ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣ ಸ್ವೀಕರಿಸಿದ್ದಾರೆ. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಣ್ಯರ ಜೊತೆ ಕುಳಿತಿದ್ದ ಅಮೆರಿಕ ಸೆನೆಟರ್ ಬರ್ನಿ ಸ್ಯಾಂಡರ್ಸ್ ಈಗ ವಿಶ್ವಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರು ಭಾರತಕ್ಕೂ ಬಂದು ಗಣ್ಯರನ್ನು ಭೇಟಿ ಮಾಡಿ ಅವರೊಂದಿಗೆ ಫೋಟೋ ಕೂಡಾ ತೆಗೆಸಿಕೊಳ್ಳುತ್ತಿದ್ದಾರೆ.
![Bernie sanders](https://etvbharatimages.akamaized.net/etvbharat/prod-images/141091030_10158954160371597_415500681554106767_n_2801newsroom_1611824019_830.jpg)
ಕರ್ನಾಟಕಕ್ಕೆ ಬಂದು ಸಂಸದೆ ಸುಮಲತಾ ಅಂಬರೀಶ್, ನಟಿ ಮೇಘನಾ ಗಾಂವ್ಕರ್ ಇಬ್ಬರನ್ನೂ ಭೇಟಿ ಮಾಡಿ ವಿದ್ಯಾರ್ಥಿಭವನಕ್ಕೆ ಹೋಗಿ ದೋಸೆ ತಿಂದು ಬಂದಿದ್ದಾರೆ. ಬಾಲಿವುಡ್ ನಟರಾದ ಸಿದ್ದಾರ್ಥ್ ಮಲ್ಹೋತ್ರ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಹೋಟೆಲ್, ಸಿನಿಮಾ ಥಿಯೇಟರ್, ರಸ್ತೆ ಬದಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ. ಅಷ್ಟೇ ಅಲ್ಲ, ಉಲ್ಲನ್ನಿಂದ ಮಾಡಿದ ಬರ್ನಿ ಸ್ಯಾಂಡರ್ಸ್ ಗೊಂಬೆಗಳು ಕೂಡಾ ಸೇಲ್ ಆಗುತ್ತಿದೆ.
![Bernie sanders](https://etvbharatimages.akamaized.net/etvbharat/prod-images/10409921_meg.jpg)
![Bernie sanders](https://etvbharatimages.akamaized.net/etvbharat/prod-images/142647581_2859212844354944_8516029318959371795_n_2801newsroom_1611824019_55.jpg)
ಇದನ್ನೂ ಓದಿ: 'ಬೆಲ್ ಬಾಟಮ್-2' ಚಿತ್ರದ ಬಗ್ಗೆ ನಿರ್ದೇಶಕ ಜಯತೀರ್ಥ ಹೇಳಿದ ಮಾತಿದು
ಈ ವಿಚಾರ ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಅಸಲಿಗೆ ಇದೆಲ್ಲಾ ಎಡಿಟೆಡ್ ಫೋಟೋಗಳು. ಪ್ರಮಾಣ ವಚನ ಸಮಾರಂಭದಲ್ಲಿ ವಿಂಟರ್ ಕೋಟ್, ಮಾಸ್ಕ್, ಉಲ್ಲನ್ ಗ್ಲೌಸ್ ಧರಿಸಿ ಚೇರ್ ಮೇಲೆ ಕುಳಿತಿದ್ದ ಬರ್ನಿ ಸ್ಯಾಂಡರ್ಸ್ ಅವರನ್ನು ನೋಡಿ ಕೆಲವರಿಗೆ ಏನನ್ನಿಸಿತೋ ಗೊತ್ತಿಲ್ಲ. ಅವರ ಫೋಟೋವನ್ನು ಎಲ್ಲೆಂದರಲ್ಲಿ ಅಂಟಿಸುತ್ತಿದ್ದಾರೆ. ಸುಮಲತಾ ಜೊತೆಗೆ ಇವರ ಫೋಟೋ ನೋಡಿದ ಹಲವರು "ಸುಮಲತಾ ಸಂಸದೆ ಬಹುಶ: ಅವರನ್ನು ಭೇಟಿ ಆಗಿದ್ದರೂ ಆಗಿರಬಹುದು. ಆದರೆ ಮೇಘನಾ ಗಾಂವ್ಕರ್ ಅವರನ್ನು ಭೇಟಿ ಆಗಲು ಕಾರಣ ಏನು..?" ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ವಿಚಾರ ತಿಳಿದು ಈಗ ಸುಮ್ಮನಾಗಿದ್ದಾರೆ.
![Bernie sanders](https://etvbharatimages.akamaized.net/etvbharat/prod-images/140726029_10158954252241597_6111961749393017870_n_2801newsroom_1611824019_333.jpg)