ETV Bharat / sitara

‘ ನೆನಪಿರಲಿ‘ ಪ್ರೇಮ್ 25ನೇ ಚಿತ್ರಕ್ಕೆ ಫಿಕ್ಸ್ ಆಯ್ತು ಟೈಟಲ್​​​​ - ಸ್ಯಾಂಡಲ್​ವುಡ್

‘ಲವ್ಲಿ ಸ್ಟಾರ್‘ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಬಿ.ಎಸ್​​. ರಾಘವೇಂದ್ರ ನಿರ್ದೇಶಿಸಲಿದ್ದು ಯುಗಾದಿ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ನೆನಪಿರಲಿ ಪ್ರೇಮ್​
author img

By

Published : Apr 4, 2019, 2:32 PM IST

‘ನೆನಪಿರಲಿ‘ ಸಿನಿಮಾದಿಂದ ಸ್ಯಾಂಡಲ್​​​​ವುಡ್ ಪ್ರೇಕ್ಷಕರಿಗೆ ಪರಿಚಿತರಾದ ಲವ್ಲಿ ಸ್ಟಾರ್ ಪ್ರೇಮ್​​ ಯುವತಿಯರ ಮೋಸ್ಟ್ ಫೇವರೆಟ್​​. ಪ್ರೇಮ್​​ ವೃತ್ತಿ ಜೀವನದ 25 ನೇ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ.

prem
‘ಪ್ರೇಮಂ ಪೂಜ್ಯಂ’ ಫಸ್ಟ್​​​​​​ಲುಕ್​​

ಈ ಚಿತ್ರಕ್ಕೆ ‘ಪ್ರೇಮಂ ಪೂಜ್ಯಂ’ ಎಂದು ಹೆಸರಿಡಲಾಗಿದ್ದು ಇಂದು ಸಿನಿಮಾದ ಮೊದಲ ಲುಕ್ ರಿವೀಲ್ ಆಗಿದೆ. ಯುಗಾದಿ ಬಳಿಕ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾಗೆ ಬಿ.ಎಸ್​​. ರಾಘವೇಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೂಡಾ ರಾಘವೇಂದ್ರ ಅವರೇ ನೀಡಿದ್ದಾರೆ. ರಕ್ಷಿತ್ ಕೆಡಂಬಡಿ ಹಾಗೂ ರಾಜಕುಮಾರ್ ಜಾನಕೀರಾಮ್ ಈ ಚಿತ್ರದ ನಿರ್ಮಾಪಕರು, ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣವಿದ್ದು, ಪಾತ್ರವರ್ಗಕ್ಕೆ ಸದ್ಯದಲ್ಲೇ ಆಯ್ಕೆ ನಡೆಯಲಿದೆ.

prem
‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್​​​​​​​​

ಲವ್ಲಿ ಸ್ಟಾರ್ ಪ್ರೇಮ್ 2004 ರಲ್ಲಿ ಬಿಡುಗಡೆಯಾದ ‘ಪ್ರಾಣ’ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​​​ಗೆ ಕಾಲಿಟ್ಟರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ‘ನೆನಪಿರಲಿ’ ಸಿನಿಮಾ. ನಂತರ ತೂಗುದೀಪ ಪ್ರೊಡಕ್ಷನ್ ಬ್ಯಾನರ್ ಅಡಿ ತಯಾರಾದ ‘ಜೊತೆ ಜೊತೆಯಲಿ’, ಹಾಗೂ ಆರ್​​. ಚಂದ್ರು ನಿರ್ಮಿಸಿ, ನಿರ್ದೇಶಿಸಿದ ’ಚಾರ್​​​ ಮಿನಾರ್’ ಕೂಡಾ ಅವರಿಗೆ ಹೆಸರು ತಂದುಕೊಟ್ಟವು. ದ್ವಾರಕೀಶ್ ಚಿತ್ರ ‘ಚೌಕ’ ಪ್ರೇಮ್ ಅವರ ಇತ್ತೀಚಿನ ಸೂಪರ್ ಹಿಟ್ ಸಿನಿಮಾ.

Intro:Body:

ನೆನಪಿರಲಿ ಸಿನಿಮಾದಿಂದ ಸ್ಯಾಂಡಲ್​​​​ವುಡ್ ಪ್ರೇಕ್ಷಕರಿಗೆ ಪರಿಚಿತರಾದ ಲವ್ಲಿ ಸ್ಟಾರ್ ಪ್ರೇಮ್​​ ಯುವತಿಯರ ಮೋಸ್ಟ್ ಫೇವರೆಟ್​​. ಪ್ರೇಮ್​​ ವೃತ್ತಿ ಜೀವನದ 25 ನೇ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.