ಎನ್. ರಂಗನಾಥ್ ಮತ್ತು ಬಿ. ಸುಧಾ ರಂಗನಾಥ್ ದಂಪತಿಯ ಮುದ್ದಿನ ಮಕ್ಕಳು ಇದೀಗ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದಾರೆ. ಆಶಿಕಾ ರಂಗನಾಥ್ ಮತ್ತು ಅನುಷಾ ರಂಗನಾಥ್ ಎಂಬ ಚೆಂದುಳ್ಳಿ ಚೆಲುವೆಯರು ವೀಕ್ಷಕರಿಗೆ ಬಹಳ ಪರಿಚಿತ. ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಈ ಅಕ್ಕ ತಂಗಿಯರಿಬ್ಬರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
![Ashika](https://etvbharatimages.akamaized.net/etvbharat/prod-images/kn-bng-08-ashitha-anusha-photo-ka10018_19112019214222_1911f_1574179942_108.jpg)
'ಕ್ರೇಜಿಬಾಯ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಆಶಿಕಾ ರಂಗನಾಥ್, ಸದ್ಯ ನಟನಾ ಲೋಕದ ಚುಟುಚುಟು ಹುಡುಗಿ ಎಂದೇ ಫೇಮಸ್. ಒಂದರ್ಥದಲ್ಲಿ ಆಶಿಕಾ ಇಂದು ನಟಿಯಾಗಿ ಕಾಣಿಸಿಕೊಂಡಿದ್ದಾರೆ ಎಂದರೆ 'ಕ್ಲೀನ್ ಆ್ಯಂಡ್ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು' ಕಾರ್ಯಕ್ರಮವೇ ಕಾರಣ. ಅಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಆಶಿಕಾ ಫೋಟೋಗಳನ್ನು ನೋಡಿದ ನಿರ್ದೇಶಕ ಮಹೇಶ್ ಬಾಬು ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಆಶಿಕಾ ಅದೃಷ್ಟ ಎಂಬಂತೆ 'ಕ್ರೇಜಿಬಾಯ್' ಚಿತ್ರ ಯಶಸ್ವಿ ನೂರು ದಿನಗಳ ಪ್ರದರ್ಶನ ಕಂಡಿತು. ಮತ್ತೆ ಹಿಂತಿರುಗಿ ನೋಡದ ಆಶಿಕಾ, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರ್ಯಾಂಬೋ 2, ತಾಯಿಗೆ ತಕ್ಕ ಮಗ, ಗರುಡ, ರಂಗಮಂದಿರ, ಅವತಾರ ಪುರುಷ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
![Sisters shining in Sandalwood, ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಅಕ್ಕತಂಗಿಯರು](https://etvbharatimages.akamaized.net/etvbharat/prod-images/kn-bng-08-ashitha-anusha-photo-ka10018_19112019214222_1911f_1574179942_331.jpg)
ಇತ್ತ ಆಶಿಕಾ ಸಹೋದರಿ ಅನುಷಾ, ಬಣ್ಣದ ಪಯಣ ಆರಂಭಿಸಿದ್ದು ಕಿರುತೆರೆ ಮೂಲಕ. 'ಗೋಕುಲದಲ್ಲಿ ಸೀತೆ' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾವನಿ ಪಾತ್ರಧಾರಿಯಾಗಿ ಗಮನ ಸೆಳೆದ ಅನುಷಾ, 'ಒನ್ಸ್ ಮೋರ್ ಕೌರವ', 'ಸೋಡಾಬುಡ್ಡಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಚಲ ನಿರ್ದೇಶನದ 'ಅಂದವಾದ' ಚಿತ್ರ ಅವರಿಗೆ ಮತ್ತಷ್ಟು ಹೆಸರು ನೀಡಿತು. ಈ ಚಿತ್ರದ ನಂತರ ಅವರಿಗೂ ಕೂಡಾ ಬಹಳಷ್ಟು ಅವಕಾಶಗಳು ಹುಡುಕಿ ಬರುತ್ತಿವೆ ಎನ್ನಲಾಗಿದೆ. ಬಾಕ್ಸರ್ ಒಬ್ಬರ ವೈಯಕ್ತಿಕ, ವೃತ್ತಿ ಜೀವನದ ಸುತ್ತ ಹೆಣೆದಿರುವ 'ಟೆನ್' ಎಂಬ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ಕುಮಾರ್ ಜೊತೆ ನಾಯಕಿಯಾಗಿ ನಟಿಸಲು ಅನುಷಾ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಲು ತಯಾರಾಗಿರುವ ಈ ಅಂದವಾದ ಹುಡುಗಿಯರನ್ನು ನೋಡುವುದೇ ಒಂದು ಚೆಂದ.
![Anusha ranganath famous as chutu chutu hudugi, ಆಶಿಕಾ ರಂಗನಾಥ್ ಚುಟುಚುಟು ಹುಡುಗಿ ಎಂದು ಫೇಮಸ್](https://etvbharatimages.akamaized.net/etvbharat/prod-images/kn-bng-08-ashitha-anusha-photo-ka10018_19112019214222_1911f_1574179942_22.jpg)