ETV Bharat / sitara

ಸೋನಾಲ್ ಚೌಹಾಣ್ ಎರಡು ಮದುವೆಯಾಗ್ತಾರಂತೆ... ಕಾರಣ ಏನು ನೋಡಿ...! - ಮದುವೆ ಬಗ್ಗೆ ಸೋನಾಲ್ ಚೌಹಾಣ್ ಪ್ರತಿಕ್ರಿಯೆ

ತೆಲುಗು ನಟಿ ಸೋನಾಲ್ ಚೌಹಾಣ್ ಎರಡು ಮದುವೆಯಾಗ್ತಾರಂತೆ. ನನಗೆ ಪ್ರಕೃತಿ ಎಂದರೆ ಬಹಳ ಇಷ್ಟ, ನಾನು ಎರಡು ಮದುವೆಯಾಗುತ್ತೇನೆ. ಒಮ್ಮೆ ಕಡಲ ತೀರದಲ್ಲಿ ಹಾಗೂ ಮತ್ತೊಮ್ಮೆ ಬೆಟ್ಟಗುಡ್ಡಗಳ ನಡುವೆ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Sonal Chauhan
ಸೋನಾಲ್ ಚೌಹಾಣ್
author img

By

Published : Jan 18, 2021, 7:31 PM IST

ಚಿತ್ರರಂಗದ ಬಹುತೇಕ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇದ್ದು ತಮ್ಮ ವಿವಿಧ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ನಟಿಯರು ಯಾವಾಗಲೂ ಸುದ್ದಿಯಲ್ಲಿರಲು ಬಯಸುತ್ತಾರೆ. ಡಿಕ್ಟೇಟರ್, ಲೆಜೆಂಡ್, ರೂಲರ್ ತೆಲುಗು ಚಿತ್ರಗಳ ನಾಯಕಿ ಸೋನಾಲ್ ಚೌಹಾಣ್​​​ ಕೂಡಾ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಅವರು ಮದುವೆ ಬಗ್ಗೆ ಆಡಿರುವ ಮಾತು ಅಭಿಮಾನಿಗಳಿಗೆ ಶಾಕ್ ನೀಡಿದೆ.

Sonal Chauhan
ಸೋನಾಲ್ ಚೌಹಾಣ್

ಇದನ್ನೂ ಓದಿ: ನಿಗದಿಪಡಿಸಿದ ದಿನಾಂಕಕ್ಕೆ ಮುನ್ನವೇ 'ಪೊಗರು' ಬಿಡುಗಡೆಗೆ ನಿರ್ಧಾರ..!

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನಾಲ್ ಚೌಹಾಣ್ "ನಾನು ಎರಡು ಮದುವೆ ಮಾಡಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಆದರೆ ಸೋನಾಲ್ ಮಾತಿನ ಅರ್ಥ ತಿಳಿದು ನಕ್ಕು ಸುಮ್ಮನಾಗಿದ್ದಾರೆ. "ನನಗೆ ಪ್ರಕೃತಿ ಎಂದರೆ ಬಹಳ ಇಷ್ಟ. ನನಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಪ್ರಕೃತಿಯು ಟೆನ್ಷನ್​ಗೆ ಟಾನಿಕ್ ಇದ್ದ ಹಾಗೆ. ನಮ್ಮ ಜೀವನದಲ್ಲಿ ಪ್ರಕೃತಿ ಬಹಳ ಅಮೂಲ್ಯವಾದದ್ದು. ಈ ಪ್ರಪಂಚದಲ್ಲಿ ನನಗೆ ಪ್ರಕೃತಿಗಿಂತ ಖುಷಿ ನೀಡುವವರು ಯಾರೂ ಇಲ್ಲ. ಪ್ರಕೃತಿ ನಡುವೆ ಓಡಾಡುವುದು, ಮರಗಳ ನಡುವೆ ಹೆಚ್ಚು ಸಮಯ ಕಳೆಯುವುದು, ಪಕ್ಷಿಗಳ ಕಲವರದ ನಡುವೆ ನಿದ್ರೆ ಮಾಡುವುದು ಬಹಳ ಇಷ್ಟ. ಅಷ್ಟೇ ಅಲ್ಲ, ಪ್ರಕೃತಿಯ ಪ್ರತಿ ಶಬ್ಧ, ನಿಶ್ಯಬ್ಧ ಎರಡೂ ಬಹಳ ಇಷ್ಟ. ಇನ್ನು ನನ್ನ ಮದುವೆ ಬಗ್ಗೆ ಕೇಳುವುದಾದರೆ ನಾನು ಎರಡು ಮದುವೆಯಾಗುತ್ತೇನೆ. ಒಂದು ಕಡಲ ತೀರದ ನಡುವೆ, ಮತ್ತೊಂದು ಬೆಟ್ಟ ಗುಡ್ಡಗಳ ನಡುವೆ" ಎಂದು ತಮಾಷೆಯಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.