ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ಕಳೆದ ವಾರ ನೀಡಿದ ಹೇಳಿಕೆ ವಿಚಾರವಾಗಿ ನಟ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ಭಾಷೆಯ ಆರು ಉಪ ಭಾಷೆಗಳು ಸೇರಿದಂತೆ ಯಾವುದೇ ನಿಘಂಟಿನಲ್ಲಿ ಚಕ್ರವರ್ತಿ ಹೇಳಿದ ಪದಕ್ಕಾಗಲಿ, ವಿವರಣೆಗಾಗಲಿ ಅರ್ಥವಿಲ್ಲ ಎಂದು ಸುದೀಪ್ ಅವರು ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಚರ್ಚೆಗೆ ತೆಗೆದುಕೊಂಡ ಸುದೀಪ್, ಚಕ್ರವರ್ತಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ನಿಘಂಟಿನಲ್ಲಿ ಹಾಗೂ 6 ಬೇರೆ ಬೇರೆ ಉಪ ಭಾಷೆಗಳಲ್ಲಿ ಪತ್ರವಳ್ಳಿ ಎಂದರೆ ನಾನಾ ರೀತಿಯ ಅರ್ಥ ಬರುತ್ತದೆ. ಅದು ಬೇಲಿ ಹಿಂದೆ ನಡೆಯುವ ಕಾಮ ಎಂದೇ ಕರೆಯಲಾಗುತ್ತದೆ. ಇಂತಹ ಪದವನ್ನು ಮಂಜು ಓರ್ವ ಹೆಣ್ಣು ಮಗಳಿಗೆ ಬಳಸಿದ್ದು ಸರಿಯಲ್ಲ ಎಂದು ಚಕ್ರವರ್ತಿ ಕಳೆದ ವಾರ ಹೇಳಿ ಕೆಂಡಾಮಂಡಲವಾಗಿದ್ದರು.
ಅದಕ್ಕೆ ಈ ವಾರ ಸುದೀಪ್, ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಮೈಸೂರಿನ ವಿಶ್ವವಿದ್ಯಾಲಯ ಸೇರಿದಂತೆ 16 ನಿಘಂಟುಗಳಲ್ಲಿ ಸಾಕಷ್ಟು ನಿಘಂಟುಗಳನ್ನು ಹುಡುಕಾಡಿದರೂ ಈ ಪದಕ್ಕೆ ನೀವು ಹೇಳಿದ ಅರ್ಥವಿಲ್ಲ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಕ್ರವರ್ತಿ, ಇದು ಆಡು ಭಾಷೆಯ ಪದ, ಯಾವ ನಿಘಂಟಿನಲ್ಲೂ ಸಿಗುವುದಿಲ್ಲ ಎಂದು ಮಾತು ಬದಲಾಯಿಸಿದ್ದು, ವೀಕ್ಷಕರನ್ನು ಗೊಂದಲಕ್ಕೀಡುಮಾಡಿದರು.
ಇದನ್ನೂ ಓದಿ: Bigg Boss Season 8: ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಎಲಿಮನೇಟ್ ಇವರೇ!
ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇನೆ ಎಂದು ಹೇಳುವ ನೀವು ಬೇರೆ ಹೆಣ್ಣು ಮಗಳ ವಿಷಯದಲ್ಲಿ ಪತ್ರವಳ್ಳಿ ಪದದ ಬಳಕೆ ಮಾಡಿದ ರೀತಿ ಸರಿಯಲ್ಲ. ನಿಮ್ಮ ಜೀವನದಲ್ಲಿ ಬಂದು ಹೋದ ಹೆಣ್ಣು ಮಕ್ಕಳಿಗೆ ಕೊಡುವ ಗೌರವವನ್ನು ಬೇರೆ ಹೆಣ್ಣು ಮಕ್ಕಳಿಗೂ ಕೊಡಬೇಕು ಎಂದು ಸುದೀಪ್ ಖಡಕ್ ಆಗಿ ಚಕ್ರವರ್ತಿಗೆ ಹೇಳಿದರು.