ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸುಹಾನಾ ಖಾನ್ ಅವರ ಫೋಟೋಗಳು ಇಂಟರ್ನೆಟ್ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುತ್ತವೆ. ಆದ್ರೆ ಇದೀಗ ಗೌರಿ ಖಾನ್ ಕೂಡ ಛಾಯಾಗ್ರಾಹಕರಾಗಿದ್ದು, ಮಗಳ ಮನಮೋಹಕ ದೃಶ್ಯವನ್ನು ಕ್ಲಿಕ್ ಮಾಡಿದ್ದಾರೆ. ತಾಯಿ ತೆಗೆದ ಫೋಟೋಗಳನ್ನು ಸುಹಾನಾ ಖಾನ್ ಶೇರ್ ಮಾಡಿದ್ದು, ಶೀರ್ಷಿಕೆಯಲ್ಲಿ "Pretend it's a Pepsi and I'm Cindy Crawford." ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ದಂಪತಿಗಳಲ್ಲಿ ಒಬ್ಬರು. ಇದೀಗ ಗೌರಿ ಖಾನ್ ಕೂಡ ತಾವು ಕ್ಲಿಕ್ಕಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ನೀಲಿ ನನ್ನ ನೆಚ್ಚಿನ ಬಣ್ಣ, ಸುಹಾನಾ ಕೂಡ ನನ್ನ ಕಲೆಯನ್ನು ಆನಂದಿಸಿದ್ದು, 'ಬೆಸ್ಟ್ ಫೋಟೋಗ್ರಾಫರ್' ಎಂದಿದ್ದಾರೆ.
ಸುಹಾನಾ 'ದಿ ಗ್ರೇ ಪಾರ್ಟ್ ಆಫ್ ಬ್ಲೂ' ಎಂಬ ಕಿರುಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದು, ಇದು 10.05 ನಿಮಿಷಗಳ ಕಾಲ್ಪನಿಕ ಚಿತ್ರವಾಗಿದೆ. ಎರಡು ದಿನದ ಪ್ರವಾಸದಲ್ಲಿರುವ ಯುವ ದಂಪತಿಯ ಕಥೆಯನ್ನು ಈ ಚಿತ್ರ ಹೇಳುತ್ತದೆ.