ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ಗೆ ಇಂದು 57ನೇ ವರ್ಷದ ಹುಟ್ಟುಹಬ್ಬ. ಅಂಬರೀಶ್ ಅಗಲಿಕೆಯಿಂದ ಕಳೆದ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದ ಸುಮಲತಾ ಈ ಬಾರಿ ಮಗನೊಂದಿಗೆ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಅಮ್ಮನ ಹುಟ್ಟುಹಬ್ಬದಂದು ಅಭಿಷೇಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಪ್ಲೇಟ್ನಲ್ಲಿ ಕೇಕ್ ಹಿಡಿದು ಅದನ್ನು ಅಮ್ಮನಿಗೆ ತಿನ್ನಿಸುವ ಬದಲು ಮೂಗಿಗೆ ಬಳಿಯುತ್ತಾರೆ. ಸುಮಲತಾ ಕೂಡಾ ಪುತ್ರನ ತುಂಟಾಟವನ್ನು ಎಂಜಾಯ್ ಮಾಡಿದ್ದಾರೆ. ರಮ್ಯ ಸೇರಿದಂತೆ ಚಿತ್ರರಂಗದ ಇತರ ಗಣ್ಯರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ಮತ್ತೊಂದೆಡೆ ಸುಮಲತಾ ಅವರು ನನ್ನ ದೊಡ್ಡ ಮಗ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಒಟ್ಟಿನಲ್ಲಿ ಸುಮಲತಾ, ಅಂಬಿ ನೆನಪಿನಲ್ಲೇ 57 ನೇ ವಸಂತ ಪೂರೈಸಿದ್ದಾರೆ.