ತಮಿಳು ಖ್ಯಾತ ನಟ ಸೂರ್ಯ ನಟನೆಯಿಂದ ಮಾತ್ರವಲ್ಲ ತಮ್ಮ ನಡತೆಯಿಂದ ಕೂಡಾ ಒಳ್ಳೆಯ ಹೆಸರು ಸಂಪಾದಿಸಿದವರು. 'ಅಗರಮ್ ಫೌಂಡೇಶನ್' ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ.
ಸೂರ್ಯ ಸದ್ಯಕ್ಕೆ NGK (ನಂದ ಗೋಪಾಲನ್ ಕುಮಾರನ್) ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಿದ್ದು ಸಿನಿಮಾ ಈ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ. ಪೊಲಿಟಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾವನ್ನು ಸೆಲ್ವ ರಾಘವನ್ ನಿರ್ದೇಶಿಸಿದ್ದಾರೆ. ಸಿನಿಮಾ ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿ ಎಸ್.ಆರ್. ಪ್ರಭು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
- " class="align-text-top noRightClick twitterSection" data="">
ಇನ್ನು ಜನರಿಗೆ ಸಹಾಯ ಮಾಡುತ್ತಾ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸೂರ್ಯಗೆ ಅಭಿಮಾನಿಗಳು ಕೂಡಾ ಒಂದು ಡೊಡ್ಡ ಗಿಫ್ಟ್ ನೀಡಲು ಹೊರಟಿದ್ದಾರೆ. ತಿರುವಲ್ಲೂರ್ ಜಿಲ್ಲೆಯ ಕೆಲವು ಅಭಿಮಾನಿಗಳು ಸೂರ್ಯ ಅವರ 200 ಅಡಿಗೂ ಎತ್ತರವಾದ ಕಟೌಟ್ ಮಾಡಿಸಲು ಹೊರಟಿದ್ದಾರೆ. ಇಷ್ಟು ಎತ್ತರದ ಭಾರತದ ಯಾವ ಹೀರೋ ಕಟೌಟನ್ನು ಇದುವರೆಗೂ ನಿರ್ಮಿಸಿಲ್ಲ ಎನ್ನಲಾಗಿದೆ. ಇದಕ್ಕೂ ಮುನ್ನ 'ವಿಶ್ವಾಸಂ' ಸಿನಿಮಾಗಾಗಿ ಅಜಿತ್ ಅವರ 190 ಅಡಿ ಕಟೌಟನ್ನು ನಿರ್ಮಿಸಲಾಗಿತ್ತು. ಬಿಡುಗಡೆಗೂ ಮುನ್ನ NGK ಸಿನಿಮಾ ಸಾಕಷ್ಟು ವಿಶೇಷತೆಗಳಿಗೆ ಹೆಸರು ಮಾಡುತ್ತಿದೆ. ಇನ್ನು ಸಿನಿಮಾ ಬಿಡುಗಡೆಯಾದ ನಂತರ ಮತ್ತೆಷ್ಟು ದಾಖಲೆಗಳನ್ನು ಮಾಡಲಿದೆಯೋ ಕಾದು ನೋಡಬೇಕು.
ಸಿನಿಮಾದಲ್ಲಿ ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್ ಸೂರ್ಯಗೆ ನಾಯಕಿಯರಾಗಿ ನಟಿಸಿದ್ದಾರೆ. ರಿಲಾಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ.