ಜೀ ಕನ್ನಡ ವಾಹಿನಿಯಲ್ಲಿ ಕಳೆದ ಎರಡು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ ಧಾರಾವಾಹಿಗಳ ಪೈಕಿ ಬ್ರಹ್ಮಗಂಟು ಕೂಡಾ ಒಂದು. ವಿಭಿನ್ನ ರೀತಿಯ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದ ಬ್ರಹ್ಮಗಂಟು ಧಾರಾವಾಹಿಗೆ ಇದೀಗ ಕೊರೊನಾ ಬಿಸಿ ತಟ್ಟಿದೆ.

ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕ ಲಕ್ಕಿ ಅಲಿಯಾಸ್ ಲಕ್ಷ್ಮಣ್ ಉತ್ತಮ ಕಬಡ್ಡಿ ಪಟು. ಕಬಡ್ಡಿ ಆಡಬೇಕು, ಮಾತ್ರವಲ್ಲ ಆಡುವುದರ ಜೊತೆಗೆ ಕಬಡ್ಡಿ ಪಂದ್ಯದಲ್ಲಿ ತಾನೇ ಗೆಲ್ಲಬೇಕು, ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಳ್ಳಬೇಕು ಎಂಬುದೊಂದೇ ಆತನಿಗೆ ಕನಸಿತ್ತು.

ಆದರೆ ಲಕ್ಕಿಯ ಈ ಕನಸನ್ನು ಮಹಾಮಾರಿ ಕೊರೊನಾ ಕಮರಿಸಿದೆ. ಯಾಕಂದ್ರೆ ಕೊರೊನಾ ಹಿನ್ನೆಲೆಯಲ್ಲಿ ಸೋಷಿಯಲ್ ಡಿಸ್ಟೆನ್ಸ್ ತುಂಬಾ ಮುಖ್ಯವಾಗಿದೆ. ಹಾಗಾಗಿ ಕಬಡ್ಡಿ ಆಟದ ಶೂಟಿಂಗ್ ಅನ್ನು ನಡೆಸಲಾಗಿಲ್ಲ. ಈ ಕೊರೊನಾ ಕಾರಣದಿಂದಾಗಿ ಕಬಡ್ಡಿ ಪಂದ್ಯ ರದ್ದಾಗಿದೆ.

ತಾನು ಕಂಡ ಕನಸು ಕನಸಾಗಿಯೇ ಇರುವುದಕ್ಕೆ ಲಕ್ಕಿಗೆ ತುಂಬಾನೇ ಬೇಜಾರಾಗಿದೆ. ಮಾತ್ರವಲ್ಲ, ತಾನು ಇಷ್ಟು ದಿನ ಪಟ್ಟ ಪರಿಶ್ರಮಕ್ಕೂ ಬೆಲೆ ಸಿಗಲಿಲ್ಲ ಎಂದು ಬಹಳ ದುಃಖಿತನಾಗಿರುವ ಲಕ್ಕಿ ಮನೆ ಮಂದಿಯ ಜೊತೆಗೆ ಮಾತನಾಡುವುದನ್ನು ನಿಲ್ಲಿಸಿದ್ದಾನೆ.
