ಬೆಂಗಳೂರು : ಅಕುಲ್ ಬಾಲಾಜಿ 'ಊಹಲು ಗುಸಗುಸಲಾಡೆ'ಯಲ್ಲಿ ನಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಧಾರಾವಾಹಿಯಲ್ಲಿ ಅವರ ನಟನೆಯನ್ನು ಮೆಚ್ಚಿ ಕನ್ನಡ ಪ್ರೇಕ್ಷಕರು ಸಂದೇಶ ಕಳುಹಿಸುತ್ತಿದ್ದಾರಂತೆ.
ಪತ್ರಿಕೆಯೊಂದು ನಡೆಸಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿರುವ ಅಕುಲ್, “ನನಗೆ ಈ 'ಊಹಲು ಗುಸಗುಸಲಾಡೆ' ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ.
ಒಳ್ಳೆಯ ಪಾತ್ರ ಸಿಕ್ಕಿದೆ. ಈ ಪಾತ್ರಕ್ಕೆ ನಾನೇ ಸೂಕ್ತ ಎಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ, ಈ ಧಾರಾವಾಹಿಯಲ್ಲಿ ಅಭಿರಾಮ್ ಎಂಬ ವಿಧುರನ ಪಾತ್ರದಲ್ಲಿ ನಟಿಸುತ್ತಿದ್ದೇನೆ.
ಈ ಧಾರಾವಾಹಿಯಲ್ಲಿ ಇಬ್ಬರು ಮಕ್ಕಳ ತಂದೆಯಾಗಿ ನಟಿಸುತ್ತಿರುವ ಅಕುಲ್, ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಹಾಗಾಗಿ, ನನ್ನ ಲುಕ್ ಕೂಡ ಬದಲಾಗಿದೆ ಎಂಬುದು ಅಕುಲ್ ಅಭಿಪ್ರಾಯ.
ಚಿಕ್ಕ ವಯಸ್ಸಿನಿಂದಲೂ ಅಕುಲ್ಗೆ ನಟನೆ ಮೇಲೆ ಆಸಕ್ತಿಯಿತ್ತಂತೆ. ಆದ್ದರಿಂದ ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಈ ಕ್ಷೇತ್ರಕ್ಕೆ ಕಾಲಿಟ್ಟು 20 ವರ್ಷವಾಯಿತು ಎಂದು ಹೇಳುವ ಅಕುಲ್, ತಮ್ಮ ಜರ್ನಿಯ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.