ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರ ಬಿಡುಗಡೆಗೂ ಮುನ್ನವೇ ಸಖತ್ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ ಬಾಲಿವುಡ್ನ ಮೂವರು ಪ್ರಮುಖ ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಕ್ಷಯ್, ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಸೂರ್ಯವಂಶಿ ಸಿನಿಮಾದಲ್ಲಿ ಕಾಣಿಸಿದ್ದಾರೆ. ಈ ಮೂವರು ನಟರು ಪೊಲೀಸ್ ಪಾತ್ರ ನಿಭಾಯಿಸಿರುವುದು ಮತ್ತೊಂದು ವಿಶೇಷ.
-
Team #Sooryavanshi at the Maharashtra Police International Marathon on this beautiful Sunday morning, a great initiative where the police doesn’t run after you but with you 😜 #AaRahiHaiPolice #MarathonMovement #RohitShetty @ajaydevgn pic.twitter.com/lE2KghYBND
— Akshay Kumar (@akshaykumar) February 9, 2020 " class="align-text-top noRightClick twitterSection" data="
">Team #Sooryavanshi at the Maharashtra Police International Marathon on this beautiful Sunday morning, a great initiative where the police doesn’t run after you but with you 😜 #AaRahiHaiPolice #MarathonMovement #RohitShetty @ajaydevgn pic.twitter.com/lE2KghYBND
— Akshay Kumar (@akshaykumar) February 9, 2020Team #Sooryavanshi at the Maharashtra Police International Marathon on this beautiful Sunday morning, a great initiative where the police doesn’t run after you but with you 😜 #AaRahiHaiPolice #MarathonMovement #RohitShetty @ajaydevgn pic.twitter.com/lE2KghYBND
— Akshay Kumar (@akshaykumar) February 9, 2020
ಈ ಸೂರ್ಯವಂಶಿ ತಂಡ ಇಂದು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪೊಲೀಸ್ ಮ್ಯಾರಥಾನ್ನಲ್ಲಿ ಭಾಗಿಯಾಗಿದೆ. ಈ ಬಗ್ಗೆ ನಟ ಅಕ್ಷಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವೊಂದನ್ನ ಶೇರ್ ಮಾಡಿ, ಭಾನುವಾರ ಬೆಳಗ್ಗೆ ಮಹಾರಾಷ್ಟ್ರದ ಅಂತಾರಾಷ್ಟ್ರೀಯ ಪೊಲೀಸ್ ಮ್ಯಾರಥಾನ್ನಲ್ಲಿ ಭಾಗಿಯಾದ ಕ್ಷಣಗಳು. ಪೊಲೀಸರು ನಿಮ್ಮ ಹಿಂದೆ ಓಡುವುದಿಲ್ಲ. ನಿಮ್ಮ ಜೊತೆಗೇ ಓಡುತ್ತಾರೆ ಎಂದು ಬರೆದು ಕಿಚಾಯಿಸುವ ಇಮೋಜಿ ಹಾಕಿದ್ದಾರೆ. ಫೋಟೋದಲ್ಲಿ ಅಕ್ಷಯ್, ಅಜಯ್, ರೋಹಿತ್ ಒಂದೇ ರೀತಿಯ ಟಿ-ಶರ್ಟ್ ಧರಿಸಿ ಅದರ ಮೇಲೆ 'ಆ ರಹೀ ಹೈ ಪೊಲೀಸ್' ಎಂದು ಬರೆಯಲಾಗಿದೆ.
ಸೂರ್ಯವಂಶಿ ಚಿತ್ರಕ್ಕೆ ರೋಹಿತ್ ಶೆಟ್ಟಿ ಮತ್ತು ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ರೋಹಿತ್ ಶೆಟ್ಟಿಯೇ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಕತ್ರಿನಾ ಕೈಫ್, ನೀನಾ ಗುಪ್ತಾ, ಗುಲ್ಶನ್, ಜಾಕಿ ಶ್ರಾಫ್ ಸೇರಿ ಹಲವು ಪ್ರಮುಖ ನಟ-ನಟಿಯರು ಆ್ಯಕ್ಟ್ ಮಾಡಿದ್ದಾರೆ. ಸಿನಿಮಾ ಇದೇ ಮಾರ್ಚ್ 27ಕ್ಕೆ ತೆರೆಗೆ ಬರಲಿದೆ.