ಕರ್ನಾಟಕ ಸರ್ಕಾರದಿಂದ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಆಯ್ಕೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಸೆಪ್ಟಂಬರ್ನಲ್ಲಿ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಇಷ್ಟು ದಿನ 'ಭರಾಟೆ' ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಇದ್ರು.
ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಬಿಡುಗಡೆಯಾಗಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. ಮುಂದಿನ ಸಿನಿಮಾ ಶೂಟಿಂಗ್ ಬಿಡುಗಡೆಗೂ ಮುನ್ನ ಅವರು ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿದ್ದಾರೆ. ಕಾಡಿನಲ್ಲಿ, ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ಒಂದು ರೌಂಡ್ ಹಾಕಿದ್ದಾರೆ. ಹಾಗೇ ಬಂಡೀಪುರ ಅರಣ್ಯ ಸಿಬ್ಬಂದಿ ಹಾಗೂ ಮಾವುತರ ಜೊತೆ ಶ್ರೀಮುರಳಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅಲ್ಲಿರುವ ಕಾಡು ಜನರು ಹಾಗೂ ಅರಣ್ಯ ಸಿಬ್ಬಂದಿ ಗುಡಿಸಲಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಮಕ್ಕಳಿಗೆ ಕೆಲವೊಂದು ಉಡುಗೊರೆಗಳನ್ನು ನೀಡುವ ಮೂಲಕ ಮೂಲಕ ಬಂಡೀಪುರ ಕಾಡು ಜನರು ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ಇಡೀ ದಿನ ಕಳೆದಿದ್ದಾರೆ.