ಶ್ರೀನಿ ಅಲಿಯಾಸ್ ಎಂ.ಜಿ. ಶ್ರೀನಿವಾಸ್ ‘ಟಿಪಿಕಲ್ ಕೈಲಾಸಂ’ ಕಿರುಚಿತ್ರದಿಂದ ಪ್ರಶಸ್ತಿ ಪಡೆದು ನಂತರ ಸೂಪರ್ ಸ್ಟಾರ್ ಉಪೇಂದ್ರ ಅವರ ‘ಟೋಪಿವಾಲ’ ಸಿನಿಮಾ ಮೂಲಕ ನಿರ್ದೇಶಕರಾದರು. ನಂತರ ‘ಶ್ರೀನಿವಾಸ ಕಲ್ಯಾಣ’ ಸಿನಿಮಾದಿಂದ ನಟನೆ ಹಾಗೂ ನಿರ್ದೇಶನ ಕೂಡಾ ಆರಂಭಿಸಿದರು.
‘ಬೀರಬಲ್’ ಹಾಗೂ 'ಫೈಂಡಿಂಗ್ ವಜ್ರಮುನಿ' ಶ್ರೀನಿ ಅವರ ಮುಂದಿನ ಸಿನಿಮಾಗಳು. ಇತ್ತೀಚೆಗೆ ಬಿಡುಗಡೆಯಾದ ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಸಿನಿಮಾದಲ್ಲಿ ಕೂಡಾ ಶ್ರೀನಿ ಗಮನಾರ್ಹ ಪಾತ್ರ ಮಾಡಿ ಪ್ರೇಕ್ಷಕರನ್ನು ಸೆಳೆದವರು. ಈಗ 'ಓಲ್ಡ್ ಮೊಂಕ್' ಚಿತ್ರದ ಮೂಲಕ ನಿರ್ದೇಶನ ಹಾಗೂ ನಟನೆಗೆ ವಾಪಸಾಗುತ್ತಿದ್ದಾರೆ. ಓಲ್ಡ್ ಮೊಂಕ್ ಎಂಬುದು ಒಂದು ಮದ್ಯದ ಹೆಸರು.
ಇತ್ತೀಚಿಗೆ ಶ್ರೀನಿ ‘ರಂಗನಾಯಕಿ’ ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರದಲ್ಲೂ ಗಮನಾರ್ಹ ಪಾತ್ರ ಮಾಡಿದ್ದರು. ಮದುವೆ ಆದ ನಂತರ ಈಗ ಹೊಸ ಸಿನಿಮಾದಿಂದ ನಿರ್ದೇಶನ ಹಾಗೂ ನಟನೆಗೆ ಬರುತ್ತಿದ್ದಾರೆ.‘ಓಲ್ಡ್ ಮೊಂಕ್’ ಚಿತ್ರದಲ್ಲಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವ ವ್ಯಕ್ತಿ ಪಾತ್ರದಲ್ಲಿ ಶ್ರೀನಿ ಅಭಿನಯಿಸುತ್ತಿದ್ದಾರೆ. ಇದೊಂದು ಹಾಸ್ಯಭರಿತ ಚಿತ್ರವಾಗಿದ್ದು ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.