ETV Bharat / sitara

ಕೊನೆಯ ಹಂತದ ಚಿತ್ರೀಕರಣದಲ್ಲಿ ಫ್ಯಾಂಟಮ್​ - ಸುದೀಪ್​ ನಟನೆಯ ಫ್ಯಾಂಟಮ್​​

ಫ್ಯಾಂಟಮ್​ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದೆ. ಚಿತ್ರೀಕರಣಕ್ಕೆ ಹಾಕಿರುವ ಶೂಟಿಂಗ್​ ಸೆಟ್ ಹಾಗೂ ಸ್ಥಳ​​ ನನಗೆ ತುಂಬಾ ಇಷ್ಟವಾಯಿತು ಎಂದು ನಟ ಕಿಚ್ಚ ಸುದೀಪ್​​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

The Phantom Cinema has reached the end stage
ಕೊನೆ ಹಂತಕ್ಕೆ ತಲುಪಿದ ಫ್ಯಾಂಟಮ್​ ಶೂಟಿಂಗ್​​
author img

By

Published : Dec 9, 2020, 4:20 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಇನ್ನೇನು ಮುಕ್ತಾಯದ ಹಂತಕ್ಕೆ ತಲುಪಿದೆ. ಇವತ್ತಿನಿಂದ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಶುರು ಮಾಡಲಾಗಿದ್ದು, ಈ ಬಗ್ಗೆ ನಟ ಸುದೀಪ್​​ ಫೋಟೋವೊಂದನ್ನು ಹಾಕಿ ಮಾಹಿತಿ ನೀಡಿದ್ದಾರೆ.

ಫ್ಯಾಂಟಮ್​ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದೆ. ಚಿತ್ರೀಕರಣಕ್ಕೆ ಹಾಕಿರುವ ಶೂಟಿಂಗ್​ ಸೆಟ್ ಹಾಗೂ ಸ್ಥಳ​​ ನನಗೆ ತುಂಬಾ ಇಷ್ಟವಾಯಿತು ಎಂದು ನಟ ಕಿಚ್ಚ ಸುದೀಪ್​​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಗಳು ನಿಹಾರಿಕಾ ಬಗ್ಗೆ ಭಾವನಾತ್ಮಕ ಟ್ವೀಟ್​​ ಮಾಡಿದ ಜಿರಂಜೀವಿ

ಕಳೆದ ಹಲವು ದಿನಗಳಿಂದ ಫ್ಯಾಂಟಮ್​​ ಸಿನಿಮಾದ ಶೂಟಿಂಗ್​​ ಹೈದರಾಬಾದ್​​ನ ರಾಮೋಜಿ ಫಿಲ್ಮ್​​ ಸಿಟಿಯಲ್ಲೇ ಮಾಡಲಾಗಿದ್ದು, ನವೆಂಬರ್ 22ರಂದು ತಮ್ಮ ಶೂಟಿಂಗ್​​ ಮುಗಿಸಿದ್ದ ಸುದೀಪ್​​ ಅಲ್ಲಿಂದ ನಿರ್ಗಮಿಸಿದ್ದರು. ಸದ್ಯ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ವಿಶೇಷ ಏನಂದ್ರೆ ಸುದೀಪ್​ ಈ ಸಿನಿಮಾ ಮೂಲಕ ಮತ್ತೊಂದು ಬಾರಿ ಪೊಲೀಸ್​ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ವಿಕ್ರಾಂತ್​ ರೋಣಾ ಪಾತ್ರಕ್ಕೆ ಸುದೀಪ್​ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅನುಪ್​ ಭಂಡಾರಿ ಆ್ಯಕ್ಷನ್​​ ಕಟ್​​ ಹೇಳುತ್ತಿದ್ದು, ಸಿನಿಮಾ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರಿಲೀಸ್ ಆಗುವ​​​ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.