ETV Bharat / sitara

ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದ ಅಲ್ಲು ಸೀರಿಶ್ - ಪುನೀತ್​ ರಾಜ್​ಕುಮಾರ್​ ಮನೆಗೆ ಅಲ್ಲು ಸೀರಿಶ್ ಭೇಟಿ

ಸದಾಶಿವನಗರದ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಬಂದ ತೆಲುಗು ನಟ ಅಲ್ಲು ಸೀರಿಶ್, ಪುನೀತ್​ ಪತ್ನಿ ಅಶ್ವಿನಿ ಹಾಗೂ ರಾಜ್‌ ಕುಟುಂಬದ ಸದಸ್ಯರ ಜತೆ ಒಂದು ಗಂಟೆ ಕಾಲ ಸಮಯ ಕಳೆದು, ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ..

telugu actor allu seerish
ತೆಲುಗು ನಟ ಅಲ್ಲು ಸೀರಿಶ್
author img

By

Published : Dec 1, 2021, 7:12 PM IST

ಕನ್ನಡ ಚಿತ್ರರಂಗದ ಯುವರತ್ನ ಹಾಗೂ ದೊಡ್ಮನೆ ಮಗ ಪುನೀತ್ ರಾಜ್‌ಕುಮಾರ್ ನಿಧನರಾಗಿ ಒಂದು ತಿಂಗಳು ಕಳೆದಿದೆ. ಬಹುಭಾಷಾ ಚಿತ್ರರಂಗದ ಗಣ್ಯರು ಪುನೀತ್ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ತೆಲುಗು ನಟ ಅಲ್ಲು ಸೀರಿಶ್ ಅವರು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಮನೆಗೆ ಅಲ್ಲು ಸೀರಿಶ್ ಭೇಟಿ.. ಅಶ್ವಿನಿಯವರಿಗೆ ಸಾಂತ್ವನ..

ಸದಾಶಿವನಗರದ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಬಂದ ಅಲ್ಲು ಸೀರಿಶ್, ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಹಾಗೂ ರಾಜ್ ಕುಮಾರ್ ಕುಟುಂಬದ ಜೊತೆ ಒಂದು ಗಂಟೆಗಳ ಕಾಲ ಸಮಯ ಕಳೆದು, ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಒಂದು ಗಂಟೆಗಳ ಕಾಲ ರಾಜ್ ಕುಟುಂಬದ ಜೊತೆ ಮಾತುಕತೆ ನಡೆಸಿದ ಅಲ್ಲು ಸೀರಿಶ್, ಈಗ ನಾನು ವೈಯಕ್ತಿಕವಾಗಿ ಮನೆಗೆ ಬಂದಿದ್ದೇನೆ. ಸಂತೋಷದ ವಿಚಾರವಾಗಿ ಮತ್ತೆ ಈ ಮನೆಗೆ ಬಂದಾಗ ನಿಮ್ಮೊಂದಿಗೆ ಮಾತನಾಡುತ್ತೇನೆಂದು ಮಾಧ್ಯಮದವರಿಗೆ ಹೇಳಿ ಹೋದರು.

ಅಣ್ಣ ಅಲ್ಲು ಅರ್ಜುನ್ ರೀತಿ ಪುನೀತ್ ರಾಜ್‌ಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಅಲ್ಲು ಸೀರಿಶ್, ಬೆಂಗಳೂರಿಗೆ ಬಂದಾಗ ಪುನೀತ್ ರಾಜ್‌ಕುಮಾರ್ ಅವ್ರನ್ನು ಭೇಟಿ ಮಾಡಿ ಹೋಗುತ್ತಿದ್ದರು.

ಕೆಲವು ತಿಂಗಳ ಹಿಂದೆ ಅಲ್ಲು ಸೀರಿಶ್ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಈ ವಿಷಯ ತಿಳಿದ ಪುನೀತ್ ರಾಜ್‌ಕುಮಾರ್, ಅಲ್ಲು ಸೀರಿಶ್ ಅವರ ಸಿನಿಮಾದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.