ಕನ್ನಡ ಚಿತ್ರರಂಗ ಅಲ್ಲದೇ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಅಂದ್ರೆ ಕಿಚ್ಚ ಸುದೀಪ್. ಇವರ ಅಭಿಮಾನಿಗಳು ಸುದೀಪ್ರನ್ನ ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್ಷಾ, ಮಾಣಿಕ್ಯ, ಕಿಚ್ಚ ಸುದೀಪ್ ಅಂತಾ ಹಲವಾರು ಹೆರುಗಳಿಂದ ಕರೆಯುತ್ತಾರೆ. ಈಗ ಮಾಣಿಕ್ಯನಿಗೆ ಮತ್ತೊಂದು ಹೊಸ ಬಿರುದನ್ನು ದುಬೈ ಅನಿವಾಸಿ ಕನ್ನಡಿಗರು ನೀಡಿ ಸನ್ಮಾನಿಸಿದ್ದಾರೆ.
ಕೆಲ ದಿನಗಳ ಹಿಂದೆ ದುಬೈನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಲೋಗೋ ಮತ್ತು ಕನ್ನಡದ ಬಾವುಟವನ್ನು ಪ್ರದರ್ಶಿಸಿ ಸುದೀಪ್ ಅವರ 25 ವರ್ಷಗಳ ಹೆಜ್ಜೆ ಗುರುತುಗಳನ್ನು ತೋರಿಸಲಾಗಿತ್ತು.
ಇನ್ನು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ಕಿಚ್ಚ ಸುದೀಪ್ ಅವರ 25 ವರ್ಷಗಳ ಸಿನಿಮಾ ಸೇವೆ ಗುರುತಿಸಿ 'ಕನ್ನಡ ಕಲಾ ತಿಲಕ' ಎಂಬ ಬಿರುದು ನೀಡಿ ಸನ್ಮಾನಿಸಿದೆ.