ಭಾರತದ ಕ್ರಿಕೆಟ್ ಟೀಮ್ ನಲ್ಲಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಕೇರಳ ಎಕ್ಸ್ ಪ್ರೆಸ್ ಶ್ರೀಶಾಂತ್ ಕಳೆದ ಐದಾರು ವರ್ಷಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿರೋದು ಎಲ್ಲರಿಗೂ ಗೊತ್ತೇ ಇದೆ.. ಹೀಗೆ ಸುಮ್ಮನೇ ಕೂಡದ ಅವರು ಈಗ ಸಿನಿಮಾಗಳಲ್ಲಿ ಶೈನ್ ಆಗ್ತಾ ಇದ್ದಾರೆ.
ಸದ್ಯ ಸ್ಯಾಂಡಲ್ ವುಡ್ನಲ್ಲಿ ಕೆಂಪೇಗೌಡ-2 ಹಾಗೂ ಧೂಮ್ ಅಗೇನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟಿಗ ಶ್ರೀಶಾಂತ್ ಕನ್ನಡ ಚಿತ್ರರಂಗದ ಪುನೀತ್ ರಾಜ್‍ಕುಮಾರ್ ಅಭಿಮಾನಿಯಂತೆ. ಹೌದು ಹೀಗಂತ ಸ್ವತಃ ಶ್ರೀಶಾಂತ್ ಅವರೇ ತಮ್ಮ ಮನದಾಳದ ಮಾತನ್ನು ಪುನೀತ್ ರಾಜ್‍ಕುಮಾರ್ ಮುಂದೆ ಹೇಳಿಕೊಂಡಿದ್ದಾರೆ.
ಶ್ರೀಶಾಂತ್ ಮೇನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಧೂಮ್ ಅಗೇನ್ ಚಿತ್ರದ ಟೀಸರ್ ಬಿಡುಗಡೆಗೆ ಪುನೀತ್ ರಾಜ್‍ಕುಮಾರ್ ಬಂದಿದ್ರು ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತು ಶುರು ಮಾಡಿದ ಶ್ರೀಶಾಂತ್ ನಾನು ಪುನೀತ್ ಅಣ್ಣ ಹಾಗೂ ಶಿವಣ್ಣನ ಅಭಿಮಾನಿ ಅಂತಾ ಹೇಳಿಕೊಂಡಿದ್ದಾರೆ.