ಸೆ.02 ರಂದು ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳೆಲ್ಲ ತನ್ನ ನೆಚ್ಚಿನ ನಾಯಕನ ಫೋಟೋವನ್ನು ತಮ್ಮ ಟ್ವಿಟರ್ ಖಾತೆಗೆ ಹಾಕಿಕೊಳ್ಳುವ ಮೂಲಕ ಕಾಮನ್ ಡಿಪಿ ಆಗಿದ್ದು, ಟ್ವಿಟರ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇನ್ನೆರಡು ದಿನಗಳು ಬಾಕಿ ಇದೆ. ಅಭಿಮಾನಿಗಳು ತನ್ನ ನೆಚ್ಚಿನ ನಾಯಕನ್ನನ್ನು ಭೇಟಿ ಮಾಡಲು ಕಾತುರರಾಗಿದ್ದಾರೆ. ಸುದೀಪ್ ಅತ್ಯಂತ ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ಇತರರಿಗೂ ಮಾದರಿಯಾಗಿದ್ದಾರೆ. ಆದರೆ, ಈ ಬಾರಿ ಕಿಚ್ಚನ ಈ ಫೋಟೋ ಟ್ವಿಟರ್ನಲ್ಲಿ ಸದ್ದು ಮಾಡ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ಸುದೀಪ್ ಹುಟ್ಟುಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ನನ್ನ ನೆಚ್ಚಿನ ನಟನಿಗಾಗಿ ಕೇಕ್, ಹೂವಿನ ಹಾರಗಳು, ಕಟೌಟ್ಗಳು, ಪಟಾಕಿಗಳು ತಂದು ಸಂಭ್ರಮದಿಂದ ಆಚರಿಸಿದ್ದರು. ಆದರೆ, ಸಂಭ್ರಮಾಚರಣೆ ಮುಗಿತ ನಂತರ ರಸ್ತೆಯ ತುಂಬೆಲ್ಲ ಕೇಕ್, ಹೂವಿನ ಹಾರಗಳು ಬಿದ್ದಿದ್ದವು. ಇದನ್ನು ಮಗುವನ್ನು ಎತ್ತಿಕೊಂಡಿದ್ದ ಮಹಿಳೆಯೋರ್ವರು ತಿನ್ನುತ್ತಿದ್ದರಂತೆ. ಈ ದೃಶ್ಯ ಕಿಚ್ಚನ ಮನಸ್ಸನ್ನು ವಿಚಲಿತಗೊಳಿಸಿತು.
ನೀವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ತಂದಂತಹ ಕೇಕು, ಹಣ, ಹೂವಿನ ಹಾರಗಳು ಹಾಳಾಗಬಾರದು. ಅದರ ಬದಲು ನಮ್ಮ ಸುತ್ತಮುತ್ತಲಿರುವ ಅಸಹಾಯಕರಿಗೆ ಸಹಾಯ ಮಾಡಿ. ಇನ್ನು ಮುಂದೆ ನಾನೆಂದಿಗೂ ಜನ್ಮ ದಿನಾಚರಣೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಇಂದಿಗೂ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ.