ETV Bharat / sitara

ಅದಿತಿ ಸಾಗರ್​​​​​​ ರ್‍ಯಾಪ್ ಹಾಡು ಕಲಿಯೋಕೆ ಸ್ಫೂರ್ತಿ ಯಾರು ಗೊತ್ತಾ...? - Playback singer Aditi sagar

ಕಲಾನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಈಗ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅದಿತಿ ಹಾಡಿರುವ ರ್‍ಯಾಂಬೋ-2 ಚಿತ್ರದ ಧಮ್ ಮಾರೋ ಧಮ್... 'ಫ್ರೆಂಚ್​​​ ಬಿರಿಯಾನಿ' ಚಿತ್ರದ ಬೆಂಗಳೂರು ರ್‍ಯಾಪ್ ಸಾಂಗ್ ಬಹಳ ಫೇಮಸ್ ಆಗಿದೆ. ಅದಿತಿ ರ್‍ಯಾಪ್ ಕಲಿಯಲು ಆಕೆಯ ಅಣ್ಣ ಸೂರ್ಯ ಸ್ಫೂರ್ತಿಯಂತೆ.

Adithi sagar
ಅದಿತಿ ಸಾಗರ್​​​​​​
author img

By

Published : Mar 1, 2021, 7:41 PM IST

ತಂದೆ ತಾಯಿ ಯಾವ ಕ್ಷೇತ್ರದಲ್ಲಿರುತ್ತಾರೋ ಮಕ್ಕಳು ಕೂಡಾ ಅದೇ ಕ್ಷೇತ್ರಕ್ಕೆ ಬರುವುದು ಸಾಮಾನ್ಯ. ಸಿನಿಮಾರಂಗ ಕೂಡಾ ಇದಕ್ಕೆ ಹೊರತಾಗಿಲ್ಲ. ಪೋಷಕರಂತೆ ಮಕ್ಕಳು ಕೂಡಾ ಆ್ಯಕ್ಟಿಂಗ್, ಸಂಗೀತ ನಿರ್ದೇಶನ, ಹಿನ್ನೆಲೆ ಗಾಯನವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ಸು ಕೂಡಾ ಗಳಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್.

Adithi sagar
ಅರುಣ್ ಸಾಗರ್ ಕುಟುಂಬ

ಅರುಣ್ ಸಾಗರ್ ಕಲಾ ನಿರ್ದೇಶಕ, ನಟನಾಗಿ ಹೆಸರು ಮಾಡಿದ್ದರೆ ಅವರ ಪುತ್ರಿ ಅದಿತಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅದಿತಿಗೆ ಬಾಲ್ಯದಿಂದಲೂ ಸಂಗೀತ ಎಂದರೆ ಬಹಳ ಇಷ್ಟ. ಜೊತೆಗೆ ಆಕೆ ಬಿ.ವಿ. ಕಾರಂತ್​ ಅವರ ದೊಡ್ಡ ಅಭಿಮಾನಿ. ಬಿ.ವಿ. ಕಾರಂತರ ಹುಟ್ಟುಹಬ್ಬದಂದು ಅದಿತಿ ಹಾಡಿದ್ದ ಪುರಂದರ ದಾಸರ ಆಚಾರವಿಲ್ಲದ ನಾಲಿಗೆ...ಹಾಡನ್ನು ಕೇಳಿದ್ದ ನಿರ್ದೇಶಕ ತರುಣ್ ಸುಧೀರ್​ ಆಕೆಯನ್ನು ಅರ್ಜುನ್ ಜನ್ಯ ಅವರಿಗೆ ಪರಿಚಯಿಸುತ್ತಾರೆ. ಇದರಿಂದ ಅದಿತಿಗೆ ರ್‍ಯಾಂಬೋ-2 ಚಿತ್ರದ ಧಮ್ ಮಾರೋ ಧಮ್... ಹಾಡು ಹಾಡಲು ಅವಕಾಶ ದೊರೆಯಿತು. ಇದಾದ ನಂತರ ಅದಿತಿ ಕಥಾ ಸಂಗಮ, ಕವಲುದಾರಿ, ಸಂಹಾರಿಣಿ, ಫ್ರೆಂಚ್ ಬಿರಿಯಾನಿ ಸೇರಿ ಸುಮಾರು 17 ಸಿನಿಮಾಗಳಲ್ಲಿ ಹಾಡಿದ್ದಾರೆ.

Adithi sagar
ಅದಿತಿ ಸಾಗರ್

ಇದನ್ನೂ ಓದಿ: 'ಏಕ್ ವಿಲನ್ ರಿಟರ್ನ್ಸ್' ಶೂಟಿಂಗ್​​ ಆರಂಭ: ಮಾಹಿತಿ ಹಂಚಿಕೊಂಡ ದಿಶಾ ಪಟಾನಿ

ಕಳೆದ ವರ್ಷ ಬಿಡುಗಡೆ ಆದ 'ಫ್ರೆಂಚ್​​​ ಬಿರಿಯಾನಿ' ಚಿತ್ರದಲ್ಲಿ ಬೆಂಗಳೂರಿನ ಬಗ್ಗೆ ಅದಿತಿ ಹಾಡಿರುವ ರ್‍ಯಾಪ್ ಹಾಡು ಕೂಡಾ ಬಹಳ ಫೇಮಸ್ ಆಗಿದೆ. ಅದಿತಿ ರ್‍ಯಾಪ್ ಸಾಂಗ್ ಹಾಡೋಕೆ ಅವರಿಗೆ ಸ್ಪೂರ್ತಿಯಾಗಿದ್ದು ಅವರ ಸಹೋದರ ಸೂರ್ಯ ಅವರಂತೆ. ಗಾಯನ ಹೊರತುಪಡಿಸಿ ಅದಿತಿಗೆ ನಟಿಯಾಗಬೇಕೆಂಬ ಆಸೆ ಕೂಡಾ ಇದೆಯಂತೆ. ಮುಂದಿನ ದಿನಗಳಲ್ಲಿ ಅದಿತಿ ಆ್ಯಕ್ಟಿಂಗ್ ಕಡೆ ಕೂಡಾ ಮುಖ ಮಾಡೋದ್ರಲ್ಲಿ ನೋ ಡೌಟ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.