ETV Bharat / sitara

ಕೋಟಿಗೊಬ್ಬ 3, ಸಲಗ ಒಂದೇ ದಿನ ದರ್ಶನ: ನಾಡಹಬ್ಬಕ್ಕೆ ಸಿನಿರಸದೌತಣ - ಸುದೀಪ್​ ನಟನೆಯ ಕೋಟಿಗೊಬ್ಬ 3

ಅಕ್ಟೋಬರ್​ 14ರಂದು ಸುದೀಪ್​ ನಟನೆಯ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್​ ಸಲಗ ಸಿನಿಮಾ ಒಂದೇ ದಿನ ರಿಲೀಸ್​ ಆಗುವುದು ಬಹುತೇಕ ಪಕ್ಕಾ.

ಕೋಟಿಗೊಬ್ಬ 3, ಸಲಗ ಒಂದೇ ದಿನ ಬಿಡುಗಡೆ.
ಕೋಟಿಗೊಬ್ಬ 3, ಸಲಗ ಒಂದೇ ದಿನ ಬಿಡುಗಡೆ.
author img

By

Published : Sep 26, 2021, 7:49 PM IST

ಕೊರೊನಾ ಕಾರಣಕ್ಕೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ 50 ಪ್ರೇಕ್ಷಕರಿಗೆ ಅನುಮತಿ ನೀಡಿತ್ತು. ಹೀಗಾಗಿ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆಯಾಗಿತ್ತು. ಆದ್ರೀಗ ಸರ್ಕಾರ ಅಕ್ಟೋಬರ್ 1ರಿಂದ ಕೆಲವು ಷರತ್ತುಗಳ ಜೊತೆಗೆ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರಿಗೆ ಅನುಮತಿಸಿದ್ದು, ಕನ್ನಡ ಚಿತ್ರರಂಗದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ.

ಇದ್ರಲ್ಲಿ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆಗೆ ಸಜ್ಜಾಗಿವೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗು ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರ ಒಂದೇ ದಿನ ಬಿಡುಗಡೆ ಆಗುವ ಮೂಲಕ ಇಬ್ಬರು ಸ್ಟಾರ್ ನಡುವೆ ಸಿನಿಮಾ ವಾರ್ ಶುರುವಾಗಿದೆ.

ಹೌದು, ಅಕ್ಟೋಬರ್​ 14ರಂದು ಸುದೀಪ್​ ನಟನೆಯ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್​ ಸಲಗ ಸಿನಿಮಾ ರಿಲೀಸ್​ ಆಗುವುದು ಬಹುತೇಕ ಖಚಿತ. ಈಗಾಗಲೇ ಸಲಗ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಅಕ್ಟೋಬರ್ 14ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ, ಇದು ಸ್ಟಾರ್​ವಾರ್ ಅಲ್ಲ. ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪಬಾಬು ಅವರ ನಿರ್ಧಾರ ತಡವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾವು ಕಾಯುತ್ತಿದ್ದೆವು. 3 ಸಿನಿಮಾಗಳ ನಿರ್ಮಾಪಕರು ಮಾತುಕತೆ ನಡೆಸಿದ್ದೆವು. ಸರ್ಕಾರ ಅನುಮತಿ ನೀಡಿದ ನಂತರ ಮೊದಲು ಸಲಗ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚರ್ಚೆಯಾಗಿತ್ತು. ಮೊದಲೇ ಮಾತುಕತೆ ನಡೆಸಿರುವಂತೆ ಸಲಗ ಚಿತ್ರ ಬಿಡುಗಡೆ ಆಗುತ್ತಿದೆ ಎಂದಿದ್ದಾರೆ. ದಸರಾ ಹಬ್ಬ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ಸಲಗ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಅಂತಾ ನಿರ್ಮಾಪಕ ಕೆ.ಪಿ ಶ್ರೀಕಾಂತ್​ ಹೇಳುತ್ತಾರೆ.

ಆದರೆ ಈ ಕೊರೊನಾ ಸಮಯದಲ್ಲೂ ಒಂದೇ ದಿನ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುವುದರಿಂದ ಸಹಜವಾಗಿ ಸಿನಿಮಾ ಸ್ಟಾರ್ ವಾರ್ ಆಗೋದು ಪಕ್ಕಾ ಎನ್ನುತ್ತಿದೆ ಗಾಂಧಿನಗರ.

ಈ ಎರಡು ಸಿನಿಮಾ ಬಿಡುಗಡೆ ಆದ ಒಂದ ವಾರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಜರಂಗಿ 2 ಸಿನಿಮಾದ ಡೇಟ್ ಅನೌಂಸ್ ಮಾಡಲಾಗಿದೆ. ಅಕ್ಟೋಬರ್ 29ಕ್ಕೆ ನಿರ್ದೇಶಕ ಎ.ಹರ್ಷ ನಿರ್ದೇಶನದ ಸೆಂಚುರಿ ಸ್ಟಾರ್ ಅಭಿನಯದ ಭಜರಂಗಿ 2 ಚಿತ್ರ ಬಿಡುಗಡೆ ಮಾಡೋದಕ್ಕೆ ನಿರ್ಮಾಪಕ ಜಯಣ್ಣ ಭೋಗೇಂದ್ರ ನಿರ್ಧರಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.