ETV Bharat / sitara

ಕೋಮಲ್​ ಅಭಿನಯದ '2020' ಚಿತ್ರದ ಪೋಸ್ಟರ್​​ ಬಿಡುಗಡೆ - ನಟ ಕೋಮಲ್​ ಹುಟ್ಟುಹಬ್ಬ ವಿಶೇಷ

ಇಂದು ನಟ ಕೋಮಲ್​ ಅವರು 48ನೇ ವಸಂತಕ್ಕೆ ಕಾಲಿಟ್ಟಿದ್ದು, ಸರಳವಾಗಿ ಕುಟುಂಬದವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ವೇಳೆ ಅವರ ಮುಂದಿನ ಚಿತ್ರ 2020 ಎಂಬ ಹೊಸ ಸಿನಿಮಾದ ಪೋಸ್ಟರ್​​ ಬಿಡುಗಡೆ ಮಾಡಲಾಯಿತು.

2020 Film Poster Released
2020 ಚಿತ್ರದ ಪೋಸ್ಟರ್​​ ಬಿಡುಗಡೆ
author img

By

Published : Jul 4, 2021, 6:11 PM IST

ಪ್ರತಿವರ್ಷದಂತೆ ಈ ವರ್ಷವೂ ನಟ ಕೋಮಲ್​ ಸರಳವಾಗಿ ತಮ್ಮ ಕುಟುಂಬದವರೊಂದಿಗೆ ಬರ್ತ್​​ ಡೇ ಆಚರಿಸಿಕೊಂಡಿದ್ದಾರೆ. ಈ ಶುಭ ದಿನದಂದೇ ಅವರ ಮುಂದಿನ ಚಿತ್ರ 2020ರ ಪೋಸ್ಟರ್ ಅನ್ನು ಚಿತ್ರತಂಡ​ ಬಿಡುಗಡೆ ಮಾಡಿದೆ.

Actor Komal
ನಟ ಕೋಮಲ್​

ಕೋವಿಡ್‌ ಮೊದಲ ಲಾಕ್​ಡೌನ್​​ ಅನ್ನು ಮುಖ್ಯವಾಗಿರಿಸಿಕೊಂಡು ಚಿತ್ರಕಥೆ ರಚಿಸಲಾಗಿದ್ದು, ನಾಯಕ ಈ ಸಮಯದಲ್ಲಿ ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ. ಹೇಗೆ ಅದರಿಂದ ಹೊರ ಬರುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ಹೇಳಲಾಗಿದೆ.

ಈ ಚಿತ್ರವನ್ನು ಕೆ.ಎಲ್ ರಾಜಶೇಖರ್ ನಿರ್ದೇಶನ ಮಾಡಲಿದ್ದು, ಸಂಭಾಷಣೆಕಾರರಾಗಿದ್ದರೂ ಮೊದಲ ಪ್ರಯತ್ನ ಮಾಡುತ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​​ನಲ್ಲಿ ಟಿ.ಆರ್.ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ಶೇ. 40ರಷ್ಟು ಭಾಗದ ಶೂಟಿಂಗ್ ಮುಗಿದಿದೆ. ಚಿತ್ರೀಕರಣಕ್ಕೆ ಪೂರ್ಣಪ್ರಮಾಣದ ಅನುಮತಿ ಸಿಗುತ್ತಿದ್ದಂತೆಯೇ ಚಿತ್ರೀಕರಣ ಮುಂದುವರೆಯಲಿದೆ.

ಈ ಹಿಂದೆ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಾಯಕಿಯಾಗಿದ ಧನ್ಯಾ ಬಾಲಕೃಷ್ಣ ಈ ಚಿತ್ರದಲ್ಲೂ ಕೋಮಲ್​ಗೆ ನಾಯಕಿಯಾಗಿದ್ದಾರೆ. ಮಿಕ್ಕಂತೆ ಕುರಿ ಪ್ರತಾಪ್, ತಬಲಾ ನಾಣಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.