ಸಿನಿಮಾ ಅಲ್ಲ, ಮಂಡ್ಯ ಜನರ ಕಷ್ಟಕ್ಕೆ ನನ್ನ ಮೊದಲ ಆದ್ಯತೆ: ಸುಮಲತಾ ಭರವಸೆ - undefined
ಮಂಡ್ಯದ ನೀರಿನ ಸಮಸ್ಯೆ ವಿಚಾರವಾಗಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದೇನೆ. ರೈತರ ಆತ್ಮಹತ್ಯೆ ವಿಚಾರವಾಗಿ ಶಾಶ್ವತ ಪರಿಹಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಆ್ಯಕ್ಟಿಂಗ್ ಬಗ್ಗೆ ಯೋಚಿಸಲು ಸಮಯ ಇಲ್ಲ. ಮಂಡ್ಯಕ್ಕಾಗಿ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಆಗಲಿ 7 ತಿಂಗಳು ಕಳೆಯುತ್ತಾ ಬಂತು. ಇಂದು ಅವರ 7ನೇ ತಿಂಗಳ ಪುಣ್ಯತಿಥಿಯನ್ನು ಕುಟುಂಬದ ಸದಸ್ಯರು ಆಚರಿಸಿದ್ದಾರೆ. ಕಂಠೀರವ ಸ್ಟುಡಿಯೋ ಬಳಿಯಿರುವ ಅಂಬಿ ಸಮಾಧಿ ಬಳಿ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು.
ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಅಂಬಿ ಹಾಗೂ ಸುಮಲತಾ ಕುಟುಂಬದ ಸದಸ್ಯರು ಸಮಾಧಿ ಬಳಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ತಿಂಗಳಿಗೆ ಒಮ್ಮೆ ಮಾತ್ರವಲ್ಲ, ನಿತ್ಯ , ಪ್ರತಿಕ್ಷಣ ಅಂಬರೀಶ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಅವರ ಕೆಲವೊಂದು ಮಾತುಗಳನ್ನು ನೆನಪಿಸಿಕೊಂಡು ನಗುತ್ತೇವೆ. ಕೆಲವು ಮಾತುಗಳನ್ನು ನೆನಪಿಸಿಕೊಂಡು ಎಮೋಷನಲ್ ಆಗುತ್ತೇವೆ. ಅವರ ನೆನಪು ನಮ್ಮನ್ನು ಸದಾ ಕಾಡುತ್ತಿರುತ್ತದೆ ಎಂದು ಹೇಳಿದರು.
ಸಂಸತ್ನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಗ್ಗೆ ಮಾತನಾಡಿದ ಸುಮಲತಾ, ದೇಶದ 130 ಕೋಟಿ ಜನರು ನಮ್ಮನ್ನು ನೋಡುತ್ತಿರುತ್ತಾರೆ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನನಗೆ ಹೆಮ್ಮೆ ಎನಿಸುತ್ತಿದೆ. ಮಂಡ್ಯದ ನೀರಿನ ಸಮಸ್ಯೆ ವಿಚಾರವಾಗಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದೇನೆ. ರೈತರ ಆತ್ಮಹತ್ಯೆ ವಿಚಾರವಾಗಿ ಶಾಶ್ವತ ಪರಿಹಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಮುಂದಿನ ದಿನಗಳಲ್ಲಿ ಜನತಾ ದರ್ಶನಕ್ಕಾಗಿ ಮಂಡ್ಯದಲ್ಲಿ ಕಚೇರಿಯೊಂದನ್ನು ತೆರೆಯಲಿದ್ದೇನೆ ಎಂದರು.
- " class="align-text-top noRightClick twitterSection" data="">
ಮಂಡ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧಿಗಳಿಗೆ ಟಾಂಗ್ ಕೊಟ್ಟ ಸುಮಲತಾ ಅಂಬರೀಶ್ ದೆಹಲಿಯಲ್ಲಿ ಇದ್ರೆ ಮಂಡ್ಯದಲ್ಲಿ ಇಲ್ಲ ಅಂತಾರೆ. ಮಂಡ್ಯಕ್ಕೆ ಬಂದರೆ ಸಂಸತ್ತಿನಲ್ಲಿ ಇಲ್ಲ ಅಂತಾರೆ ಇದಕ್ಕೆಲ್ಲಾ ಯಾರೂ ಕಿವಿಗೊಡಬೇಡಿ ಎಂದರು. ಆ್ಯಕ್ಟಿಂಗ್ ಬಗ್ಗೆ ಯೋಚಿಸಲು ಸಮಯ ಇಲ್ಲ. ಮಂಡ್ಯಕ್ಕಾಗಿ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ. ಸದ್ಯಕ್ಕೆ ಅಭಿಷೇಕ್ ಅಂಬರೀಶ್ ಎರಡನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಅದರ ಬಗ್ಗೆ ಶೀಘ್ರದಲ್ಲೇ ಅನೌನ್ಸ್ ಮಾಡಲಿದ್ದಾರೆ ಎಂದು ಸುಮಲತಾ ಹೇಳಿದರು.
Body:ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಅಂಬರೀಶ್ ಅವರ ಜೊತೆ ಇದ್ದಂಥ ಸಮಯವನ್ನು ಇಂದಿಗೂ ಮರೆಯೋಕೆ ಆಗ್ತಿಲ್ಲ. ದಿನ ಕಳೆದಂತೆ ಅವರ ನೆನಪುಗಳು ಹೆಚ್ಚಾಗುತ್ತಿವೆ ಹೊರತು ಮಾತಿಲ್ಲ ಎಂದು ಹೇಳಿದರು. ಅಲ್ಲದೆ ಸಂಸತ್ನಲ್ಲಿ ಸಂಸದರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಗ್ಗೆ ಮಾತನಾಡಿದ ಸುಮಲತಾ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಬಹಳ ಹೆಮ್ಮೆ ಅನಿಸುತ್ತಿದೆ. ದೇಶದ 130 ಕೋಟಿ ಜನ ನಮ್ಮನ್ನು ನೋಡಿರುತ್ತಾರೆ ಅದರಿಂದ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನನಗೆ ಹೆಮ್ಮೆ ಎನಿಸುತ್ತಿದೆ. ಎಂದ ಸುಮಲತಾ ಅಂಬರೀಶ್ ದೆಹಲಿಯಲ್ಲಿ ನಾಲ್ಕೈದು ದಿನಗಳು ಮಂಡ್ಯದ ನೀರಿನ ಸಮಸ್ಯೆ ವಿಚಾರವಾಗಿ ಜಲ ಸಚಿವರೊಂದಿಗೆ ಮತ್ತು ಸದಾನಂದ ಗೌಡರ ಜೊತೆಗೆ ಚರ್ಚಿಸಿದ್ದೇನೆ. ರೈತರ ಆತ್ಮಹತ್ಯೆ ವಿಚಾರವಾಗಿ ಶಾಶ್ವತ ಪರಿಹಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ.
Conclusion:ಅಲ್ಲದೆ ಮುಂದಿನ ದಿನಗಳಲ್ಲಿ ಜನತಾ ದರ್ಶನಕ್ಕಾಗಿ ಮಂಡ್ಯದಲ್ಲಿ ಆಫೀಸ್ ತೆರೆಯಲಿದ್ದೇನೆ ಎಂದ ಸುಮಲತಾ ಅಂಬರೀಶ್. ಮಂಡ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧಿಗಳಿಗೆ ಟಾಂಗ್ ಕೊಟ್ಟ ಸುಮಲತಾ ಅಂಬರೀಶ್ ದೆಹಲಿಯಲ್ಲಿ ಇದ್ರೆ ಮಂಡ್ಯದಲ್ಲಿ ಇಲ್ಲ ಅಂತಾರೆ ಮಂಡ್ಯ ಗೆ ಬಂದರೆ ಸಂಸತ್ತಿಗೆ ಅಂತಾರೆ ಯಾರು ಕಿವಿಗೊಡಬೇಡಿ ಎಂದು ಹೇಳುವ ಮೂಲಕ ಮಂಡ್ಯದ ಜೆಡಿಎಸ್ ನಾಯಕರಿಗೆ ಪಕ್ಷವಾಗಿ ಚಾಟಿ ಬೀಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ನಾನು ಸಿನಿಮಾ ನಟನೆ ಬಗ್ಗೆ ಯೋಚಿಸಿಲ್ಲ ಅಲ್ಲದೆ ಅದಕ್ಕೆ ಸಮಯವೂ ನನಗೆ ಇಲ್ಲ ಮಂಡ್ಯ ಕ್ಕಾಗಿ ಕೆಲಸ ಮಾಡೋದು ಅಷ್ಟೇ ನನ್ನ ಉದ್ದೇಶ ಮುಂದಿನದಿನಗಳಲ್ಲಿ ಅಭಿಷೇಕ್ ಚಿತ್ರದಲ್ಲಿ ನಟಿಸುವ ಆಲೋಚನೆ ಮಾಡುತ್ತೇನೆ. ಸದ್ಯ ಅಭಿ ಎರಡನೇ ಚಿತ್ರಕ್ಕೆ ಸಹಿ ಮಾಡಿದನು ಆದಷ್ಟು ಬೇಗ ಅದನ್ನು ಆಫೀಸಲ್ಲಿ ಅನೊಂಸ್ ಮಾಡಲಿದ್ದಾರೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.
ಸತೀಶ ಎಂಬಿ