ETV Bharat / sitara

ಬಾಲಿವುಡ್​​ ಡ್ರಗ್​ ಕೇಸ್ : ಮತ್ತೆ ಮೂವರ ಬಂಧನ - ಸುಶಾಂತ್ ಸಿಂಗ್ ಸಾವು

ಬಾಲಿವುಡ್​​ ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ಅಧಿಕಾರಿಗಳು ಕರಣ್ ಸಂಜ್ನಾನಿ, ಸೆಲೆಬ್ರಿಟಿ ಮ್ಯಾನೇಜರ್ ರಹೀಲಾ ಫರ್ನೀಚರ್‌ವಾಲಾ, ಜಗದೀಪ್ ಸಿಂಗ್​ರನ್ನು ಬಂಧಿಸಿದ್ದಾರೆ.

ಬಾಲಿವುಡ್​​ ಡ್ರಗ್​ ಕೇಸ್​​ : ಮತ್ತೆ ಮೂವರ ಬಂಧನ

author img

By

Published : Feb 5, 2021, 8:21 PM IST

ಸುಶಾಂತ್ ಸಿಂಗ್ ಸಾವಿನ ಬಳಿಕ ಬೆಳಕಿಗೆ ಬಂದಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳು ಇದೀಗ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಾಗಿರುವ ಬ್ರಿಟಿಷ್ ನಾಗರಿಕ ಮತ್ತು ಉದ್ಯಮಿ ಆಗಿರುವ ಕರಣ್ ಸಂಜ್ನಾನಿ, ಸೆಲೆಬ್ರಿಟಿ ಮ್ಯಾನೇಜರ್ ರಹೀಲಾ ಫರ್ನೀಚರ್‌ವಾಲಾ ಇವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ಇದೀಗ ಜಗದೀಪ್ ಸಿಂಗ್ ಆನಂದ್ ಎಂಬಾತನನ್ನು ಬಂಧಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಕರಣ್ ಸಂಜ್ನಾನಿ ಮತ್ತು ರಹೀಲಾ ಫರ್ನೀಚರ್‌ವಾಲಾ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದರು. ಸದ್ಯ ಇವರನ್ನು ಸುಶಾಂತ್​ ಸಿಂಗ್​​ ಸಾವಿನ ಪ್ರಕರಣದ ವಿಚಾರಣೆಗೆ ಎನ್​ಸಿಬಿ ತನ್ನ ವಶಕ್ಕೆ ಪಡೆದಿದೆ.

ಇದೀಗ ಬಂಧಿಯಾಗಿರುವ ವ್ಯಕ್ತಿ ಜಗದೀಪ್ ಸಿಂಗ್. ಈ ಆರೋಪಿ ಈ ಹಿಂದೆಯೇ ಬಂಧನಕ್ಕೆ ಒಳಗಾಗಿದ್ದ ಕರಮ್‌ಜೀತ್ ಸಿಂಗ್​​ ಸಹೋದರ. ಡ್ರಗ್ಸ್ ವ್ಯವಹಾರದಲ್ಲಿ ಜಗದೀಪ್ ಸಿಂಗ್ ಪಾಲು ಇತ್ತು ಎನ್ನಲಾಗಿದೆ. ಈ ಮೂವರ ನಡುವೆ ಸಾಕಷ್ಟು ಹಣಕಾಸು ವ್ಯವಹಾರ ನಡೆದಿರುವುದನ್ನು ಎನ್‌ಸಿಬಿ ಪತ್ತೆ ಹಚ್ಚಿದೆ.

ಒಟ್ಟಾರೆ ಸುಶಾಂತ್​ ಸಾವಿನ ಪ್ರಕರಣದಲ್ಲಿ ಎನ್​ಸಿಬಿ ಅಧಿಕಾರಿಗಳು ಬರೋಬ್ಬರಿ 33 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಅಲ್ಲದೆ ಇದ್ರಲ್ಲಿ ಕೆಲವರಿಗೆ ಜಾಮೀನು ಕೂಡ ಸಿಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.