ಬಹುನಿರೀಕ್ಷಿತ ಆರ್ಆರ್ಆರ್ ಅಕ್ಟೋಬರ್ನಲ್ಲೂ ರಿಲೀಸ್ ಆಗಲ್ವಾ? - ಬಹುನಿರೀಕ್ಷಿತ ಆರ್ಆರ್ಆರ್ ಚಿತ್ರ
ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದಾಗಿ ಸಿನಿಮಾ ಇಂಡಸ್ಟ್ರೀ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಅದೇ ಕಾರಣಕ್ಕಾಗಿ ಅನೇಕ ಚಿತ್ರಗಳು ಮುಂದೂಡಿಕೆಯಾಗುತ್ತಿವೆ. ಇದೀಗ ಬಹು ನಿರೀಕ್ಷಿತ RRR ಚಿತ್ರದ ಬಿಡುಗಡೆ ಮತ್ತಷ್ಟು ಮುಂದೂಡಿಕೆ ಆಗುವ ಸಾಧ್ಯತೆ ಇದೆ.
ಹೈದರಾಬಾದ್: ಬಾಹುಬಲಿ- 2 ಬಳಿಕ ಬಿಗ್ ಬ್ರೇಕ್ ಪಡೆದಿರುವ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ ಆರ್ಆರ್ಆರ್ ಎಲ್ಲ ಪ್ರೋಡಕ್ಸನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಅಕ್ಟೋಬರ್ 13ಕ್ಕೆ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಲಾಗಿತ್ತು.
- " class="align-text-top noRightClick twitterSection" data="
">
ಆದರೆ ಹೆಚ್ಚುತ್ತಿರುವ ಕೋವಿಡ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರ ಬಿಡುಗಡೆ ಬಹುತೇಕ ಮುಂದೂಡಿಕೆ ಆಗುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
- " class="align-text-top noRightClick twitterSection" data="
">
ಲಭ್ಯವಾಗಿರುವ ಮಾಹಿತಿ ಪ್ರಕಾರ ಚಿತ್ರದ ಅಂತಿಮ ಪ್ರೊಡಕ್ಸನ್ ಕೆಲಸಗಳು ನಡೆಯುತ್ತಿದ್ದು, ಲೀಡಿಂಗ್ ರೋಲ್ನಲ್ಲಿರುವ ರಾಮಚರಣ್ ಮತ್ತು ಜೂ. ಎನ್ಟಿಆರ್ ಅವರ ಪ್ರಮುಖ ದೃಶ್ಯಾವಳಿಗಳ ಶೂಟಿಂಗ್ ಬಾಕಿ ಇದೆ ಎನ್ನಲಾಗಿದ್ದು, ಅದೀಗ ನಡೆಯುತ್ತಿದೆ. ಆದರೆ ಕೋವಿಡ್ 19 ಇವೆಲ್ಲಕ್ಕೂ ಕಡಿವಾಣ ಹಾಕಿದೆ. ಬಾಲಿವುಡ್ ತಾರೆಗಳಾದ ಆಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಅವರೊಂದಿಗೆ ತೆಲುಗು ರಂಗದ ಪ್ರಮುಖ ತಾರೆಯರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
- " class="align-text-top noRightClick twitterSection" data="
">
ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಾಮ್ ಭೀಮ್ ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಬರೋಬ್ಬರಿ 450 ಕೋಟಿ ರೂ.ಗಳ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಅತ್ಯಂತ ನಿರೀಕ್ಷೆ ಮೂಡಿಸಿರುವ ಚಿತ್ರವನ್ನ ಇದೇ ಅಕ್ಟೋಬರ್ 13 ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು. ಆದರೆ ಹೊಸ ಸುದ್ದಿ ಏನಂದರೆ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ 2022ರ ಜನವರಿಗೆ ಮುಂದೂಡಿಕೆ ಆಗಬಹುದು ಎಂದು ಹೇಳಲಾಗುತ್ತಿದೆ.