ನಮ್ಮ ಮಾತೃ ಭಾಷೆ ತೆಲುಗು ಆದರೂ ನಮ್ಮ ಜೀವನದ ಭಾಷೆ ಕನ್ನಡ. ಕನ್ನಡಿಗರ ಆಶೀರ್ವಾದದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಹೇಳಿದರು. ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಾಯಿಕುಮಾರ್, ನಾನು ಕನ್ನಡ ಇಂಡಸ್ಟ್ರಿಗೆ ಬಂದು ಈಗಾಗಲೇ 25 ವರ್ಷ ತುಂಬಿದೆ. ಕುಂಕುಮ ಭಾಗ್ಯ ಸಿನಿಮಾದ ಮೂಲಕ ಕನ್ನಡದಲ್ಲಿ ನನ್ನ ಸಿನಿ ಜರ್ನಿ ಶುರುವಾಗಿ ಇಂದು ಭರಾಟೆ ಸಿನಿಮಾದವರೆಗೂ ತಲುಪಿದೆ.
ನಮ್ಮ ಇಡೀ ಕುಟುಂಬಕ್ಕೆ ಸಿನಿಮಾ ರಂಗದ ನಂಟು ಇದೆ. ನನ್ನ ತಾಯಿ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಲ್ಲದೆ ನನ್ನ ತಂದೆ ಹಲವು ನಟರ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ನಮಗೆ ನಮ್ಮ ತಂದೆ-ತಾಯಿಯೇ ಸ್ಫೂರ್ತಿ. ನಾವು ಸಹೋದರರು ಮೂರು ಜನ ಕನ್ನಡ ಸಿನಿಮಾಗಳಲ್ಲಿ ನಟಿಸಿರೋದು ತುಂಬಾನೇ ಖುಷಿ ಇದೆ.
ನಮಗೆ ಮಾತೃ ಭಾಷೆ ತೆಲುಗು ಅದರೂ ನಮ್ಮ ಜೀವನದ ಭಾಷೆ ಕನ್ನಡ ಅಂತ ಖುಷಿಯಿಂದಲೇ ಹೇಳಿದರು. ಅಲ್ಲದೆ ನಾನು ಅಗ್ನಿ, ರವಿಶಂಕರ್ ಅರ್ಮುಗಂ ಹಾಗೂ ಅಯ್ಯಪ್ಪ ಆಯುಧ ಚಿತ್ರದಿಂದ ಹೆಸರು ಮಾಡಿದ್ವಿ. ಒಟ್ಟಿನಲ್ಲಿ "ಅ" ಅಕ್ಷರದಿಂದಲೇ ನಮ್ಮ ಕರಿಯರ್ ಶುರುವಾಗಿದೆ. ಇಷ್ಟು ದಿನ ನಮ್ಮನ್ನು ಹರಸಿದ ಕನ್ನಡಿಗರಿಗೆ ಧನ್ಯವಾದಗಳು.
ನಾವು ಮೂರು ಜನ ಅಣ್ಣ-ತಮ್ಮದಿಂರು ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಅಸೆ ನನ್ನ ತಾಯಿಗೆ ಇತ್ತು. ಅದರೆ ಅವರು ಈಗ ಇಲ್ಲ. ಅವರ ಮಾತಿನಂತೆ ಭರಾಟೆಯಲ್ಲಿ ನಾನು, ರವಿಶಂಕರ್, ಅಯ್ಯಪ್ಪ ಒಟ್ಟಿಗೆ ಸೀನ್ ಶೇರ್ ಮಾಡಿದ್ದೇವೆ. ಮೂವರಿಗೂ ಒಳ್ಳೆ ಪಾತ್ರ ಸೃಷ್ಟಿಸಿ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಚೇತನ್ ಹಾಗೂ ನಿರ್ಮಾಪಕ ಸುಪ್ರೀರ್ಗೆ ಧನ್ಯವಾದ ಎಂದರು.