ಇಂದು ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಸಿನಿ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾರೆ. ಇನ್ನು ಕೆಲವು ಸಿನಿಮಾ ನಟ-ನಟಿಯರು ತಾವು ಹಬ್ಬ ಸೆಲೆಬ್ರೇಟ್ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸೂಪರ್ ಸ್ಟಾರ್ ರಜನಿ ಕಾಂತ್ ಮನೆಯಲ್ಲೂ ದೀಪಾವಳಿ ಹಬ್ಬದ ಸಡಗರ ತುಂಬಿದೆ. ತಲೈವಾ ರಜನಿ ತಮ್ಮ ಮಗಳು, ಅಳಿಯ, ಮಡದಿ ಹಾಗೂ ಮೊಮ್ಮಗನ ಜೊತೆ ದೀಪಾವಳಿ ಆಚರಿಸಿದ್ದಾರೆ. ಪಟಾಕಿ ಹೊಡೆಯುತ್ತ, ಸುರ್ ಸುರ್ ಬತ್ತಿ ಹಚ್ಚಿ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ರಜನಿ ಕಾಂತ್ ಮಗಳು ಸೌಂದರ್ಯ ರಜನಿ ಕಾಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
![Superstar Rajinikanth celebrates Diwali with family](https://etvbharatimages.akamaized.net/etvbharat/prod-images/9544634_thumb.jpg)
![Superstar Rajinikanth celebrates Diwali with family](https://etvbharatimages.akamaized.net/etvbharat/prod-images/9544634_thumb2.jpg)
ರಜನಿ ಕಾಂತ್ ಕೊರೊನಾ ಬಂದ ಮೇಲಿಂದ ಯಾವುದೇ ಸಿನಿಮಾ ಕಾರ್ಯಗಳಲ್ಲಿ ತೊಡಗಿಕೊಂಡಿಲ್ಲ. ಕೊರೊನಾ ಲಾಕ್ಡೌನ್ ಮುಂಚಿತವಾಗಿ ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಕೊರೊನಾ ಲಾಕ್ಡೌನ್ ನಂತ್ರ ಚಿತ್ರೀಕರಣವನ್ನು ನಿಲ್ಲಿಸಿದ್ದು, ಮುಂದಿನ ವರ್ಷ ಮತ್ತೆ ಅಣ್ಣಾತೆ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ರಜಿನಿ ಈ ಹಿಂದೆ ದರ್ಬಾರ್ ಸಿನಿಮಾದಲ್ಲಿ ಕಾಣಿಕೊಂಡಿದ್ದರು.