ಮೇಘನಾ ರಾಜ್ ಹಾಗೂ ಸೃಜನ್ ಲೋಕೇಶ್ ಜೊತೆಯಾಗಿ ನಟಿಸಿರುವ ಸಿನಿಮಾದ ಚಿತ್ರೀಕರಣ ಮುಗಿದಿದೆ. ಕೆಲವು ದಿನಗಳಿಂದ ಚಿತ್ರದ ಟೈಟಲ್ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಚಿತ್ರತಂಡ ಕೊನೆಗೂ ರಿಲ್ಯಾಕ್ಸ್ ಆಗಿದೆ. ಏಕೆಂದರೆ ಚಿತ್ರಕ್ಕೆ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಎಂಬ ಸೂಕ್ತ ಟೈಟಲ್ ಸಿಕ್ಕಿದೆ.
ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಶೀರ್ಷಿಕೆ ಎಲ್ಲರಿಗೂ ಮೆಚ್ಚುಗೆಯಾಗಿದೆ. ಮೇಘನಾ ರಾಜ್ ತಾವು ನಿರ್ಮಿಸುತ್ತಿರುವ 'ಪುಟಾಣಿ ಪಂಟರ್ಸ್' ಮಕ್ಕಳ ಚಿತ್ರದ ಪ್ರಮೋಷನ್ಗಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ, ತಮ್ಮ ಹೊಸ ಚಿತ್ರದ ಟೈಟಲ್ ಬಗ್ಗೆ ಕೂಡಾ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರದ ನಿರ್ದೇಶಕ ಮಧುಚಂದ್ರ ಕೂಡಾ ಹಾಜರಿದ್ದರು. ಈ ಹಿಂದೆ ಅವರು 'ರವಿ ಹಿಸ್ಟರಿ' ಎಂಬ ಸಿನಿಮಾ ನಿರ್ದೇಶಿಸಿದ್ದರು.
- " class="align-text-top noRightClick twitterSection" data="
">
ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಎಲ್ಲರೂ ಮೊಬೈಲನ್ನು ಹೆಚ್ಚಾಗಿ ಬಳಸಿಕೊಂಡು ಪ್ರತಿಯೊಂದಕ್ಕೂ ಗೂಗಲನ್ನೇ ಬಳಸುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರಕಥೆಯನ್ನು ಹೆಣೆಯಲಾಗಿದೆ. ಮೊಬೈಲ್, ಇಂಟರ್ನೆಟ್, ಸೋಷಿಯಲ್ ಮೀಡಿಯಾದ ಆಗುಹೋಗುಗಳನ್ನು ಚಿತ್ರದಲ್ಲಿ ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಟೈಟಲ್ ಮೇಘನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್ ಜೊತೆಗೆ ಮಕ್ಕಳ ಕಥೆ ಕೇಳಲೇಬೇಡಿ ಎಂಬ ಟ್ಯಾಗ್ಲೈನ್ ಕೂಡಾ ಇದೆ. ಸುಧಾ ಬರಗೂರು, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಪೋಷಕ ಪಾತ್ರದಲ್ಲಿದ್ದಾರೆ.