ETV Bharat / sitara

ಕನ್ನಡ ಚಿತ್ರರಂಗದ ನೆಚ್ಚಿನ ಮೀಟಿಂಗ್ ತಾಣ ಗ್ರೀನ್​​ಹೌಸ್​ ಇನ್ನು ನೆನಪು ಮಾತ್ರ

ಎಷ್ಟೋ ವರ್ಷಗಳಿಂದ ಚಿತ್ರರಂಗದವರ ಮೆಚ್ಚಿನ ತಾಣವಾಗಿದ್ದ ಗಾಂಧಿನಗರದ ಗ್ರೀನ್​​ಹೌಸ್​​ ಇನ್ನು ನೆನಪು ಮಾತ್ರ. ಈ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದವರು ಇದರ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಗ್ರೀನ್​​ಹೌಸ್​
author img

By

Published : Jul 31, 2019, 1:46 PM IST

ಕಳೆದ 30 ವರ್ಷಗಳಿಂದ ಸಿನಿಮಾ ಪತ್ರಿಕಾಗೋಷ್ಠಿಗಳಿಗೆ ಹಾಗೂ ಸಮಾರಂಭಗಳಿಗೆ ಸಾಕ್ಷಿಯಾಗಿದ್ದ ಗ್ರೀನ್​​ಹೌಸ್​​​​​​​​​​​​​​​​ ಇಂದು ಮುಗಿದ ಅಧ್ಯಾಯವಾಗಿದೆ. ಈ ಸ್ಥಳ ಗಾಂಧಿನಗರದ ತ್ರಿಭುವನ್ ಹಾಗೂ ಕೈಲಾಶ್ ಚಿತ್ರಮಂದಿರದ ಪಕ್ಕದ ಓಣಿಯಲ್ಲಿತ್ತು.

vasu
ವಾಸು

ಡಾ. ರಾಜ್​​​​​ಕುಮಾರ್ ಸಂಬಂಧಿಗಳಾದ ಶ್ರೀ ವಾಸು ಹಾಗೂ ಸಹೋದರರು ನಡೆಸಿಕೊಂಡು ಬಂದಿದ್ದ ಈ ಗ್ರೀನ್​​ಹೌಸ್ ಉದ್ಘಾಟನೆ ಮಾಡಿದ್ದೇ ಡಾ. ರಾಜ್​​​​​​​​​​​​​​​​​​ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್. ಆರ್ಥಿಕ ಹೊಡೆತವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಬೇರೊಂದು ಸ್ಥಳದಲ್ಲಿ ‘ಗ್ರೀನ್​​ಹೌಸ್‘​ ಹೆಸರಿನಲ್ಲೇ ಮತ್ತೊಂದು ರೆಸ್ಟೋರೆಂಟ್ ತೆರೆಯಬೇಕು ಎಂಬುದು ವಾಸು ಅವರ ಆಸೆಯಂತೆ. ಗ್ರೀನ್ ಹೌಸ್ ಸಹೋದರರು ಎಂದೇ ಕರೆಸಿಕೊಳ್ಳುವ ವಾಸು, ರಾಮು, ಉಮೇಶ್, ಗೋವಿಂದರಾಜ್ ಹಾಗೂ ಲಿಂಗರಾಜ್ ಈ ಬಾರ್ ಹಾಗೂ ರೆಸ್ಟೋರೆಂಟ್​​​ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿದ್ದಾರೆ. ಗ್ರೀನ್​​ಹೌಸ್​​​ನ ಕೆಳ ಅಂತಸ್ಥಿನ ಸ್ಥಳವೇ ಚಿತ್ರರಂಗದ ವ್ಯಕ್ತಿಗಳ ಜನಪ್ರಿಯ ಸ್ಥಳ. 2015 ನವೆಂಬರ್ ತಿಂಗಳಿನಲ್ಲಿ ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಂಡಿತ್ತು.

sudhendra venkatesh
ಸುಧೀಂದ್ರ ವೆಂಕಟೇಶ್

2015 ರಲ್ಲೇ ಸುಮಾರು 1,500 ಸಿನಿಮಾ ಪತ್ರಿಕಾಗೋಷ್ಠಿಗಳು ಈ ಗ್ರೀನ್​​ಹೌಸ್​​ನಲ್ಲಿ ನಡೆದಿತ್ತು. ಕೇವಲ ಪತ್ರಿಕಾಗೋಷ್ಠಿ ಮಾತ್ರವಲ್ಲದೇ ಆಡಿಯೋ ಬಿಡುಗಡೆ, ಟೀಸರ್, ಟ್ರೇಲರ್ ಬಿಡುಗಡೆ, ಕಾರ್ಯಾಗಾರ, ‘ಮುಂಗಾರು ಮಳೆ' ಯಂತ ಯಶಸ್ಸು ಕಂಡ ಸಿನಿಮಾ ಮೀಟಿಂಗ್ ಹಾಗೂ ನೂರಾರು ಕಲಾವಿದರು ಈ ಗ್ರೀನ್​​​​​​​​​​ಹೌಸ್​​​ಗೆ ಬಂದು ತಮ್ಮನ್ನು ಪರಿಚಯ ಮಾಡಿಕೊಂಡಿರುವ ಉದಾಹರಣೆ ಇದೆ. ಇಂತಹ ಹಸಿರು ವಾತಾವರಣದಲ್ಲಿ ಕಾಲ ಕಳೆಯಲು ಹಾಗೂ ಕಾರ್ಯಕ್ರಮ ನಡೆಸಲು ಈ ಗ್ರೀನ್​ಹೌಸ್ ತವರು ಮನೆಯಿದ್ದಂತೆ ಎಂದು ಎಷ್ಟೋ ಕಲಾವಿದರು ಹೇಳಿದ್ದುಂಟು. ಈ ಸ್ಥಳದಲ್ಲಿ ಹೆಚ್ಚು ಸುದ್ದಿಗೋಷ್ಠಿ ನಡೆಸಿದ್ದು, ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ. ಈ ಸ್ಥಳ ಈಗ ಮುಚ್ಚುತ್ತಿರುವುದು ನೋವಿನ ಸಂಗತಿ ಎಂದು ಅವರೂ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಮೀಟಿಂಗ್ ತಾಣ ಗ್ರೀನ್ ಹೌಸ್ ಮುಗಿದ ಅಧ್ಯಾಯ

ಕಳೆದ 30 ವರ್ಷಗಳಿಂದ ಬಹಳ ಜನಪ್ರಿಯ ಸ್ಥಳ ಸಿನಿಮಾ ಪತ್ರಿಕಾ ಘೋಷ್ಟಿಗಳಿಗೆ ಹಾಗೂ ಸಮಾರಂಭಗಳಿಗೆ (ಗಾಂಧಿನಗರದಲ್ಲಿ ತ್ರಿಭುವಣ್ ಹಾಗೂ ಕೈಲಾಷ್ ಚಿತ್ರಮಂದಿರದ ಪಕ್ಕದ ಓಣಿ ಹಿಂದೆ ಇರುವ ಸ್ಥಳ) ಗ್ರೀನ್ ಹೌಸ್ ಸಾಕ್ಷಿ ಆಗಿತ್ತು.

ಈಗ ಅದು ಮುಗಿದ ಅಧ್ಯಾಯ. ಡಾ ರಾಜಕುಮಾರ್ ಅವರ ಸಂಬಂದಿಕರು ಶ್ರೀ ವಾಸು ಹಾಗೂ ಸಹೋದರರು ನಡೆಸಿಕೊಂಡು ಬಂದಿದ್ದ ಈ ಗ್ರೀನ್ ಹೌಸ್ ಉಧ್ಘಟನೆ ಮಾಡಿದ್ದೆ ಡಾ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್. ಆರ್ಥಿಕ ಹೊಡತೆ ಈ ನಿರ್ಧಾರಕ್ಕೆ ಕಾರಣ ಎನ್ನುವ ಗ್ರೀನ್ ಹೌಸ್ ವಾಸು ಅವರ ಮನಸಿನಲ್ಲಿ ಹೊಸ ಸ್ಥಳದಲ್ಲಿ ಗ್ರೀನ್ ಹೌಸ್ ಬ್ರಾಂಡ್ ಅನ್ನು ಇಟ್ಟುಕೊಂಡು ಮತ್ತೆ ಸ್ಥಾಪನೆ ಮಾಡಬೇಕು ಅಂತ ಆಸೆ ಇದೆ. ಗ್ರೀನ್ ಹೌಸ್ ಸಹೋದರರು ವಾಸು, ರಾಮು, ಉಮೇಶ್, ಗೋವಿಂದರಾಜ್ ಹಾಗೂ ಲಿಂಗರಾಜ್ ನಡೆಸುತ್ತಿದ್ದ ಈ ಬಾರ್ ಅಂಡ್ ರೆಸ್ಟೌರೆಂಟ್ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿದ್ದಾರೆ. ಗ್ರೀನ್ ಹೌಸ್ ಕೆಲ ಅಂತಸ್ತಿನ ಸ್ಥಳವೆ ಚಿತ್ರ ರಂಗದ ವ್ಯಕ್ತಿಗಳ ಜನಪ್ರಿಯ ಆದ ಸ್ಥಳ. 2015 ನವೆಂಬರ್ ತಿಂಗಳಿನಲ್ಲಿ ಸಿಲ್ವರ್ ಜುಬಿಲೀ ಆಚರಿಸಿಕೊಂಡಿತ್ತು ಈ ಗ್ರೀನ್ ಹೌಸ್.

2015 ರಲ್ಲಿ 1500 ಸಿನಿಮಾ ಪತ್ರಿಕಾ ಘೋಷ್ಟಿಗಳು ಇಲ್ಲಿ ನಡೆದಿತ್ತು. ಕೇವಲ ಪತ್ರಿಕಾ ಘೋಷ್ಟಿ ಅಲ್ಲದೆ, ಧ್ವನಿ ಸಾಂದ್ರಿಕೆ ಬಿಡುಗಡೆ, ಟೀಸರ್, ಟ್ರೈಲರ್ ಬಿಡುಗಡೆ, ಕಾರ್ಯಾಗಾರ, ಮುಂಗಾರು ಮಳೆ ಅಂತಹ ಸಿನಿಮಾ ಯಶಸ್ಸಿನ ಮೀಟಿಂಗ್, ನೂರಾರು ಕಲಾವಿದರು ಈ ಗ್ರೀನ್ ಹೌಸ್ ಬಂದು ಪರಿಚಯ ಮಾಡಿಕೊಂಡಿರುವುದು ಇದೆ.

ಈ ಗ್ರೀನ್ ಹೌಸ್ ಆತಿಥ್ಯ ಒಂದು ಸಮಯದಲ್ಲಿ ತವರು ಮನೆ ಅಂತ ಕೆಲವರು ಕರೆದರು ಇದು ಬೆಸ್ಟ್ ಜಾಗ ಹಸಿರು ವಾತಾವರಣದಲ್ಲಿ ಕಾಲ ಕಳೆಯಲು ಹಾಗೂ ಕಾರ್ಯಕ್ರಮ ನಡೆಸಲು ಎಂದು ಹೇಳಿದವರು ಇದ್ದಾರೆ.

ಗ್ರೀನ್ ಹೌಸ್ ಅಖಾಡದಲ್ಲಿ ಬಹುತೇಕ ಪತ್ರಿಕಾ ಘೋಷ್ಟಿ ನಡೆಸಿದ್ದು ಪ್ರಚಾರಕರ್ತ ಆದ ಡಿ ಜಿ ವೆಂಕಟೇಶ್ ಅಲಿಯಾಸ್ ಸುಧೀಂದ್ರ ವೆಂಕಟೇಶ್ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ. ನಮಗಂತೂ ಗ್ರೀನ್ ಹೌಸ್ ಕ್ಲೋಸ್ ಆಗಿರುವುದರಿಂದ ಬಹಳ ನೋವಾಗಿದೆ. ಇದು ಹೇಳಿ ಮಾಡಿಸಿದ ಜಾಗ ಅಂತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.