ಕೊರೊನಾ ಎರಡನೇ ಅಲೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಿನಿಮಾ ಸಲಗ. ದುನಿಯಾ ವಿಜಯ್ ನಿರ್ದೇಶನದ ಜೊತೆ ನಟಿಸಿರೋ ಸಲಗ ಸಿನಿಮಾ ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಔಟ್ ಅಂಡ್ ಔಟ್ ರೌಡಿಸಂ ಕಥೆ ಆಧರಿಸಿರೋ ಸಲಗ ಸಿನಿಮಾವನ್ನ ಮಾಸ್ ಪ್ರೇಕ್ಷಕರು ಮೆಚ್ಚಿದ್ದಾರೆ. ಸಲಗ ಸಿನಿಮಾ ಬಿಡುಗಡೆ ಆಗಿ ಐದು ದಿನವಾದರೂ ಚಿತ್ರಮಂದಿರಗಳಲ್ಲಿ ಸಲಗ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ತಮ್ಮ ಸಲಗ ಟೀಂ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಸಲಗ ಚಿತ್ರದ ಸಕ್ಸಸ್ ಸೆಲೆಬ್ರೆಟ್ ಮಾಡಿದ್ದಾರೆ. ವಿಜಯ್ ಜೊತೆಗೆ ಡಾಲಿ ಧನಂಜಯ್, ನಾಯಕಿ ಸಂಜನಾ ಆನಂದ್, ಕಾಕ್ರೋಜ್ ಸುಧಿ, ಸಂಭಾಷಣೆಕಾರ ಮಾಸ್ತಿ ಮಂಜು ಸೇರಿದಂತೆ ಇಡೀ ಚಿತ್ರತಂಡ ಈ ಯಶಸ್ಸನ್ನ ಸೆಲೆಬ್ರೆಟ್ ಮಾಡುತ್ತಿದೆ.
ದುನಿಯಾ ವಿಜಯ್ ನಿರ್ದೇಶನ, ಸಂಜನಾ ಆಂನದ್ ಬೋಲ್ಡ್ ಆ್ಯಕ್ಟಿಂಗ್, ಡಾಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. ಕೂಲಿ ಕಾರ್ಮಿಕರ ಕಷ್ಟ ಹೇಗಿರುತ್ತೆ ಅನ್ನೋದನ್ನ ಸಲಗ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ತೋರಿಸಲಾಗಿದೆ. ಇನ್ನು, ಡೈಲಾಗ್ ರೈಟರ್ ಮಾಸ್ತಿ ಪಂಚಿಂಗ್ ಡೈಲಾಗ್, ಸಿನಿಮಾ ಪ್ರೇಕ್ಷಕಕರಿಗೆ ಕಿಕ್ ಕೊಡ್ತಿದೆ.
ಸದ್ಯ ಕೊರೊನಾಗೆ ಸಿನಿ ಪ್ರಿಯರು ಸೆಡ್ಡು ಹೊಡೆದು ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಟಗರು ಸಿನಿಮಾ ನಂತರ ನಿರ್ಮಾಪಕ ಕೆ ಪಿ ಶ್ರೀಕಾಂತ್ ಮತ್ತೆ ರೌಡಿಸಂ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಈ ಖುಷಿಯನ್ನ ಸಲಗ ಚಿತ್ರತಂಡ ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡಿದೆ.