ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಂಜಸಿರುವ ಈ ನಟಿಯ ಹೆಸರು ಸುಕೃತಾ ನಾಗ್. ಕಿರುತೆರೆಯ ಮುದ್ದು ತಂಗಿ ಅಂಜಲಿಯಾಗಿ ಮನ ಸೆಳೆದಿರುವ ಈಕೆ ಅಗ್ನಿ ಸಾಕ್ಷಿ ಧಾರಾವಾಹಿಯ ನಾಯಕ ಸಿದ್ಧಾರ್ಥ್ನ ತಂಗಿ ಅಂಜಲಿಯಾಗಿ ಕಿರುತೆರೆ ಪ್ರಿಯರಿಗೆ ಪರಿಚಯ. ಅಂಜಲಿ ಅಲಿಯಾಸ್ ಸುಕೃತಾ ಇದೀಗ ಹೊಸದಾಗಿ ಫೋಟೋ ಶೂಟ್ ಮಾಡಿಸಿದ್ದು, ಅದನ್ನು ನೋಡಿದವರು ಒಂದು ಕ್ಷಣ ಬೆರಗಾಗುವುದರಲ್ಲಿ ಎರಡು ಮಾತಿಲ್ಲ!


ಇತ್ತೀಚೆಗಷ್ಟೇ ಅಗ್ನಿಸಾಕ್ಷಿ ಧಾರಾವಾಹಿ ಮುಗಿದಿದ್ದು, ತಮ್ಮ ಕಿರುತೆರೆ ಪಯಣದ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ ಸುಕೃತಾ. ಸದ್ಯ ಟ್ರಡಿಶನಲ್ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ದಂತದ ಬೊಂಬೆಯಂತೆ ಮಿಂಚುತ್ತಿದ್ದಾರೆ. ಧಾರಾವಾಹಿಯಲ್ಲಿ ಸದಾ ಕಾಲ ಸಲ್ವಾರ್ ಮತ್ತು ಪ್ಯಾಂಟ್ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಇವರು ಇದೀಗ ಸೀರೆ ಉಟ್ಟು ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ.


ತಿಳಿ ನೀಲಿ ಬಣ್ಣದ ಸೀರೆಯುಟ್ಟು ಆ್ಯಂಟಿಕ್ ಆಭರಣ ತೊಟ್ಟು ಮಿರ ಮಿರ ಮಿಂಚುತ್ತಿರುವ ಸುಕೃತಾ ಅವರನ್ನು ಕಂಡಾಗ ಸೀರೇಲಿ ಹುಡುಗಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರ್ ಹಾಡು ನೆನಪಾಗುವುದು ಗ್ಯಾರೆಂಟಿ ಅಂದ್ರೆ ತಪ್ಪಾಗಲ್ಲ.