ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ಗಳ ಗಾಳಿ ಸುದ್ದಿ ಆಗಾಗ ಕೇಳಿ ಬರ್ತಾನೆ ಇದೆ. ಸದ್ಯ ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ಅಂತರ ಕೂಡ ಇದಕ್ಕೆ ಸಾಕ್ಷಿ ಎಂಬಂತಿದೆ.
ಹೌದು ಆದಿತ್ಯ ಅಭಿನಯದ 'ಮುಂದುವರಿದ ಅಧ್ಯಾಯ' ಸಿನಿಮಾ ವೇದಿಕೆಯಲ್ಲಿ ದಚ್ಚು ಮತ್ತು ಕಿಚ್ಚನ ಸ್ಟಾರ್ ವಾರ್ ಶಂಕೆ ವ್ಯಕ್ತವಾಗಿದೆ. 'ಮುಂದುವರಿದ ಅಧ್ಯಾಯ' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡೋದಿಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂದಿದ್ರು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಲೆಜೆಂಡ್ ನಿರ್ದೇಶಕರ ಬಗ್ಗೆ ಒಂದು ವಿಡಿಯೋ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಹಿರಿಯ ನಿರ್ದೇಶಕರಿಂದ ಹಿಡಿದು ಇಲ್ಲಿಯ ತನಕ ಕನ್ನಡದ ಪ್ರಮುಖ ನಿರ್ದೇಶಕರ ಫೋಟೋ ಹಾಕಿ ವಿಟಿ ಮಾಡಿಡಲಾಗಿತ್ತು.
ಆದ್ರೆ ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಫೋಟೋ ಮಾತ್ರ ಕಾಣಲಿಲ್ಲ. ಇದು ಶಂಕೆಯ ಆಗರವಾಗಿದ್ದು, ಕಾರ್ಯಕ್ರಮಕ್ಕೆ ದರ್ಶನ್ ಬರ್ತಾರೆ ಎಂಬ ಕಾರಣಕ್ಕೆ ಸುದೀಪ್ ಫೋಟೋ ಹಾಕಿಲ್ವಾ? ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ನಟ ಆದಿತ್ಯರನ್ನ ಕೇಳಿದ್ರೆ, ನೋ ಕಾಮೆಂಟ್ಸ್ ಅಂತ ಉತ್ತರ ನೀಡಿದ್ದಾರೆ. ನಾನು ಆ ವಿಡಿಯೋ ಮಾಡಿಲ್ಲ. ಬಹುಶಃ ಎಲ್ಲೋ ತಪ್ಪಾಗಿದೆ. ಯಾರು ಈ ವಿಡಿಯೋ ಮಾಡಿದ್ರೋ ಅವ್ರನ್ನ ಕೇಳಬೇಕು ಅಂತಾ ಆದಿತ್ಯ ಉತ್ತರ ಕೊಟ್ಟಿದ್ದಾರೆ.