ETV Bharat / sitara

14 ವರ್ಷದವರಿರುವಾಗ ಆ ಚಿತ್ರವನ್ನು ಬ್ಲ್ಯಾಕ್ ಟಿಕೆಟ್​​​ ಖರೀದಿಸಿ ನೋಡಿದ್ರಂತೆ ಶ್ರೀಮುರಳಿ

author img

By

Published : Aug 24, 2020, 3:39 PM IST

ಸ್ಯಾಂಡಲ್​​ವುಡ್​ ಅಗಸ್ತ್ಯ ಶ್ರೀಮುರಳಿ, ಉಪೇಂದ್ರ ಅವರ ದೊಡ್ಡ ಅಭಿಮಾನಿಯಂತೆ. ಚಿಕ್ಕಂದಿನಿಂದಲೂ ಉಪೇಂದ್ರ ನಿರ್ದೇಶನದ ಸಿನಿಮಾಗಳನ್ನು ನೋಡುತ್ತಿದ್ದ ಶ್ರೀಮುರಳಿ ಉಪ್ಪಿ ಅಭಿನಯದ 'ಓಂ' ಚಿತ್ರವನ್ನು ಬ್ಲ್ಯಾಕ್​​​ನಲ್ಲಿ ಟಿಕೆಟ್ ಖರೀದಿಸಿ ನೋಡಿದ್ರಂತೆ.

Srimurali about Upendra
ಶ್ರೀಮುರಳಿ

ರೋರಿಂಗ್ ಸ್ಟಾರ್​ ಶ್ರೀಮುರಳಿ ಇತ್ತೀಚೆಗೆ ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಸುಧೀಂದ್ರ ನಟಿಸುತ್ತಿರುವ 'ಸೂಪರ್ ಸ್ಟಾರ್'​ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮುರಳಿ ತಮ್ಮ 14ನೇ ವಯಸ್ಸಿನಲ್ಲಿ ನಡೆದ ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ.

ಉಪೇಂದ್ರ ಚಿತ್ರಗಳ ಬಗ್ಗೆ ಶ್ರೀಮುರಳಿ ಪ್ರತಿಕ್ರಿಯೆ

ರಿಯಲ್ ಸ್ಟಾರ್​​​​​, ನಿರ್ದೇಶನದಿಂದ ನಟನೆಗೆ ಬಂದವರು. 'ಎ' ಚಿತ್ರದಲ್ಲಿ ಅವರು ನಾಯಕನಾಗಿ ನಟಿಸುವ ಮುನ್ನ ಸಾಕಷ್ಟು ಹಿಟ್ ಚಿತ್ರಗಳನ್ನು ಸ್ಯಾಂಡಲ್​​ವುಡ್​​​​ಗೆ ನೀಡಿದ್ದರು. ಉಪೇಂದ್ರ ನಿರ್ದೇಶನದ ಸಿನಿಮಾಗಳು ಎಂದರೆ ಸಿನಿಪ್ರಿಯರಿಗೆ ಬಹಳ ಇಷ್ಟ. ಅದೇ ರೀತಿ ಶ್ರೀಮುರಳಿ ಕೂಡಾ ಉಪೇಂದ್ರ ನಿರ್ದೇಶನದ ಸಿನಿಮಾವೊಂದರನ್ನು ಬ್ಲ್ಯಾಕ್​​​​​​​​​​​​​ನಲ್ಲಿ ಟಿಕೆಟ್ ಖರೀದಿಸಿ ನೋಡಿದ್ದರಂತೆ. 1995 ರಲ್ಲಿ ಉಪೇಂದ್ರ ನಿರ್ದೇಶನದ 'ಓಂ' ಚಿತ್ರ ಬಿಡುಗಡೆ ಆದಾಗ ಶ್ರೀಮುರಳಿಗೆ 14 ವರ್ಷ ವಯಸ್ಸು. ಸಿನಿಮಾ ರಿಲೀಸ್ ಆದ ದಿನವೇ ಸ್ನೇಹಿತರ ಜೊತೆ ಸೇರಿ ಬ್ಲ್ಯಾಕ್​​​​ನಲ್ಲಿ ಟಿಕೆಟ್ ಖರೀದಿಸಿ ಶ್ರೀಮುರಳಿ ಉಪ್ಪಿ ನಿರ್ದೇಶನದಲ್ಲಿ ಶಿವಣ್ಣ ಅಭಿನಯದ 'ಓಂ' ಸಿನಿಮಾವನ್ನು ಗಾಂಧಿಗ್ಲಾಸ್​​​ನಲ್ಲಿ ಕುಳಿತು ನೋಡಿ ಎಂಜಾಯ್ ಮಾಡಿದ್ದರಂತೆ.

Srimurali about Upendra
ಉಪೇಂದ್ರ

'ಎ' ಸಿನಿಮಾ ಬಿಡುಗಡೆ ಆದಾಗ ಕೂಡಾ ಬೇಕಂತಲೇ ಗಾಂಧಿಕ್ಲಾಸ್​​​ನಲ್ಲಿ ಟಿಕೆಟ್​ ಖರೀದಿಸಿ ಸ್ನೇಹಿತರೊಂದಿಗೆ ಸಿನಿಮಾ ನೋಡಿದ್ದರಂತೆ ರೋರಿಂಗ್ ಸ್ಟಾರ್. ಈ ವಿಚಾರವನ್ನು ಶ್ರೀಮುರಳಿ 'ಸೂಪರ್ ಸ್ಟಾರ್' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶ್ರೀಮುರಳಿ, ಸರ್​​​ ಬೇಗ ಒಂದು ಸಿನಿಮಾ ನಿರ್ದೇಶನ ಮಾಡಿ, ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ಕೊಡಿ ಎಂದು ಉಪೇಂದ್ರ ಬಳಿ ಕೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.