ETV Bharat / sitara

ದಯವಿಟ್ಟು ನನಗೆ ಪೇಮೆಂಟ್ ಕೊಡಿ, ಸಂಭಾವನೆಗೆ ಬಿಗ್​ಬಾಸ್​ ಮಧುಮಿತಾ ಒತ್ತಾಯ - ಸ್ಪರ್ಧಿ ಮಧುಮಿತಾ

ಆತ್ಮಹತ್ಯೆಗೆ ಯತ್ನಿಸಿ ಬಿಗ್​ಬಾಸ್​ ಮನೆಯಿಂದ ಹೊರದಬ್ಬಿಸಿಕೊಂಡಿರುವ ಸ್ಪರ್ಧಿ ಮಧುಮಿತಾ, ಈಗ ತನ್ನ ಪೇಮೆಂಟ್ ನೀಡುವಂತೆ ಒತ್ತಾಯಿಸಿದ್ದಾರೆ.

madhumita
author img

By

Published : Aug 23, 2019, 5:13 PM IST

ತಮಿಳು ಬಿಗ್​ಬಾಸ್​ 3ನೇ ಸೀಸನ್​ ಸ್ಪರ್ಧಿಯಾಗಿದ್ದ ನಟಿ ಮಧುಮಿತಾ ಕಳೆದ ವಾರ ಮನೆಯಿಂದ ಹೊರಹಾಕಲ್ಪಟ್ಟಿದ್ದರು. ಕೆಲವು ಕಾರಣಗಳಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಈ ಸ್ಪರ್ಧಿಯನ್ನು ಬಿಗ್​ಬಾಸ್​ ಟೀಂ ಕಿಕ್​​ ಔಟ್ ಮಾಡಿತ್ತು. ಇದೀಗ ಅವರು ಬಾಕಿ ಇರುವ ತನ್ನ ಸಂಭಾವನೆ ಪಾವತಿಸುವಂತೆ ಬಿಗ್​ಬಾಸ್​​ಗೆ ಕೇಳಿಕೊಂಡಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ 42 ದಿನಗಳ ಕಾಲ ತಂಗಿದ್ದ ಮಧುಮಿತಾ ಈಗಾಗಲೇ ₹ 11,42,000 ಪಡೆದುಕೊಂಡಿದ್ದಾರಂತೆ. ಬಾಕಿ ಉಳಿದಿರುವ ಹಣವನ್ನು ನೀಡಿ ಎಂದು ಬಿಗ್​ಬಾಸ್​ ಶೋ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಗೆ ಒತ್ತಾಯಿಸಿದ್ದಾರೆ.

madhumita
ನಿರೂಪಕ ಕಮಲ್ ಹಾಸನ್ ಜತೆ ಸ್ಪರ್ಧಿ ಮಧುಮಿತಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಹಿನಿ, ಮಧುಮಿತಾ ಸಂಭಾವನೆ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದೆ. ಆದರೆ, ಇದನ್ನು ಅಲ್ಲಗಳೆದಿರುವ ಮಧುಮಿತಾ, ನಾನು ಕೇವಲ ಸಂಭಾವನೆ ಅಷ್ಟೆ ಕೇಳುತ್ತಿದ್ದೇನೆ ಎಂದಿದ್ದಾರೆ. ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಬಿಗ್​ಬಾಸ್ ನಿರೂಪಕ ಕಮಲ್ ಹಾಸನ್ ಅವರಿಗೂ ಕೇಳಿಕೊಂಡಿದ್ದಾರೆ ಮಧುಮಿತಾ.

Intro:Body:

ದಯವಿಟ್ಟು ನಂಗೆ ಪೇಮೆಂಟ್ ಕೊಡಿ..ಬಿಗ್​ಬಾಸ್​ ಸ್ಪರ್ಧಿ ಒತ್ತಾಯ  

ಮಧುಮಿತಾ 

ಆತ್ಮಹತ್ಯೆಗೆ ಯತ್ನಿಸಿ ಬಿಗ್​ಬಾಸ್​ ಮನೆಯಿಂದ ಹೊರದಬ್ಬಿಸಿಕೊಂಡಿರುವ ಸ್ಪರ್ಧಿ ಮಧುಮಿತಾ, ಈಗ ತನ್ನ ಪೇಮೆಂಟ್ ಮಾಡುವಂತೆ ಒತ್ತಾಯಿಸಿದ್ದಾರೆ. 

ತಮಿಳು ಬಿಗ್​ಬಾಸ್​ 3 ನೇ ಸೀಸನ್​ ಸ್ಪರ್ಧಿಯಾಗಿದ್ದ ನಟಿ ಮಧುಮಿತಾ ಕಳೆದ ವಾರ ಮನೆಯಿಂದ ಹೊರಹಾಕಲ್ಪಟ್ಟಿದ್ದರು. ಕೆಲವು ಕಾರಣಗಳಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಈ ಸ್ಪರ್ಧಿಯನ್ನು ಬಿಗ್​ಬಾಸ್​ ಟೀಂ ಕಿಕ್​​ಔಟ್ ಮಾಡಿತ್ತು. ಇದೀಗ ಅವರು ಬಾಕಿ ಇರುವ ತನ್ನ ಸಂಭಾವನೆ ಪಾವತಿಸುವಂತೆ ಬಿಗ್​ಬಾಸ್​​ಗೆ ಕೇಳಿಕೊಂಡಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲಿ 42 ದಿನಗಳ ಕಾಲ ತಂಗಿದ್ದ ಮಧುಮಿತಾ ಈಗಾಗಲೇ  ₹ 11,42,000 ಪಡೆದುಕೊಂಡಿದ್ದಾರಂತೆ. ಬಾಕಿ ಉಳಿದಿರುವ ಹಣವನ್ನು ನೀಡಿ ಎಂದು ಬಿಗ್​ಬಾಸ್​ ಶೋ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಗೆ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಹಿನಿ, ಮಧುಮಿತಾ ಸಂಭಾವನೆ ನೀಡದಿದ್ದರೆ ಆತ್ಮಹತ್ಯ ಮಾಡಿಕೊಳ್ಳುವುದಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದೆ. ಆದರೆ, ಇದನ್ನು ಅಲ್ಲಗಳೆದಿರುವ ಮಧುಮಿತಾ, ನಾನು ಕೇವಲ ಸಂಭಾವನೆ ಅಷ್ಟೆ ಕೇಳುತ್ತಿದ್ದೇನೆ ಎಂದಿದ್ದಾರೆ. ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಬಿಗ್​ಬಾಸ್ ನಿರೂಪಕ ಕಮಲ್ ಹಾಸನ್ ಅವರಿಗೂ ಕೇಳಿಕೊಂಡಿದ್ದಾರೆ ಮಧುಮಿತಾ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.