ಕನ್ನಡ ಸಿನಿಮಾಗಳು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ಮಟ್ಟಿಗೆ ತಯಾರಾಗುತ್ತಿವೆ. ಸ್ಯಾಂಡಲ್ವುಡ್ ಇದೀಗ ಟಾಕ್ ಆಫ್ ದಿ ಟೌನ್ ಎನಿಸಿದೆ ಎಂದರೆ ತಪ್ಪಾಗಲಾರದು.
ಇನ್ನು ಕಿಚ್ಚ ಸುದೀಪ್, ಧ್ರುವ ಸರ್ಜಾ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಕಳೆದ ಕೆಲವು ದಿನಗಳಿಂದ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದು, ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ನಡುವೆ ಶ್ರೀಮುರಳಿ ಬಿಡುವು ಮಾಡಿಕೊಂಡು ಟಾಲಿವುಡ್ ನಟರನ್ನು ಭೇಟಿ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಮಹೇಶ್ ಬಾಬು, ಸಾಯಿಕುಮಾರ್, ಸುನೀಲ್ ಶೆಟ್ಟಿ ಅವರನ್ನು ಮೀಟ್ ಮಾಡಿದ ರೋರಿಂಗ್ ಸ್ಟಾರ್, ಈಗ ತಮಿಳು ಸಿನಿಮಾ ನಟ ಅಜಿತ್ ಅವರನ್ನು ಭೇಟಿ ಮಾಡಿ ಅವರಿಗೆ 'ಭರಾಟೆ' ಸಿನಿಮಾ ಟೀಸರನ್ನು ಕೂಡ ತೋರಿಸಿದ್ದಾರೆ. ಅಜಿತ್ ಕೂಡಾ ಭರಾಟೆ ಟೀಸರನ್ನು ಮೆಚ್ಚಿರುವುದಲ್ಲದೆ ಈಗ ಬರುತ್ತಿರುವ ಕನ್ನಡ ಸಿನಿಮಾಗಳ ಕ್ವಾಲಿಟಿ ಬಗ್ಗೆ ಅಜಿತ್ ಮೆಚ್ಚುಗೆಯ ಮಾತುಗಳನ್ನು ಆಡಿರುವುದು ನಿಜಕ್ಕೂ ಸಂತೋಷದ ವಿಷಯ.