ETV Bharat / sitara

ಏಳು ವರ್ಷಗಳ ನಂತರ ಕೊನೆಗೂ ಕೂಡಿ ಬಂದು ಕಾಲ - Digant and Aindrita acting together

ಸುಮಾರು 7 ವರ್ಷಗಳ ನಂತರ ದಿಗಂತ್ ಹಾಗೂ ಐಂದ್ರಿತಾ ರೈ ಜೊತೆಯಾಗಿ ನಟಿಸುತ್ತಿದ್ದಾರೆ. ಮನಸಾರೆ, ಪಾರಿಜಾತ ಚಿತ್ರದ ನಂತರ ಜೋಡಿ ಅಡಿಕೆ ಬೆಳೆಗಾರನ ಕಥೆ ಹೊಂದಿರುವ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

Diganth and Aindrita
ದಿಗಂತ್, ಐಂದ್ರಿತಾ ರೈ
author img

By

Published : Jan 28, 2021, 9:30 AM IST

ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳ ಪೈಕಿ ದಿಗಂತ್ ಮತ್ತು ಐಂದ್ರಿತಾ ರೇ ಜೋಡಿ ಕೂಡಾ ಒಂದು. ಈ ಜೋಡಿ 'ಮನಸಾರೆ', 'ಪಾರಿಜಾತ' ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಚಿಗುರಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ನಂತರ ಇಬ್ಬರೂ ಯಾವ ಸಿನಿಮಾಗಳಲ್ಲಿಕೂಡಾ ಜೊತೆಯಾಗಿ ನಟಿಸಲು ಸಾಧ್ಯವಾಗಿರಲಿಲ್ಲ. ಆದರೆ 7 ವರ್ಷಗಳ ನಂತರ ಅದಕ್ಕೆ ಕಾಲ ಕೂಡಿ ಬಂದಿದೆ.

'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದ ಮೂಲಕ ಈ ಜೋಡಿ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಕುರಿತು ಮಾತನಾಡಿರುವ ದಿಗಂತ್, "ನಾನು ಮತ್ತು ಐಂದ್ರಿತಾ ಜೊತೆಯಾಗಿ ನಟಿಸದೆ ಸಾಕಷ್ಟು ಸಮವಾಗಿತ್ತು. ನೀವಿಬ್ಬರೂ ಜೊತೆಯಾಗಿ ನಟಿಸಬೇಕು ಅಂತ ಎಲ್ಲರೂ ಹೇಳುತ್ತಲೇ ಇದ್ದರು. ನಾವು ಕೂಡಾ ಹಲವು ಕಥೆಗಳನ್ನು ಕೇಳಿದ್ದೆವು. ಆದರೆ, ಯಾಕೋ ಸೆಟ್ ಆಗಿರಲಿಲ್ಲ. ಈ ಚಿತ್ರದ ಕಥೆ ಕೇಳಿದಾಗ, ಅದರಲ್ಲಿನ ಒಂದು ಪಾತ್ರ ಆಕೆಗೆ ಪಕ್ಕಾ ಸೂಟ್ ಆಗುತ್ತದೆ ಎಂದೆನಿಸಿತು. ಹಾಗೆಯೇ ನಾವಿಬ್ಬರೂ ಜೊತೆಯಾಗಿ ನಟಿಸಿದರೆ ಇನ್ನೂ ಚೆನ್ನಾಗಿರುತ್ತದೆ ಎಂದು ಐಂದ್ರಿತಾಗೆ ಹೇಳಿದೆ. ಅವಳೂ ಒಪ್ಪಿಕೊಂಡು ಈ ಚಿತ್ರದಲ್ಲಿ ನಟಿಸಿದಳು. ಈ ಚಿತ್ರದಲ್ಲಿ ನಾನು ಮಲೆನಾಡಿನ ಹವ್ಯಕ ಮಾಣಿಯಾಗಿ ನಟಿಸಿದರೆ, ಅವಳು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ" ಎಂದು ವಿವರಿಸುತ್ತಾರೆ ದಿಗಂತ್.

ಇದನ್ನೂ ಓದಿ: ಕನ್ನಡದ ಜೊತೆ ತೆಲುಗಿನಲ್ಲೂ ಅಬ್ಬರಿಸಲಿದ್ದಾನೆ ರಾಬರ್ಟ್!

'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರೀಕರಣ ಮುಗಿದಿದ್ದು, ಪತ್ರಕರ್ತ ಕಂ ನಿರ್ದೇಶಕ ವಿನಾಯಕ ಕೊಡ್ಸಾರ ಈ ಸಿನಿಮಾವನ್ನು ಕೇವಲ 20 ದಿನಗಳಲ್ಲಿ ಮಲೆನಾಡು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಇದು ಅಡಿಗೆ ಬೆಳೆಗಾರ ಮತ್ತು ಗೊಬ್ಬರದ ಅಂಗಡಿಯ ಮಾಲೀಕನ ಕಥೆಯಂತೆ. ಚಿತ್ರವನ್ನು ಅವರು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕೊನೆಯ 15 ನಿಮಿಷ ಬಿಟ್ಟರೆ, ಮಿಕ್ಕಂತೆ ಇಡೀ ಚಿತ್ರ ತಮಾಷೆಯಾಗಿ ಸಾಗುತ್ತದೆ ಎನ್ನಲಾಗಿದೆ. ಚಿತ್ರದಲ್ಲಿ ದಿಗಂತ್ ಮತ್ತು ಐಂದ್ರಿತಾ ಜೊತೆಗೆ 'ಕನ್ನಡತಿ' ಖ್ಯಾತಿಯ ರಂಜನಿ ರಾಘವನ್ ಕೂಡಾ ನಟಿಸಿದ್ದಾರೆ. ಇವರೊಂದಿಗೆ ಉಮಾಶ್ರೀ, ರವಿಕಿರಣ್, ಕಾಸರಗೋಡು ಚಿನ್ನ ಸೇರಿದಂತೆ ಹಲವರು ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.