ETV Bharat / sitara

ಬಾಲಿವುಡ್​ಲ್ಲಿ ಬಿಗ್​ ಹಿಟ್​​...ಕನ್ನಡಕ್ಕೂ ರಿಮೇಕ್ ಆಗ್ತಿದೆಯಂತೆ 'ಅರ್ಜುನ್ ರೆಡ್ಡಿ' - ಕಬೀರ್ ಸಿಂಗ್

ಟಾಲಿವುಡ್​ನ ಬ್ಲಾಕ್​ ಬಸ್ಟರ್​ ಸಿನಿಮಾ 'ಅರ್ಜುನ್ ರೆಡ್ಡಿ' ಕನ್ನಡಕ್ಕೆ ರಿಮೇಕ್ ಆಗಲಿದೆಯಂತೆ. ಈಗಾಗಲೇ ಬಾಲಿವುಡ್​ಗೆ ರಿಮೇಕ್ ಆಗಿರುವ ಈ ಚಿತ್ರವನ್ನು ಕನ್ನಡಕ್ಕೆ ತರುವ ಪ್ಲ್ಯಾನ್ ಇದೆಯಂತೆ.

ಚಿತ್ರಕೃಪೆ: ಟ್ವಿಟರ್
author img

By

Published : Jun 28, 2019, 12:09 PM IST

ಹಾಗೇ ನೋಡಿದ್ರೆ ಈ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಲಿದೆ, ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್​ ಯಶ್ ಇಲ್ಲವೇ ಡಾಲಿ ಧನಂಜಯ್ ನಟಿಸಲಿದ್ದಾರೆ ಅನ್ನೋ ಮಾತುಗಳು ಕಳೆದ ವರ್ಷವೇ ಕೇಳಿ ಬಂದಿದ್ದವು. ನಿರ್ಮಾಪಕ ರಾಕ್​ ಲೈನ್​ ವೆಂಕಟೇಶ್ ಈ ಚಿತ್ರದ ರಿಮೇಕ್ ರೈಟ್ಸ್​ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ,ಈ ವಿಚಾರ ಅಲ್ಲಿಗೆ ನಿಂತು ಹೋಗಿತ್ತು. ಇದೀಗ ಮತ್ತೊಮ್ಮೆ ಅರ್ಜುನ್ ರೆಡ್ಡಿಯ ರಿಮೇಕ್ ಮಾತುಗಳು ಜೋರಾಗಿಯೇ ಹರಿದಾಡುತ್ತಿವೆ. ಸ್ಯಾಂಡಲ್​​ವುಡ್​ನ ಖ್ಯಾತ ನಿರ್ಮಾಪಕ ಎಸ್​​.ನಾರಾಯಣ ಅವರು ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಆದರೆ,ಕನ್ನಡದ ರಿಮೇಕ್​ನಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ರಿವೀಲ್ ಆಗಿಲ್ಲ.

ಕಳೆದ ವಾರ ಬಿಡುಗಡೆಯಾಗಿರುವ ಅರ್ಜುನ್ ರೆಡ್ಡಿ ಹಿಂದಿ ರಿಮೇಕ್ 'ಕಬೀರ್ ಸಿಂಗ್' ಯಶಸ್ಸು ಗಳಿಸಿದೆ. ಮೊದಲ ವಾರವೇ ₹100 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಇತ್ತ ತಮಿಳಿನಲ್ಲೂ ಆದಿತ್ಯಾ ವರ್ಮಾ ಹೆಸರಿನಲ್ಲಿ ಈ ಚಿತ್ರ ರಿಮೇಕ್ ಆಗುತ್ತಿದೆ.

ಸಂದೀಪ್​ ರೆಡ್ಡಿ ನಿರ್ದೇಶನದ ತೆಲುಗು ಚಿತ್ರ ಅರ್ಜುನ್​ ರೆಡ್ಡಿಯಲ್ಲಿ ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ನಟಿಸಿದ್ದರು. ಈ ಚಿತ್ರ ಗಡಿದಾಟಿಯೂ ಭಾರೀ ಗೆಲುವು ಪಡೆದಿತ್ತು. ವಿಜಯ್ ದೇವರಕೊಂಡಗೆ ದೊಡ್ಡ ಬ್ರೇಕ್ ನೀಡಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.