ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಓಂ ಚಿತ್ರದಿಂದ ಇಲ್ಲಿಯ ತನಕ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ರೌಡಿಸಂ ಚಿತ್ರಗಳು ಬಂದಿವೆ. ಅಲ್ಲದೆ ಕೆಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸಖತ್ತಾಗಿ ಸೌಂಡ್ ಮಾಡಿವೆ. ಇದೆಲ್ಲಾ ಈಗ ಯಾಕಪ್ಪ ಹೇಳ್ತಿದ್ದೀವಿ ಅಂದ್ರೆ, ಚಂದನವನದಲ್ಲಿ ಈಗ ಮತ್ತೊಂದು ರೌಡಿಸಂ ಬೇಸ್ ಚಿತ್ರ ಸೆಟ್ಟೇರಿದೆ. ವಿಶೇಷ ಅಂದ್ರೆ ಚಿತ್ರದ ಟೈಟಲ್ ತುಂಬಾ ಸ್ಪೆಷಲ್ ಆಗಿದ್ದು, ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬ ಮಾತಿನಂತೆ ರೌಡಿಸಂ ಚಿತ್ರಕ್ಕೆ "ಗ್ರಂಥಾಲಯ" ಎಂದು ಟೈಟಲ್ ಇಟ್ಟು ಸಿನಿಮಾ ಮಾಡೋಕೆ ನವ ನಿರ್ದೇಶಕ ಸಲ್ಮಾನ್ ಸನ್ನಿ ಹೊರಟಿದ್ದಾರೆ. ಅಲ್ಲದೆ ನನ್ನದೊಂದು ಪುಟ ಬೆಂದಕಾಳೂರು ಎಂಬ ಕ್ಯಾಚಿ ಟ್ಯಾಗ್ ಲೈನ್ ಇಟ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ.
ಇನ್ನು ಈ ಚಿತ್ರಕ್ಕೆ ನಾಯಂಡ ಹಳ್ಳಿ ವರಹ ಗಣಪತಿ ದೇವಾಲಯದಲ್ಲಿ ಮುಹೂರ್ತ ನೇರವೇರಿದ್ದು, ಬೆಳದಿಂಗಳ ಬಾಲೆ ಸುಮನ್ ನಗರ್ ಕರ್ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ಕೊಡುವ ಮೂಲಕ ಚಿತ್ರ ತಂಡಕ್ಕೆ ಶುಭಹಾರೈಸಿದ್ರು. ಅಲ್ಲದೆ ಚಿತ್ರದ ಟ್ಯಾಗ್ ಲೈನ್ ನನಗೆ ತುಂಬಾ ಇಷ್ಟವಾಯಿತು ಎಂದು ಹೊಸ ತಂಡದ ಬೆನ್ನು ತಟ್ಟಿದ್ರು. ಗ್ರಂಥಾಲಯ ಚಿತ್ರದ ಕಥೆಗಾಗಿ ನಿರ್ದೇಶಕ ಸಲ್ಮಾನ್ ಸನ್ನಿ ಸತತ ನಾಲ್ಕು ವರ್ಷಗಳ ಶ್ರಮಹಾಕಿದ್ದು, ಕೆಲವು ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ಈ ಚಿತ್ರದ ಕಥೆ ರೆಡಿ ಮಾಡಿದ್ದಾರೆ. ಚಿತ್ರಕಥೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗಲಿದೆ. ಅಲ್ಲದೆ ಗ್ರಂಥಾಲಯ ಚಿತ್ರ ಪಕ್ಕಾ ರೌಡಿಸಂ ಬೇಸ್ ಕಮರ್ಷಿಯಲ್ ಚಿತ್ರ ಎಂದು ನಿರ್ದೇಶಕ ಸಲ್ಮಾನ್ ಸನ್ನಿ ಹೇಳಿದರು.
ಗ್ರಂಥಾಲಯದಲ್ಲಿ ನಾಯಕನಾಗಿ ಕಿರುತೆರೆ ನಟ ವಿಕಾಶ್ ಶೆಟ್ಟಿ ನಟಿಸ್ತಿದ್ದು, ರೌಡಿಸಂಗೆ ಎಂಟ್ರಿ ಕೊಟ್ಟ ಯುವಕನನ್ನು ಸಮಾಜ ಯಾವ ರೀತಿ ನೋಡುತ್ತೆ.ಅಲ್ಲದೆ ಅತನ ಬದಲಾವಣೆಯನ್ನು ಸಮಾಜ ಒಪ್ಪಿಕೊಳ್ಳುತ್ತಾ ಇಲ್ಲವಾ ಎಂಬ ಕಾನ್ಸೆಪ್ಟ್ನಲ್ಲಿ ರೌಡಿ ಪಾತ್ರದಲ್ಲಿ ನಾನು ಕಾಣಿಸ್ತಿದ್ದೀನಿ ಎಂದು ವಿಕಾಸ್ ತಮ್ಮ ಪಾತ್ರದ ಪರಿಚಯ ಮಾಡಿಕೊಂಡ್ರು. ಅಲ್ಲದೆ ಚಿತ್ರದಲ್ಲಿ ನಾಯಕಿಯಾಗಿ ಮಂಗಳೂರಿನ ಬೆಡಗಿ ಶ್ವೇತಾ ಧಾರವಾಡ ನಟಿಸ್ತಿದ್ದಾರೆ. ವಿಶೇಷ ಅಂದ್ರೆ ಲ್ಯಾಬ್ ಟೆಕ್ನಿಷಿಯನ್ಸ್ ಆಗಿ ಕೆಲಸ ಮಾಡುವ ಶ್ವೇತಾ ಈ ಚಿತ್ರದಲ್ಲಿ ಲೀಡ್ ರೋಲ್ ಪ್ಲೇ ಮಾಡ್ತಿದ್ದು, ಇದಕ್ಕೂ ಮುನ್ನ ಲೈಟಾಗಿ ಲವ್ ಆಗಿದೆ ಹಾಗೂ ರಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರ ತಂಡ ಪ್ರೀ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಮಾಡಿಕೊಂಡಿದ್ದು ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿಕೊಂಡಿದೆ.