ETV Bharat / sitara

'ಫ್ಯಾಂಟಮ್' ಚಿತ್ರ 'ವಿಕ್ರಾಂತ್​ ರೋಣ' ಯಾಕಾಯಿತು? ಖುದ್ದು ಸುದೀಪ್​, ಭಂಡಾರಿ ಸ್ಪಷ್ಟನೆ ಹೀಗಿದೆ - Directed by Anoop Bhandari

ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಹೆಸರು 'ವಿಕ್ರಾಂತ್ ರೋಣ' ಎಂದು ಬದಲಾಗಿರುವುದು ಗೊತ್ತೇ ಇದೆ. ಕಳೆದ ವಾರವಷ್ಟೇ, ಚಿತ್ರತಂಡದವರು ಈ ವಿಷಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ಮುಂದೆ, ಅವರ ಮುಂಬರಲಿರುವ ಚಿತ್ರ 'ಫ್ಯಾಂಟಮ್' ಅನ್ನು ವಿಕ್ರಾಂತ್ ರೋಣ' ಎಂದು ಕರೆಯುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Sudeep acted 'Phantom' movie renamed as vikranth rona
'ಫ್ಯಾಂಟಮ್' ಚಿತ್ರ '' ಆಗಿದ್ದರ ಬಗ್ಗೆ ಖುದ್ದು ಸುದೀಪ್​, ನಿರ್ದೇಶಕ ಸ್ಪಷ್ಟನೆ
author img

By

Published : Jan 25, 2021, 11:25 AM IST

ಸುದೀಪ್ ನಟನೆಯ ಜೊತೆಗೆ ನಿರ್ದೇಶನದಲ್ಲೂ ಬಹಳ ಫೇಮಸ್ಸು. ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಅವರು ನಿರ್ದೇಶಕರಾಗಿಯೂ ಗುರುತಿಸಿಕೊಂಡರು. ಮೈ ಆಟೋಗ್ರಾಫ್'ನಿಂದ ಪ್ರಾರಂಭಿಸಿ, ನಂತರದ ದಿನಗಳಲ್ಲಿ ನಂ. 73 ಶಾಂತಿನಿವಾಸ', `ವೀರ ಮದಕರಿ', `ಜಸ್ಟ್ ಮಾತ್​ ಮಾತಲ್ಲಿ', `ಕೆಂಪೇಗೌಡ' ಮತ್ತು ಮಾಣಿಕ್ಯ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ ಬಿಡುಗಡೆಯಾದ ಮಾಣಿಕ್ಯ' ಚಿತ್ರವೇ ಕೊನೆ. ಆ ನಂತರ ಅವರು ನಿರ್ದೇಶನಕ್ಕಿಂತ ನಟನೆಯಲ್ಲೇ ಬ್ಯುಸಿಯಾದರು.

ಈಗ್ಯಾಕೆ ಈ ವಿಷಯ ಎಂಬ ಪ್ರಶ್ನೆ ಸಹಜ. ಆರು ವರ್ಷಗಳಿಂದ ಚಿತ್ರ ನಿರ್ದೇಶನದಿಂದ ದೂರವೇ ಉಳಿದಿದ್ದ ಸುದೀಪ್, ಈ ವರ್ಷ ಮತ್ತೆ ನಿರ್ದೇಶನಕ್ಕೆ ಮರಳುವುದಾಗಿ ಹಿಂಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮೊದಲ ಹಂತವಾಗಿ ಚಿತ್ರದ ಕಥೆಯೂ ರೆಡಿಯಾಗಿದೆಯಂತೆ. ಇನ್ನು ಬೇಕಾಗಿರುವುದು ಸಮಯ ಮಾತ್ರ. ಸಮಯ ಸಿಗುತ್ತಿದ್ದಂತೆಯೇ ಮತ್ತೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ಸುದೀಪ್.

ಭಾನುವಾರ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿತ್ರ ನಿರ್ದೇಶಿಸಿ ಎಂದು ಅಭಿಮಾನಿಗಳು ಹೇಳುತ್ತಲೇ ಇದ್ದಾರೆ. ಈಗಾಗಲೇ ಒಂದು ಸ್ಕ್ರಿಪ್ಟ್ ಮಾಡಿಟ್ಟುಕೊಂಡಿದ್ದೇನೆ. ಅದನ್ನು ತೆರೆಗೆ ತರಬೇಕು. 'ವಿಕ್ರಾಂತ್ ರೋಣ' ಮುಗಿದ ನಂತರ ಈ ಸಿನಿಮಾ ಶುರು ಮಾಡುವ ಯೋಚನೆ ಇದೆ. ಈ ಮಧ್ಯೆ, ಇನ್ನೊಂದಿಷ್ಟು ಕಮಿಟ್‍ಮೆಂಟ್‍ಗಳು ಇವೆ. ಒಂದಿಷ್ಟು ಸಮಯ ಸಿಗುತ್ತಿದ್ದಂತೆಯೇ ನನ್ನ ನಿರ್ದೇಶನದ ಸಿನಿಮಾ ಶುರುವಾಗಲಿದೆ'ಎಂದರು.

ಕೊನೆಗೂ ಸುದೀಪ್ ಮಾತು ನಡೆಯಿತು:

ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಹೆಸರು 'ವಿಕ್ರಾಂತ್ ರೋಣ' ಎಂದು ಬದಲಾಗಿರುವುದು ಗೊತ್ತೇ ಇದೆ. ಕಳೆದ ವಾರವಷ್ಟೇ, ಚಿತ್ರತಂಡದವರು ಈ ವಿಷಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಮುಂದೆ, ಅವರ ಮುಂಬರಲಿರುವ ಚಿತ್ರ 'ಫ್ಯಾಂಟಮ್' ಅನ್ನು ವಿಕ್ರಾಂತ್ ರೋಣ' ಎಂದು ಕರೆಯುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇಷ್ಟಕ್ಕೂ ಈ ಚಿತ್ರದ ಹೆಸರು ಏಕಾಏಕಿ ಬದಲಾಗಿದ್ದು ಯಾಕೆ?:

ಈ ಕುರಿತು ಮಾತನಾಡಿರುವ ಸುದೀಪ್, ಚಿತ್ರಕ್ಕೆ `'ವಿಕ್ರಾಂತ್ ರೋಣ' ಎಂದು ಹೆಸರಿಡುವಂತೆ ಚಿತ್ರತಂಡದವರಿಗೆ ಮೊದಲೇ ಹೇಳಿದ್ದೆ. ಆದರೆ, ಚಿತ್ರ ತಂಡದವರು ಕೇಳಿರಲಿಲ್ಲ. ಕಳೆದ ವರ್ಷ ಚಿತ್ರೀಕರಣ ಪ್ರಾರಂಭವಾದಾಗ ಒಂದು ಫೋಟೋ ಹಂಚಿಕೊಂಡಿದ್ದೆ. ಅದರಲ್ಲಿ 'ವಿಕ್ರಾಂತ್ ರೋಣ' ಎಂಬ ಹೆಸರು ಎಲ್ಲರಿಗೂ ಇಷ್ಟವಾಗಿತ್ತು. ಅವತ್ತೇ ಚಿತ್ರದ ಹೆಸರನ್ನು 'ಫ್ಯಾಂಟಮ್'ನಿಂದ 'ವಿಕ್ರಾಂತ್ ರೋಣ'ಗೆ ಬದಲಾಯಿಸಿ ಎಂದು ಹೇಳಿದ್ದೆ. ಆದರೆ, ನಿರ್ಮಾಪಕರು ಮತ್ತು ನಿರ್ದೇಶಕರಿಗೆ 'ಫ್ಯಾಂಟಮ್' ಎಂಬ ಹೆಸರು ಬಹಳ ಇಷ್ಟವಾಗಿತ್ತು. ಆದರೂ, ಚೇಂಬರ್​ ನಲ್ಲಿ`'ವಿಕ್ರಾಂತ್ ರೋಣ' ಎಂಬ ಹೆಸರು ರಿಜಿಸ್ಟರ್ ಮಾಡಿಸಲಾಗಿತ್ತು. ಈಗ ಅನಿವಾರ್ಯವಾಗಿ ಟೈಟಲ್ ಬದಲಾಯಿಸಬೇಕಾಗಿದ್ದರಿಂದ 'ವಿಕ್ರಾಂತ್ ರೋಣ' ಎಂದೇ ಹೆಸರಿಟ್ಟಿದ್ದೇವೆ' ಎಂದು ಸ್ಪಷ್ಟನೆ ನೀಡಿದರು.

ನಿರ್ದೇಶಕ ಅನೂಪ್ ಭಂಡಾರಿ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡು ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಹೆಸರನ್ನು ಬಿಟ್ಟಾಗಲೇ ಅಭಿಮಾನಿಗಳಲ್ಲಿ ಆ ಹೆಸರಿನ ಬಗ್ಗೆ ಕ್ರೇಜ್ ಹುಟ್ಟಿಕೊಂಡಿತ್ತು. ಕೊನೆಗೆ, 'ಫ್ಯಾಂಟಮ್'ಗಿಂತ 'ವಿಕ್ರಾಂತ್ ರೋಣ' ಹೆಸರೇ ಜನಪ್ರಿಯವಾಗುತ್ತಾ ಹೋಯಿತು. ಆ ಕಾರಣದಿಂದ ಚಿತ್ರಕ್ಕೆ 'ವಿಕ್ರಾಂತ್ ರೋಣ' ಎಂಬ ಹೆಸರನ್ನು ಇಡಲಾಯಿತು' ಎಂದರು.

ಅಂದಹಾಗೆ, 'ವಿಕ್ರಾಂತ್ ರೋಣ' ಚಿತ್ರದ ಟೈಟಲ್ ಲೋಗೋ ಮತ್ತು ಸ್ನೀಕ್‍ಪೀಕ್ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಅನಾವರಣಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಚಿತ್ರತಂಡ ಸದ್ಯದಲ್ಲೇ ದುಬೈಗೆ ಹಾರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.