ಶಿವಮೊಗ್ಗ: ಅಭಿಮಾನಿಗಳ ಪಾಲಿಗೆ 'ರನ್ನ' ನಾಗುತ್ತಿರುವ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ಸಮಾಜ ಸೇವೆಯ ವಿಷ್ಯದಲ್ಲಿ 'ಮಾಣಿಕ್ಯ'ನೇ ಸರಿ. ಸಿನಿಮಾ ನಟನೆ, ನಿರ್ದೇಶನದ ಜತೆ ಸಮಾಜ ಸೇವೆಯನ್ನೂ ಮಾಡುತ್ತಾ ಬಂದಿರುವ ಸುದೀಪ್ ಅದೆಷ್ಟೋ ಬಡ ಕುಟುಂಬಗಳ ಸು'ದೀಪ' ರಾದವರು ಕೂಡಾ. ಅದರಲ್ಲೂ ಕೊರೊನಾ ಲಾಕ್ ಡೌನ್ ನಂತರ ಇವರು ಎಲೆಮರೆಕಾಯಿ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಇದೀಗ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಈ ಮೂಲಕ ಕಾಡಿನಲ್ಲಿ ವಾಸಿಸುವ ಮಕ್ಕಳ ಶಿಕ್ಷಣ ಕ್ರಾಂತಿಗೆ ಸಿದ್ಧರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಇರುವ ಆವಿಗೆ ಗ್ರಾಮ, ಹಾಳಸಸಿ ಗ್ರಾಮ, ಎಂ.ಎಲ್.ಹಳ್ಳಿ, ಹಾಗೂ ಎಸ್.ಆರ್.ನಗರದ ಶಾಲೆ ಸೇರಿ ಒಟ್ಟು ನಾಲ್ಕು ಸರ್ಕಾರಿ ಶಾಲೆಗಳನ್ನು ಸುದೀಪ್ ದತ್ತು ಪಡೆದಿದ್ದಾರೆ.
ಈ ನಾಲ್ಕು ಶಾಲೆಗಳಲ್ಲಿ ಆವಿಗೆ ಗ್ರಾಮದ ಸರ್ಕಾರಿ ಶಾಲೆ ವಿಶೇಷವಾಗಿದೆ. ಯಾಕೆಂದರೆ, ಆವಿಗೆ ಹಳ್ಳಿ ಸಾಗರದಿಂದ 49 ಕಿಲೋಮೀಟರ್ ದೂರದಲ್ಲಿದೆ. ಈ ಶಾಲೆ ಇರೋದು ದಟ್ಟ ಕಾಡಿನ ಮಧ್ಯೆ. ಕಾಡಿನಲ್ಲಿ ವಾಸವಿರುವ ಗುಡ್ಡಗಾಡಿನ ಕುಣಬಿ ಜನಾಂಗದ ಬುಡಕಟ್ಟು ಮಕ್ಕಳಿಗಾಗಿ ಸರ್ಕಾರ ಶಾಲೆ ಕಟ್ಟಿಸಿ, ಶಾಲೆಗೆ ಮುಖ್ಯೋಪಾಧ್ಯಯರನ್ನು ನೇಮಿಸಿದೆ. ಆದರೆ ಈ ಮಕ್ಕಳಿಗೆ ಪಾಠ ಮಾಡೊಕೇ ಶಿಕ್ಷಕರ ಕೊರತೆ ಇದೆ. ಅಗತ್ಯ ಸೌಕರ್ಯಗಳು ಇಲ್ಲಿಲ್ಲ.
-
ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ 'ಮಾಣಿಕ್ಯ'
— KICHCHA SUDEEPA CHARITABLE SOCIETY - KSCS (@KSCS_Official) August 9, 2020 " class="align-text-top noRightClick twitterSection" data="
ಕಾಡಿನಲ್ಲಿರೋ ಶಾಲೆಯ ಮಕ್ಕಳಿಗೆ ಅಕ್ಷರ ಜ್ನಾನ ಕೊಡಿಸಲು #ಸುದೀಪ ಸರ್ ನಿರ್ಧರಿಸಿ "ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ" ವತಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆವಿಗೆ ಹಳ್ಳಿಯ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಯಿತು@KicchaSudeep @KSCS_Official#ಮೊದಲು_ಮಾನವನಾಗು pic.twitter.com/6z8ZeEwdMP
">ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ 'ಮಾಣಿಕ್ಯ'
— KICHCHA SUDEEPA CHARITABLE SOCIETY - KSCS (@KSCS_Official) August 9, 2020
ಕಾಡಿನಲ್ಲಿರೋ ಶಾಲೆಯ ಮಕ್ಕಳಿಗೆ ಅಕ್ಷರ ಜ್ನಾನ ಕೊಡಿಸಲು #ಸುದೀಪ ಸರ್ ನಿರ್ಧರಿಸಿ "ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ" ವತಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆವಿಗೆ ಹಳ್ಳಿಯ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಯಿತು@KicchaSudeep @KSCS_Official#ಮೊದಲು_ಮಾನವನಾಗು pic.twitter.com/6z8ZeEwdMPಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ 'ಮಾಣಿಕ್ಯ'
— KICHCHA SUDEEPA CHARITABLE SOCIETY - KSCS (@KSCS_Official) August 9, 2020
ಕಾಡಿನಲ್ಲಿರೋ ಶಾಲೆಯ ಮಕ್ಕಳಿಗೆ ಅಕ್ಷರ ಜ್ನಾನ ಕೊಡಿಸಲು #ಸುದೀಪ ಸರ್ ನಿರ್ಧರಿಸಿ "ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ" ವತಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆವಿಗೆ ಹಳ್ಳಿಯ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಯಿತು@KicchaSudeep @KSCS_Official#ಮೊದಲು_ಮಾನವನಾಗು pic.twitter.com/6z8ZeEwdMP
ಆವಿಗೆ ಗ್ರಾಮ ಪೂರ್ತಿ ಹುಡುಕಿದರೂ ನಮಗೆ ಸಿಗೋದು ಕೇವಲ ಮೂವರು ವಿದ್ಯಾವಂತರು ಮಾತ್ರ. ಒಬ್ಬರು ಡಿಗ್ರಿ ಮಾಡಿದ್ರೆ, ಇನ್ನಿಬ್ಬರು ಪಿಯುಸಿ ಓದಿದ್ದಾರೆ. ಈ ಮೂರು ವಿದ್ಯಾವಂತರಲ್ಲಿ ಒಬ್ಬರು ಟೀಚರ್ ಆಗಿ ಪಾಠ ಮಾಡುತ್ತಿದ್ದಾರೆ. ಇದರ ಜೊತೆಗೆ ಆಶ್ಚರ್ಯದ ವಿಷ್ಯ ಅಂದ್ರೆ, ಇಲ್ಲಿನ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿಯೇ ಸಾಗಬೇಕು.
ಈ ಎಲ್ಲಾ ವಿಷ್ಯ ತಿಳಿದ ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಚಾರಿಟೇಬಲ್ ಸೊಸೈಟಿಯ ಪರವಾಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಇಲ್ಲಿನ ಮಕ್ಕಳ ಪರಿಸ್ಥಿತಿ ನೋಡಿ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಉದಾರ ಮನಸ್ಸಿನಿಂದ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.
ಅಲ್ಲದೆ ಶಾಲೆಯ ಅಭಿವೃದ್ದಿಯ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವುದಕ್ಕೆ ಸುದೀಪ್ ಚಾರಿಟೇಬಲ್ ಸೊಸೈಟಿ ಮುಂದಾಗಿದೆ.