅವರ ಎರಡನೇ ಕನ್ನಡ ಸಿನಿಮಾ. ಸೋಂಬೇರಿ ಹುಡುಗ ಬಿ ಕಾಂ ಪಾಸ್ ಆದರೂ ದೊಡ್ಡ ಕೆಲಸ ಬೇಕು ಅಂತ ಪ್ರಯತ್ನ ಪಡುವ ಕಷ್ಟ, ಆತ ಸಮಾಜದಲ್ಲಿ, ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ, ಪ್ರೀತಿಸಿದವಳಿಂದ ಅನುಭವಿಸುವ ಅವಮಾನ ಈ ಸಿನಿಮಾದಲ್ಲಿ ಮೂಡಿ ಬರಲಿದೆ.

ಉತ್ತರ ಕರ್ನಾಟಕದಲ್ಲಿ ಮಾತ್ರ ‘ಭಾಗ್ಯಶ್ರೀ’ ಬಿಡುಗಡೆಯಾಗುತ್ತಿದೆ. ಕಾದಂಬರಿ ಆಧಾರಿತ ಚಿತ್ರವಾಗಿರುವ ಇದು ಬಾಲ್ಯ ವಿವಾಹದ ದುಷ್ಪರಿಣಾಮ ಕುರಿತಾದ ಸಿನಿಮಾ. ಬನಶಂಕರಿ ಆರ್ಟ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ.

SV Babu's Mane maratakkide
ಎಸ್ ವಿ ಬಾಬು ಅವರ ಮನೆ ಮಾರಾಟಕ್ಕಿದೆ

ರಿಲ್ಯಾಕ್ಸ್ ಸತ್ಯ –ರೆಡ್ ಡ್ರಾಗನ್ ಫಿಲ್ಮ್ಸ್ ಅಡಿಯಲ್ಲಿ ಮೋಹನ್ ಕುಮಾರ್, ಮೋಹನ್ ರೆಡ್ಡಿ ಹಾಗೂ ಚೇತನ್ ನಿರ್ಮಾಣದ ಈ ಚಿತ್ರ ಭೂಗತ ಲೋಕದ ಕಥಾ ವಸ್ತು ಹೊಂದಿದೆ. ಇಲ್ಲಿ ರೌಡಿ ಚಟುವಟಿಕೆಗೆ ಹಾಸ್ಯದ ಮಿಶ್ರಣ ಸಹ ಬೆರೆಸಲಾಗಿದೆ.

ಪ್ರೀತಿ ಇರಬಾರದೆ- ಗೋಲ್ಡ್ ಟೈಮ್ ಇನ್ ಪಿಕ್ಚರ್ಸ್ ಅಡಿಯಲ್ಲಿ ಡಾ ಲಿಂಗೇಶ್ವರ್ ನಿರ್ಮಾಣದ ಈ ಚಿತ್ರಕ್ಕೆ ನಿರ್ಮಾಪಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ನವೀನ್ ನಯನಿ ನಿರ್ದೇಶನ ಮಾಡಿದ್ದಾರೆ.

ರಾಜ ಪಥ ಸಂತೋಷ್ ಮಹಾರಾಜ್ ಫಿಲ್ಮ್ಸ್ ಅಡಿಯಲ್ಲಿ ಸಂತೋಷ್ ಹೆಚ್ ರೈಕಾರ್ ನಿರ್ಮಾಣದ ಮೂಗುರು ಸಿದ್ದು ರಚಿಸಿ ನಿರ್ದೇಶನ ಮಾಡಿರುವ ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಪ್ರತಿಯೊಬ್ಬರಿಗೂ ಕನಸು ಇರುತ್ತದೆ. ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ, ಪ್ರೀತಿ, ಪ್ರೇಮ ಹಾಗೂ ಸ್ನೇಹ ಮುಖ್ಯ ಎಂದು ಈ ಚಿತ್ರ ಸಾರುತ್ತದೆ.

ಈ ವಾರ ಏಳು ಚಿತ್ರಗಳು ಹೊಸಬರು ಹಳಬರ ಸಂಗಮ

ಕಳೆದ ವಾರ ವಾರ ಆರು ಕನ್ನಡ ಚಿತ್ರಗಳು ಆದರೆ ಈ ಶುಕ್ರವಾರ ಬಿಡುಗಡೆಗೆ ನಿಂತಿದೆ ಏಳು ಕನ್ನಡ ಸಿನಿಮಗಳು. ದಿವಸಕ್ಕೆ ಒಂದರಂತೆ ಕನ್ನಡ ಸಿನಿಮಾ ರಾಜ್ಯೋತ್ಸವದ ತಿಂಗಳಿನಲ್ಲಿ ಸಜ್ಜಾಗಿದೆ. ಇಲ್ಲಿ ಹೊಸಬರ ಹಾಗೂ ಹಳಬರ ಬಾಕ್ಸ್ ಆಫೀಸು ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

ಶಿವರಾಜಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾದ ಆಯುಷ್ಮಾನ್ ಭವ’, ನಾಲ್ಕು ಹಾಸ್ಯ ನಟರುಗಳಾದ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಅಭಿನಯದ ಮನೆ ಮಾರಾಟ್ಟಕ್ಕಿದೆ’, ಹೊಸ ತಂಡದ ನಂ ಗಣಿ ಬಿ ಕಾಂ ಪಾಸ್’, ರಾಜ ಪಥ, ರಿಲ್ಯಾಕ್ಸ್ ಸತ್ಯ, ಪ್ರೀತಿ ಇರಬಾರದೇ ಮತ್ತು ಉತ್ತರ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗುತ್ತಿರುವ ಭಾಗ್ಯಶ್ರೀ ಸಿನಿಮಾಗಳಿಗೆ ಪ್ರೇಕ್ಷಕರು ಬೇಕಾಗಿದ್ದಾರೆ.

ಆಯುಷ್ಮಾನ್ ಭವ – ಇದು ದ್ವಾರಕೀಶ್ ಚಿತ್ರ ಲಾಂಛನದ 52 ನೇ ಸಿನಿಮಾ, ದ್ವಾರಕೀಶ್ ಅವರ 50ನೇ ವರ್ಷದ ಸಂಭ್ರಮದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಡಾ ಶಿವರಾಜಕುಮಾರ್ ಹಾಗೂ ಪಿ ವಾಸು ಅವರ ದ್ವಿತೀಯ ಸಿನಿಮಾ ಶಿವಲಿಂಗ ಯಶಸ್ಸಿನ ನಂತರ, ದ್ವಾರಕೀಶ್ ಅವರು ಶಿವರಾಜಕುಮಾರ್ ಮೊದಲ ಸಿನಿಮಾ ನಿರ್ಮಾಣ. ಇದು ಗುರು ಕಿರಣ್ ಅವರ 100 ಸಂಗೀತ ನಿರ್ದೇಶನದ ಚಿತ್ರ.

ಪಿ ವಾಸು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಕಥೆ, ಚಿತ್ರಕಥೆ, ಸಂಭಾಷಣೆ ಸಹ ಬರೆದಿದ್ದಾರೆ. ಗೌತಮ್ ರಾಜು ಸಂಕಲನ, ರವಿ ವರ್ಮ ಸಾಹಸ, ಎ ಹರ್ಷ ನೃತ್ಯ ನಿರ್ದೇಶನವಿದೆ.

ಆಯುಷ್ಮಾನ್ ಭವ ಚಿತ್ರದಲ್ಲಿ ಮೊದಲ ಬಾರಿಗೆ ಡಾ ಶಿವರಾಜಕುಮಾರ್ ಜೊತೆ ರಚಿತ ರಾಮ್ ನಾಯಕಿ ಆಗಿದ್ದಾರೆ. ಅನಂತ್ ನಾಗ್, ರಮೇಶ್ ಭಟ್, ನಿಧಿ ಸುಬ್ಬಯ್ಯ, ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ರಂಗಾಯಣ ರಘು, ಯಷ್ ಶೆಟ್ಟಿ ಹಾಗೂ ಇತರರು ಇದ್ದಾರೆ.

ಮನೆ ಮಾರಾಟ್ಟಕ್ಕಿದೆ – ಕನ್ನಡದ ಮತ್ತೊಬ್ಬ ಹೆಸರಾಂತ ನಿರ್ಮಾಪಕ ಎಸ್ ವಿ ಪ್ರೊಡಕ್ಷನ್ ಅಡಿಯಲ್ಲಿ ಎಸ್ ವಿ ಬಾಬು ಅವರ 16 ನೇ ಕನ್ನಡ ಸಿನಿಮಾ. ಇದು ನಾಲ್ಕು ಕಾಮಿಡಿ ನಟರುಗಳ ಸಂಗಮ. ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಜೊತೆ ಶ್ರುತಿ ಹರಿಹರನ್, ಕಾರುಣ್ಯ ರಾಮ್, ಬೇಬೀ ಪರಿಶ್ವಿತ ರಾಜೇಶ್ ನಟರಂಗ, ಶಿವರಾಮಣ್ಣ, ಗಿರಿ, ನಿನಾಸಮ್ ಅಶ್ವಥ್ ತಾರಗಣದಲ್ಲಿದ್ದಾರೆ.

ಶಿಶಿರ, ಶ್ರಾವಣಿ ಸುಬ್ರಮಣಿ, ಶ್ರೀಕಂಠ, ಪಟಾಕಿ ನಂತರ ಮಂಜು ಸ್ವರಾಜ್ ಅವರ ಐದನೇ ಚಿತ್ರವಿದು. ಯೋಗನಂದ್ ಮುದ್ದಾನ್ ಈ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದಾರೆ. ಅಭಿಮಾನ್ ರಾಯ್ ಸಂಗೀತ, ಸುರೇಶ್ ಬಾಬು ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಕಂಬಿ ರಾಜು ಹಾಗೂ ಕಲೈ ನೃತ್ಯ, ವಿಕ್ರಮ್ ಮೋರ್ ಸಾಹಸ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಒದಗಿಸಿದ್ದಾರೆ.

ರಿಲ್ಯಾಕ್ಸ್ ಸತ್ಯ – ರೆಡ್ ಡ್ರಾಗನ್ ಫಿಲ್ಮ್ಸ್ ಅಡಿಯಲ್ಲಿ ಮೋಹನ್ ಕುಮಾರ್, ಮೋಹನ್ ರೆಡ್ಡಿ ಹಾಗೂ ಚೇತನ್ ನಿರ್ಮಾಣದ ಈ ಚಿತ್ರ ಭೂಗತ ಲೋಕದ ಕಥಾ ವಸ್ತು ಹೊಂದಿದೆ. ಇಲ್ಲಿ ರೌಡಿ ಚಟುವಟಿಕೆಗೆ ಹಾಸ್ಯದ ಮಿಶ್ರಣ ಸಹ ಬೆರಸಲಾಗಿದೆ.

ಈ ಹಿಂದೆ ಅಖಿರ ನಿರ್ದೇಶನ ಮಾಡಿದ ನವೀನ್ ರೆಡ್ಡಿ ಈ ಚಿತ್ರದ ನಿರ್ದೇಶಕರೂ. ಆನಂದ್ ರಾಜ ವಿಕ್ರಮ್ ಸಂಗೀತ, ಯೋಗಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿಕ್ರಮ್ ಮೋರ್ ಸಾಹಸ, ಶಂಕರ್ ರಾಮನ್ ಸಂಭಾಷಣೆ ಒದಗಿಸಿದ್ದಾರೆ.

ಪ್ರಭು ಮೂಂಡುಕರ್ ಜೊತೆ ನಾಯಕಿ ಆಗಿ ಮನ್ವಿತ ಹರೀಶ್ ಅಭಿನಯಿಸಿದ್ದಾರೆ. ಉಗ್ರಂ ಮಂಜು, ಕಡ್ಡಿ ಪುರಿ ಚಂದ್ರು ಹಾಗೂ ಇತರರು ತಾರಗಣದಲ್ಲಿದ್ದಾರೆ.

ಪ್ರೀತಿ ಇರಬಾರದೇ – ಗೋಲ್ಡ್ ಟೈಮ್ ಇನ್ ಪಿಕ್ಚರ್ಸ್ ಅಡಿಯಲ್ಲಿ ಡಾ ಲಿಂಗೇಶ್ವರ್ ನಿರ್ಮಾಣದ ಈ ಚಿತ್ರಕ್ಕೆ ನಿರ್ಮಾಪಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನವೀನ್ ನಯನಿ ನಿರ್ದೇಶನ ಮಾಡಿದ್ದಾರೆ.

ಕೆ ಕಲ್ಯಾಣ್ ಅವರ ಆರು ಹಾಡುಗಳಿಗೆ ಸಾಗು ವರ್ಗೀಸ್ ಸಂಗೀತ ಒದಗಿಸಿದ್ದಾರೆ. ಶ್ರೀನು ವಿನುಕೋಟ ಛಾಯಾಗ್ರಹಣ, ಜಾನಕಿ ರಾಮ್ ಸಂಕಲನ, ನರೇಶ್ ಆನಂದ್ ನೃತ್ಯ, ರಾಮ ಸುಂಕರ ಸಾಹಸ, ಸುಬ್ಬರಾಯುಡು ಸಂಭಾಷಣೆ, ಕೆ ಕಲ್ಯಾಣ್ ಗೀತ ರಚನೆ ಮಾಡಿದ್ದಾರೆ.

ತರುಣ್ ತೇಜ್, ಲಾವಣ್ಯ, ಕೇದರ್ ಶಂಕರ್, ಸತ್ಯ ಕೃಷ್ಣ, ಅಜೇಯ ಘೋಷ್, ಸೀನಿಯರ್ ಸೂರ್ಯ ಹಾಗೂ ಇತರರು ತಾರಗಣದಲ್ಲಿದ್ದಾರೆ.

ನಂ ಗಣಿ ಬಿ ಕಾಂ ಪಾಸ್ – ಇದು ಬೃಂದಾವನ್ ಫಿಲ್ಮ್ಸ್ ಅಡಿಯಲ್ಲಿ ನಾಗೇಶ್ ಕುಮಾರ್ ಅವರ ಎರಡನೇ ಕನ್ನಡ ಸಿನಿಮಾ. ಸೋಂಭೇರಿ ಹುಡುಗ ಬಿ ಕಾಂ ಪಾಸ್ ಆದರೂ ದೊಡ್ಡ ಕೆಲಸ ಬೇಕು ಅಂತ ಪಡುವ ಕಷ್ಟ, ಆತ ಸಮಾಜದಲ್ಲಿ, ಮನೆಯಲ್ಲಿ ಹಾಗೂ ಸಂಬಂದಿಕರಲ್ಲಿ, ಪ್ರೀತಿಸಿದವಳಿಂದ ಅನುಭವಿಸುವ ಅವಮಾನ ಜೊತೆ ತನ್ನನ್ನು ಶಾಲಾ ದಿನಗಳಿದ ಪ್ರೀತಿ ಮಾಡುತ್ತಾ ಇದ್ದ ನಾಯಕಿ ಜೀವನದಲ್ಲಿ ಆಗಮಿಸಿದ ಮೇಲೆ ಆಗುವ ವಿಚಾರಗಳು ಹರಿದು ಬರಲಿದೆ.

ಅಭಿಷೇಖ್ ಶೆಟ್ಟಿ ಅವರ ಬಹಳ ವರ್ಷಗಳ ಕನಸು ಇದು. ಅವರದೇ ಕಥೆ, ಚಿತ್ರಕಥೆ, ಗೀತ ರಚನೆ, ಸಂಭಾಷಣೆ ಮತ್ತು ನಿರ್ದೇಶನ ಅಲ್ಲದೆ ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ನಾಗರಾಜ್ ಛಾಯಾಗ್ರಹಣ, ವಿಜೇತ ಚಂದ್ರ ಸಂಕಲನ, ಜೀವನ್ ವಾಸುದೇವನ್ ನೃತ್ಯ ಒದಗಿಸಿದ್ದಾರೆ.

ಅಭಿಷೇಖ್ ಶೆಟ್ಟಿ ಜೊತೆ ನಾಯಕಿ ಆಗಿ ಐಷಾನಿ ಶೆಟ್ಟಿ ಇದ್ದಾರೆ. ಪಲ್ಲವಿ ಗೌಡ, ನಾಟ್ಯರಂಗ, ರಚನ, ಸುಚೆಂದ್ರ ಪ್ರಸಾದ್, ದಿನೇಷ್ ಮಂಗಳೂರು, ಜಹಾಂಗೀರ್, ಮಂಜುನಾಥ್ ಹೆಗ್ಡೆ, ಸುಧ ಬೆಳವಾಡಿ, ಶಂಕರ್ ಅಶ್ವಥ್, ಆಶರನಿ, ರಘು ಪಾಂಡವೇಶ್ವರ್ ತಾರಗಣದಲ್ಲಿದ್ದಾರೆ.

ರಾಜ ಪಥ –ಸಂತೋಷ್ ಮಹಾರಾಜ್ ಫಿಲ್ಮ್ಸ್ ಅಡಿಯಲ್ಲಿ ಸಂತೋಷ್ ಎಚ್ ರೈಕಾರ್ ನಿರ್ಮಾಣದ ಮೂಗುರು ಸಿದ್ದು ರಚಿಸಿ ನಿರ್ದೇಶನ ಮಾಡಿರುವ ಚಿತ್ರ ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ. ಪ್ರತಿಯೊಬ್ಬರಿಗೂ ಕನಸು ಇರುತ್ತದೆ. ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ, ಪ್ರೀತಿ, ಪ್ರೇಮ ಹಾಗೂ ಸ್ನೇಹ ಮುಖ್ಯ ಎಂದು ಈ ಚಿತ್ರ ಸಾರುತ್ತದೆ.

ಚಂದ್ರು ಓಬಯ್ಯ ಸಂಗೀತ ಮತ್ತು ಸಾಹಿತ್ಯ, ರಘು ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಒದಗಿಸಿರುವ ಈ ಚಿತ್ರದ ತಾರಾಗಣದಲ್ಲಿ ಸಂತೋಷ್ ಮಹಾರಾಜ್, ಎಚ್ ಆರ್ ಉಮೇಶ್, ನಿತ್ಯ, ಸಿಂಧು, ಸುಧೀರ್ ಎಚ್ ರಯ್ಕಾರ್, ತೆಜ್ಪಲ್ ಮಹೇಶ್ ಚಕ್ರವರ್ತಿ, ಆನಂದ್ ಡಿ ಕಳಸ, ರಿಕ್ಷಣ ಪೂಜಾರಿ, ಎಸ್ ಎ ಮುತ್ತಗೆ ಹಾಗೂ ಇತರರು ಇದ್ದಾರೆ.

ಉತ್ತರ ಕರ್ನಾಟಕದಲ್ಲಿ ಭಾಗ್ಯಶ್ರೀ ಈ ವಾರ ಬಿಡುಗಡೆ ಭಾಗ್ಯ

ಕಾದಂಬರಿ ಆಧಾರಿತ ಚಿತ್ರ ಭಾಗ್ಯಶ್ರೀ ಬಾಲ್ಯ ವಿವಾಹ ದುಷ್ಪರಿಣಾಮ ಕುರಿತಾದ ಸಿನಿಮಾ ಈ ವಾರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

ಶ್ರೀಮತಿ ಆಶಾ ಶಾಹಿರ ಬಿಳಗಿ ಹಾಗೂ ಶಾಹಿರ ಬಿಳಗಿ ಬಾಗಲಕೋಟೆ ಜಿಲ್ಲೆಯವರು ಬನಶಂಕರಿ ಆರ್ಟ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ತಯಾರಿಸಿದ್ದಾರೆ.

ಎಸ್ ಮಲ್ಲೇಶ್ ಅವರ ಕಾದಂಬರಿ ಭಾಗ್ಯಶ್ರೀ ಅದೇ ಹೆಸರಿನಲ್ಲಿ ಅವರು ನಿರ್ದೇಶನ ಸಹ ಮಾಡಿದ್ದಾರೆ. 7 ನೇ ತರಗತಿ ಪ್ರಾರ್ಥನ ಶಾಲೆಯ ವಿಧ್ಯಾರ್ಥಿ ಕುಮಾರಿ ಹೀರ ಈ ಚಿತ್ರದಲ್ಲಿ ಭಾಗ್ಯಶ್ರೀ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಪದ್ಮಶ್ರೀ ದೊಡ್ಡರಂಗೆ ಗೌಡ ಅವರು ಎರಡು ಹಾಡುಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಕುರಿತಾದ ಒಂದು ವಿಶೇಷವಾದ ಹಾಡು ನಾಲ್ಕುವರೆ ನಿಮಿಷಗಳ ಕಾಲ ಮೂಡಿಬಂದಿದೆ. ಮೂರು ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಅವರ ರಾಗ ಸಂಯೋಜನೆಯಲ್ಲಿ ಮೂಡಿಬಂದಿದೆ. ನಿರ್ದೇಶಕ ಮಲ್ಲೇಶ್ ಸಹ ಒಂದು ಗೀತೆಯನ್ನು ರಚಿಸಿದ್ದಾರೆ.

ಸಂಜೀವ್ ರೆಡ್ಡಿ ಸಂಕಲನ, ಹೇಮಂತ್ ಕುಮಾರ್ ಛಾಯಾಗ್ರಹಣ ಇರುವ ಈ ಭಾಗ್ಯಶ್ರೀ ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ, ಕೆ ಜಿ ಎಫ್ ಕೃಷ್ಣೋಜಿ ರಾವ್, ಏಕನಾಥ್, ನಾಗರಾಜ್ ಹಾಗೂ ಇತರರು ತಾರಾಗಣದಲಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.