ತಮ್ಮ ಹಾಡುಗಳು ಹಾಗೂ ಕಂಠಸಿರಿ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದ ಹಾವೇರಿಯ ಹನುಮಂತ ಈಗ ಡ್ಯಾನ್ಸರ್ ಆಗಿ ಮತ್ತೆ ನಿಮ್ಮ ಮುಂದೆ ಬರುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸೀಸನ್ 15 ರ ಮೂಲಕ ಕನ್ನಡಿಗರಿಗೆ ಪರಿಚಯವಾದ ಹನುಮಂತ ಈಗ ಮತ್ತೊಂದು ರಿಯಾಲಿಟಿ ಶೋನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
- " class="align-text-top noRightClick twitterSection" data="">
'ವೀಕೆಂಡ್ ವಿತ್ ರಮೇಶ್' ನಾಲ್ಕನೇ ಆವೃತ್ತಿ ಮುಗಿಯುತ್ತಿದ್ದಂತೆ ಆ ಸಮಯಕ್ಕೆ ಇನ್ನೊಂದು ರಿಯಾಲಿಟಿ ಶೋ ಆರಂಭವಾಗಲಿದೆ. ಮೊದಲನೇ ಆವೃತ್ತಿ ಮೂಲಕ ಜನಮನ ಗೆದ್ದಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಎರಡನೇ ಆವೃತ್ತಿ ಆರಂಭವಾಗುತ್ತಿದೆ. ನೂತನ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಹನುಮಂತ ಸ್ಪರ್ಧಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಈ ಶೋನಲ್ಲಿ ಹನುಮಂತನ ಜೊತೆ ಪಾರ್ಟ್ನರ್ ಕೂಡಾ ಇದ್ದಾರೆ. ಸರಿಗಮಪ 15ನೇ ಆವೃತ್ತಿಯಲ್ಲಿ ಅವರ ಸಹ ಸ್ಪರ್ಧಿಯಾಗಿದ್ದ ಶೈನಿ, ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಹನುಮಂತನಿಗೆ ಜೋಡಿಯಾಗಿದ್ದಾರೆ.
ಹಳ್ಳಿ ಹುಡುಗ, ಮುಗ್ಧ ಮನಸ್ಸು, ಮೃದುಮಾತು, ಜಾನಪದ ಹೆಜ್ಜೆ ಹೀಗೆ ಸರಿಗಮಪ ವೇದಿಕೆಯಲ್ಲಿ ನೀವೆಲ್ಲರೂ ನೋಡಿದ್ದ ಹನುಮಂತನನ್ನು ನೀವೀಗ ಡ್ಯಾನ್ಸರ್ ಆಗಿಯೂ ನೋಡಬಹುದು.