ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನಗಳು ಬಾಕಿ ಇವೆ. ಅಂಬರೀಶ್ ನಿಧನದ ನಂತರ ಎರಡನೇ ಬಾರಿ ಅವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಕೂಡಾ ಸಜ್ಜಾಗಿದ್ದಾರೆ.
![Soori going to direct Abhishek second movie](https://etvbharatimages.akamaized.net/etvbharat/prod-images/kn-bng-02-abhishek-ambraish-new-movie-announced-7204735_27052020205735_2705f_1590593255_750.jpg)
ತಂದೆಗೆ ತಕ್ಕ ಮಗ ಎಂದು ಕರೆಸಿಕೊಂಡಿರುವ ಅಭಿಷೇಕ್ ಅಂಬರೀಶ್ 'ಅಮರ್' ಸಿನಿಮಾ ನಂತರ ಮತ್ತೆ ಮಾಸ್ ಅವತಾರದಲ್ಲಿ ದರ್ಶನ ನೀಡುತ್ತಿದ್ದಾರೆ. ಸ್ಯಾಂಡಲ್ವುಡ್ ರಾ ನಿರ್ದೇಶಕ ಎಂದೇ ಹೆಸರಾದ ದುನಿಯಾ ಸೂರಿ, 'ಪಾಪ್ಕಾರ್ನ್ ಮಂಕಿ ಟೈಗರ್' ಸಿನಿಮಾ ಬಳಿಕ, ರೆಬಲ್ ಸ್ಟಾರ್ ಮಗ ಅಭಿಷೇಕ್ ಅಂಬರೀಶ್ ಕೈಯಲ್ಲಿ ಗನ್ ಹಿಡಿಸಿದ್ದಾರೆ. ಹೀಗೆ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಗನ್ ಹಿಡಿದಿರುವ ಅಭಿಷೇಕ್ ಅಂಬರೀಶ್ ಎರಡನೇ ಚಿತ್ರದ ಲುಕ್ ಇದು. ಈ ಚಿತ್ರಕ್ಕೆ 'ಬ್ಯಾಡ್ ಮ್ಯಾನರ್ಸ್' ಅಂತ ಹೆಸರಿಡಲಾಗಿದೆ.
![Soori going to direct Abhishek second movie](https://etvbharatimages.akamaized.net/etvbharat/prod-images/kn-bng-02-abhishek-ambraish-new-movie-announced-7204735_27052020205735_2705f_1590593255_153.jpg)
ಈಗಾಗಲೇ ಅಭಿಷೇಕ್ ಅಂಬರೀಶ್ ಎರಡನೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು 29 ರಂದು ಅಂಬಿ ಹುಟ್ಟುಹಬ್ಬಕ್ಕೆ ಈ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಮಾಡಲು ಸೂರಿ ಟೀಮ್ ಪ್ಲ್ಯಾನ್ ಮಾಡಿದೆ. ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಕಥೆಯಾಗಿರುವ 'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಿರ್ದೇಶಕ ಸೂರಿ ಜೊತೆ ಕೆಲಸ ಮಾಡಿರುವ ಸುರೇಂದ್ರನಾಥ್ ಹಾಗೂ ಆ್ಯಮ್ರಿ ಕಥೆ ಬರೆದಿದ್ದಾರೆ. ಸಂಭಾಷಣೆ ಹಾಗೂ ಚಿತ್ರಕಥೆಯನ್ನು ಆಮ್ರಿ ಬರೆದಿದ್ದಾರೆ.
![Soori going to direct Abhishek second movie](https://etvbharatimages.akamaized.net/etvbharat/prod-images/kn-bng-02-abhishek-ambraish-new-movie-announced-7204735_27052020205735_2705f_1590593255_846.jpg)
'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರವನ್ನು ನಿರ್ಮಿಸಿದ್ದ ಕೆ.ಎಂ. ಸುಧೀರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚರಣ್ ರಾಜ್ ಸಂಗೀತವಿರುವ 'ಬ್ಯಾಡ್ ಮ್ಯಾನರ್ಸ್' ಸದ್ಯ ಟೈಟಲ್ನಿಂದ ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಪೋಸ್ಟರ್ ಕೂಡಾ ಎಲ್ಲರ ಗಮನ ಸೆಳೆದಿದೆ. ಅಭಿಷೇಕ್ ಅಂಬರೀಶ್ ಮತ್ತು ಸುಕ್ಕಾ ಸೂರಿ ಕಾಂಬಿನೇಷನ್ ಹೇಗೆ ವರ್ಕೌಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕು.