ಕೊರೊನಾ ಎಂಬ ಕಗ್ಗತ್ತಲಿನಿಂದ ಹೊರ ಬಂದು ಹೊಸ ಚೈತನ್ಯದ ಹೊಸ್ತಿಲಿಗೆ ಕನ್ನಡ ಚಿತ್ರರಂಗ ಕಾಲಿಡ್ತಿದೆ. ಸತತ ಏಳು ತಿಂಗಳಿನಿಂದ ಚಿತ್ರ ಪ್ರದರ್ಶನವಿಲ್ಲದೇ ಬಣಗುಡುತ್ತಿದ್ದ ಚಿತ್ರಮಂದಿರಗಳು ನಿಧಾನವಾಗಿ ತುಂಬುತ್ತಿವೆ. ಚಿತ್ರರಂಗದ ಎಲ್ಲ ಚಟುವಟಿಕೆಗಳು ಚುರುಕುಗೊಂಡಿರೋದು, ಸಿನಿಮಾ ನಿರ್ಮಾಪಕರು, ನಿರ್ದೇಶಕರು, ನಟ, ನಟಿಯರು ಹಾಗೂ ಸಿನಿಮಾ ತಂತ್ರಜ್ಞಾನರಿಗೆ ಸ್ವಲ್ಪ ಮಟ್ಟಿಗೆ ಸಂತಸ ತಂದಿದೆ.
![Tagaru Movie Re Release](https://etvbharatimages.akamaized.net/etvbharat/prod-images/kn-bng-03-shiva-rajkumar-tagaru-movie-rerelease-7204735_23102020170942_2310f_1603453182_821.jpg)
ಇದೀಗ ಚಿತ್ರಮಂದಿರಗಳಲ್ಲಿ ಹಳೆಯ ಸಿನಿಮಾಗಳ ಅಬ್ಬರ ಶುರುವಾಗಿದೆ. ಇದೇ ಹಿನ್ನೆಲೆಯಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಇಂದಿನಿಂದ ರೀ ರಿಲೀಸ್ ಆಗ್ತಾ ಇದೆ. 2018ರಲ್ಲಿ ಸೂಪರ್ ಹಿಟ್ ಸಿನಿಮಾ ಅಂತಾ ಕರೆಯಿಸಿಕೊಂಡ ಟಗರು ಚಿತ್ರವನ್ನ ನಿರ್ಮಾಪಕ ಕೆ ಪಿ ಶ್ರೀಕಾಂತ್ ರೀ ರಿಲೀಸ್ ಮಾಡಿದ್ದಾರೆ.
![Tagaru Movie Re Release](https://etvbharatimages.akamaized.net/etvbharat/prod-images/kn-bng-03-shiva-rajkumar-tagaru-movie-rerelease-7204735_23102020170942_2310f_1603453182_649.jpg)
ಮೈಸೂರು ರಸ್ತೆಯಲ್ಲಿರೋ ಸಿರಸಿ ಸರ್ಕಲ್ನ ಗೋಪಾಲನ್ ಸಿನಿಮಾಸ್ನಲ್ಲಿ ಟಗರು ಸಿನಿಮಾ ರೀ ರಿಲೀಸ್ ಆಗಿದೆ. ಹೀಗಾಗಿ ಗೋಪಾಲ್ ಸಿನಿಮಾಸ್ ಭಾನುವಾರ ಅಂದ್ರೆ 25ನೇ ತಾರೀಖು ಮಧ್ಯಾಹ್ನ 1.15ರ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಅಂದು ಸಿನಿಮಾ ನೋಡಲು ಸಲಗ ಚಿತ್ರದ ನಿರ್ದೇಶಕ, ನಾಯಕ ದುನಿಯಾ ವಿಜಯ್, ಟಗರು ನಿರ್ದೇಶಕರಾದ ಸೂರಿ, ಡಾಲಿ ಧನಂಜಯ, ವಸಿಷ್ಠ ಸಿಂಹ, ಮಾನ್ವಿತಾ ಕಾಮತ್ ಭಾಗಿಯಾಗ್ತಿದ್ದಾರೆ.