ETV Bharat / sitara

ನನಗೇನಾದ್ರೂ ಆದರೆ ಸುದೀಪ್​ ನೇರ ಹೊಣೆ.. ವಂದೇ ಮಾತರಂ ಸಮಾಜಸೇವಾ ಸಂಸ್ಥೆ ಅಧ್ಯಕ್ಷ! - ಕಿಚ್ಚ ಸುದೀಪ್​

ಸುದೀಪ್ ಅಭಿಮಾನಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಅಭಿಮಾನಿಗಳಿಂದ ನನಗೆ ಏನಾದರೂ ತೊಂದರೆಯಾದರೆ ಸುದೀಪ್ ಅವರೇ ನೇರ ಕಾರಣ. ಹೀಗಾಗಿ ಅವರ ಅಭಿಮಾನಿಗಳಿಗೆ ಈ ಬಗ್ಗೆ ತಿಳಿ ಹೇಳಬೇಕು ಎಂದು ಶಿವಕುಮಾರ್​​ ಆಗ್ರಹಿಸಿದರು.

suddep bane case
ನನಗೇನಾದ್ರು ಆದರೆ ಸುದೀಪ್​ ನೇರ ಹೊಣೆ : ವಂದೇ ಮಾತರಂ ಸಮಾಜಸೇವಾ ಸಂಸ್ಥೆ ಅಧ್ಯಕ್ಷ
author img

By

Published : Feb 28, 2020, 7:14 PM IST

ಬೆಂಗಳೂರು : ಸುದೀಪ್​ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಮನವಿ ಸಲ್ಲಿಸಿದ್ದ ವಂದೇ ಮಾತರಂ ಸಮಾಜಸೇವಾ ಸಂಸ್ಥೆ ಅಧ್ಯಕ್ಷ ಶಿವಕುಮಾರ್​​​ಗೆ ಸುದೀಪ್ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿವೆಯಂತೆ. ಇದರಿಂದ ಶಿವಕುಮಾರ್​ ಪೊಲೀಸರಿಗೆ ಜೀವ ಬೆದರಿಕೆ ದೂರು ನೀಡಿದ್ದಾರೆ.

suddep bane case
ಶಿವಕುಮಾರ್​ ಮನವಿ

ರಮ್ಮಿ ಗೇಮ್​​ ಪ್ರಚಾರದ ಜಾಹೀರಾತಿನಲ್ಲಿ ಸುದೀಪ್​ ಅಭಿನಯಿಸಿದ್ದರು. ಇಂದ್ರಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶಿವಕುಮಾರ್ ದೂರ ನೀಡಿದ್ದು, ಸುದೀಪ್‌ ಅವರನ್ನು ಬ್ಯಾನ್​ ಮಾಡಿ ಎಂದು ಮನವಿ ಮಾಡಿದ್ದರು. ನನಗೆ ವಾಟ್ಸ್‌ಆ್ಯಪ್ ಹಾಗೂ ಕರೆಗಳ ಮೂಲಕ ನಿರಂತರವಾಗಿ ನಿಂದಿಸಿದ್ದಾರೆ. ಮಸ್ಕತ್, ದುಬೈ ಸೇರಿದಂತೆ ಸುದೀಪ್ ಅಭಿಮಾನಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಮೊಬೈಲ್ ಕರೆಗಳು ಸ್ವೀಕರಿಸಿದರೆ ಅಸಹ್ಯವಾಗಿ ನಿಂದಿಸುತ್ತಿದ್ದಾರೆ‌. ಈ ಬಗ್ಗೆ ಪ್ರಶ್ನಿಸಲು ಸುದೀಪ್ ಸಂಪರ್ಕ ಸಾಧ್ಯವಾಗ್ತಿಲ್ಲ.

suddep bane case
ಶಿವಕುಮಾರ್​ ಮನವಿ

ಹೀಗಾಗಿ ಅವರ ಅಭಿಮಾನಿಗಳಿಂದ ನನಗೆ ಜೀವ ಬೆದರಿಕೆಯಿದೆ. ನನಗೆ ಪೊಲೀಸರಿಂದ ರಕ್ಷಣೆ ಬೇಕಾಗಿದೆ‌ ಎಂದು‌ ಹೇಳಿದ್ದಾರೆ. ಸುದೀಪ್ ಅಭಿಮಾನಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಅಭಿಮಾನಿಗಳಿಂದ ನನಗೆ ಏನಾದರೂ ತೊಂದರೆಯಾದರೆ ಸುದೀಪ್ ಅವರೇ ನೇರ ಕಾರಣ. ಹೀಗಾಗಿ ಅವರ ಅಭಿಮಾನಿಗಳಿಗೆ ಈ ಬಗ್ಗೆ ತಿಳಿ ಹೇಳಬೇಕು ಎಂದು ಶಿವಕುಮಾರ್​​ ಆಗ್ರಹಿಸಿದರು.

ನನಗೇನಾದ್ರೂ ಆದರೆ ಸುದೀಪ್​ ನೇರ ಹೊಣೆ.. ವಂದೇ ಮಾತರಂ ಸಮಾಜಸೇವಾ ಸಂಸ್ಥೆ ಅಧ್ಯಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.