ETV Bharat / sitara

ಅಮ್ಮನ ಹುಟ್ಟುಹಬ್ಬದಂದು ಭಾವುಕ ಪೋಸ್ಟ್​ ಹಾಕಿದ ರಿಯಲ್​ ಹೀರೋ

ಸಮಾಜಸೇವೆಯ ಮುಖಾಂತರ ರಿಯಲ್​ ​ ಹೀರೋ ಎನಿಸಿಕೊಂಡಿರುವ ನಟ ಸೋನು ಸೂದ್, ತಮ್ಮ ತಾಯಿಯ ಹುಟ್ಟುಹಬ್ಬದ ಪ್ರಯುಕ್ತ ಇನ್​​ಸ್ಟಾಗ್ರಾಮ್​ನಲ್ಲಿ ಭಾವುಕ ಫೋಸ್ಟ್​ ಹಾಕಿದ್ದಾರೆ.

Sonu Sood
ಅಮ್ಮನ ಹುಟ್ಟುಹಬ್ಬದಂದು ಭಾವುಕ ಪೋಸ್ಟ್​ ಹಾಕಿದ ರಿಯಲ್​ ಹಿರೋ
author img

By

Published : Jul 22, 2021, 7:42 AM IST

Updated : Jul 22, 2021, 8:34 AM IST

ಇತ್ತೀಚಿನ ದಿನಗಳಲ್ಲಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಜನಮಾನಸದಲ್ಲಿ ಜಾಗ ಪಡೆದಿರುವ ಬಾಲಿವುಡ್ ನಟ ಸೋನು ಸೂದ್, ತಮ್ಮ ತಾಯಿಯ ಹುಟ್ಟುಹಬ್ಬದಂದು ಭಾವುಕ ಫೋಸ್ಟ್​ ಹಾಕಿದ್ದಾರೆ. ಜೊತೆಗೆ ಅಮ್ಮನ ಅಪರೂಪದ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

ಜೂನ್​ 21ರಂದು ಸರೋಜ್​ ಸೂದ್ ಅವರ ಜನ್ಮದಿನ. ಆ ಪ್ರಯುಕ್ತ ಅಮ್ಮನನ್ನು ನೆನೆದು ಸೋನು ಸೂದ್​ ಭಾವುಕ ಪತ್ರ ಬರೆದಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಅಮ್ಮ'. ಪ್ರತಿ ವರ್ಷ ನಿಮ್ಮನ್ನು ತಬ್ಬಿಕೊಂಡು ನೇರವಾಗಿ ವಿಶ್​ ಮಾಡಬೇಕು ಹಾಗೂ ಬದುಕಿನ ಪಾಠಗಳನ್ನು ಕಲಿಸಿದ್ದಕ್ಕೆ ಧನ್ಯವಾದ ಅರ್ಪಿಸಬೇಕು ಎಂದು ಬಯಸುತ್ತೇನೆ. ನನ್ನ ಕೆಲಸವನ್ನು ನಾನು ಉತ್ತಮವಾಗಿ ಮಾಡಿ, ನಿಮಗೆ ಹೆಮ್ಮೆ ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.

ನಾನು ನಿಮ್ಮನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತೇನೆ ಎಂದು ಈ ಮೆಸೇಜ್​ಗಳಿಂದ ತಿಳಿಸಲು ಸಾಧ್ಯವೇ ಇಲ್ಲ. ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ. ನಾನು ನಿಮ್ಮನ್ನು ಮತ್ತೆ ಭೇಟಿ ಆಗುವವರೆಗೂ ಆ ಖಾಲಿತನ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ ಖುಷಿ ಆಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ. ಲವ್​ ಯೂ ಅಮ್ಮ’ ಎಂದು ಸೋನು ಸೂದ್​ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ: 'ಹಾಟ್​ಶಾಟ್​' ಆ್ಯಪ್​ಗಾಗಿ ನನ್ನನ್ನು ಸಂಪರ್ಕಿಸಿದ್ದರು: Kundra ಮುಖವಾಡ ಕಳಚಿಟ್ಟ Puneeth Kaur!

Last Updated : Jul 22, 2021, 8:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.