ಸ್ಯಾಂಡಲ್ವುಡ್ನಲ್ಲಿ ತಮ್ಮ ಕಾಮಿಡಿ ಪಂಚಿಂಗ್ನಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಈಗ ಗೀತಾ ಸಿನಿಮಾ ಬಳಿಕ, ಗಾಳಿಪಟ-2, ದಿ ಸ್ಟೋರಿ ಆಫ್ ರಾಯಗಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅಕ್ಟೋಬರ್ ತಿಂಗಳಲ್ಲಿ ಅವರು ತ್ರಿಬಲ್ ರೈಡಿಂಗ್ ಹೋಗೋದಿಕ್ಕೆ ರೆಡಿಯಾಗಿದ್ದಾರೆ.
ಗಣೇಶ್ ಅಭಿನಯಿಸ್ತಾ ಇರೋ ಸಿನಿಮಾದ ಹೆಸರೇ ತ್ರಿಬಲ್ ರೈಡಿಂಗ್. ಸದ್ಯ ಹೈದರಾಬಾದ್ನಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ. ಈ ಚಿತ್ರ ಲವ್ ಸ್ಟೋರಿ ಜೊತೆಗೆ ಪಕ್ಕಾ ಆ್ಯಕ್ಷನ್ ಓರಿಯೆಂಟಲ್ ಆಗಿದೆಯಂತೆ.
ವಿನೋದ್ ಪ್ರಭಾಕರ್ ರಗಡ್ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಮಹೇಶ್ ಗೌಡ, ಈಗ ತ್ರಿಬಲ್ ರೈಡಿಂಗ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಮುಂಗಾರು ಮಳೆ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ ಮೊದಲಿಂದಲೂ ಗಣೇಶ್ ಅವರ ಒಂದು ಸಿನಿಮಾ ಡೈರೆಕ್ಷನ್ ಮಾಡಬೇಕು ಅಂತಾ ಆಸೆ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಆ ಕಾಲ ಕೂಡಿ ಬಂದಿದೆ.
ಗಣೇಶ್ ಜೋಡಿಯಾಗಿ ಮೂರು ಜನ ನಾಯಕಿಯರು ಆಯ್ಕೆ ಆಗಬೇಕಿದೆ. ಸದ್ಯ ಗಣೇಶ್ ಅಲ್ಲದೇ ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ಸೇರಿ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದೆ. ಆನಂದ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಲಿದ್ದಾರೆ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ಜಯಂತ್ ಕಾಯ್ಕಿಣಿ, ವಿ ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯವಿರಲಿದೆ. ನಿರ್ದೇಶನದ ಜತೆಗೆ ಮಹೇಶ್ ಗೌಡ ಅವರು ಹಾಡು, ಸಂಭಾಷಣೆ ಕೂಡ ಬರೆದಿದ್ದಾರೆ.