ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹು ನಿರೀಕ್ಷಿತ 'ಉದ್ಘರ್ಷ' ಚಿತ್ರ ಇದೇ ತಿಂಗಳು 22ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಬಹು ಸಮಯದ ನಂತರ ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಮರಳಿರುವ ದೇಸಾಯಿ, ಈ ಬಾರಿ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಬಳಸಿಕೊಂಡಿದ್ದಾರೆ.
'ಉದ್ಘರ್ಷ' ಚಿತ್ರದ ನಾಲ್ಕೂ ಭಾಷೆಯ ಟ್ರೇಲರ್ ಕೂಡಾ ಸಖತ್ ಹಿಟ್ ಆಗಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಿಸಿವೆ. 'ಉದ್ಘರ್ಷ' ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು, ಇದೇ ಶುಕ್ರವಾರ ದಕ್ಷಿಣ ಭಾರತದಾದ್ಯಂತ ರಿಲೀಸ್ ಆಗಲಿದೆ. ಚಿತ್ರದಲ್ಲಿ ಬಹುಭಾಷಾ ತಾರೆಗಳ ದೊಡ್ಡ ತಂಡವೇ ಇದೆ. ನಾಯಕನಾಗಿ ಬಹುಭಾಷಾ ತಾರೆ, ಮಿಸ್ಟರ್ ವರ್ಲ್ಡ್ ಠಾಕೂರ್ ಅನೂಪ್ ಸಿಂಗ್ ಅಭಿನಯಿಸಿದ್ದಾರೆ. ಯಜಮಾನ ಚಿತ್ರದ ಖ್ಯಾತಿಯ ತಾನ್ಯಾ ಹೋಪ್, ಕಬಾಲಿ ಖ್ಯಾತಿಯ ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ.
![Udhgarsha](https://etvbharatimages.akamaized.net/etvbharat/images/collage_1903newsroom_00354_214.jpg)
ಚಿತ್ರದಲ್ಲಿ ಮೋಸ್ಟ್ ಸ್ಟೈಲಿಶ್ ವಿಲನ್ ಎಂದೇ ಖ್ಯಾತರಾಗಿರುವ ಕಬೀರ್ ದುಹಾನ್ ಸಿಂಗ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕನ್ನಡದವರೇ ಆದ ಕಿಶೋರ್, ವಂಶಿ ಕೃಷ್ಣ, ಶ್ರವಣ್ ರಾಘವೇಂದ್ರ ಮುಂತಾದ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಬಾಲಿವುಡ್ನ ಖ್ಯಾತ ಮ್ಯೂಸಿಕ್ ಕಂಪೋಸರ್ ಹಾಗೂ ಸಂಗೀತ ನಿರ್ದೇಶನದ ಲೆಜೆಂಡ್ ಸಲೀಲ್ ಚೌಧರಿ ಪುತ್ರ ಸಂಜೋಯ್ ಚೌಧರಿ ಮ್ಯೂಸಿಕ್ ನೀಡಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳೇ ಇಲ್ಲದಿದ್ದರೂ, ಇದರ ಹಿನ್ನೆಲೆ ಸಂಗೀತಕ್ಕೆ ಮಹತ್ವದ ಸ್ಥಾನವಿದೆ. ಹೀಗಾಗಿ, ಹಿಂದಿಯ ಬಹುತೇಕ ಖ್ಯಾತ ಸ್ಟಾರ್ಗಳ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿರೋ ಸಲೀಸ್ ಚೌಧರಿ ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಅದ್ಭುತ ಮ್ಯೂಸಿಕ್ ನೀಡಿದ್ದಾರೆ.
ಜೊತೆಗೆ ಡಿಓಪಿಯಾಗಿ ಖ್ಯಾತ ಛಾಯಾಗ್ರಹಕ ಪಿ. ರಾಜನ್ ಹಾಗೂ ಇತ್ತೀಚೆಗಷ್ಟೇ ನಿಧನರಾದ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ವೆಂಕಟ್ ಹಾಗೂ ನಭಾ ಸುಬ್ಬು ಸಾಹಸ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಬಿ.ಎಸ್. ಕೆಂಪರಾಜು ಸಂಕಲನ ಮಾಡಿದ್ದರೆ, ನಾಗಭೂಷಣ್ ಅವರು ವಿಭಿನ್ನ ರೀತಿಯಲ್ಲಿ ಪೋಸ್ಟರ್ ಡಿಸೈನ್ ಮಾಡಿದ್ದಾರೆ.