ಶ್ವೇತಾ ಶ್ರೀವಾತ್ಸವ್, 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ, ಕನ್ನಡ ಚಿತ್ರರಂಗದಲ್ಲಿ, ಗುರುತಿಸಿಕೊಂಡ ನಟಿ. ಮದುವೆಯಾದ ಮೇಲೆ ಗ್ಲಾಮರ್ ಕಥೆ ಮುಗಿಯಿತು ಅಂದುಕೊಂಡಿರುವವರಿಗೆ ಶ್ವೇತಾ ಶಾಕ್ ನೀಡಿದ್ದಾರೆ.
ಫೇರ್ ಅಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶ್ವೇತಾ, 2 ವರ್ಷದ ಹೆಣ್ಣು ಮಗುವಿನ ತಾಯಿ. ತಾಯಿ ಆದ ನಂತರ 'ರಹದಾರಿ' ಎಂಬ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ವಾಪಸಾಗಿರುವ ಶ್ವೇತಾ ಈಗ ಸಖತ್ ಪೋಟೋಶೂಟ್ನಲ್ಲಿ ಮಿಂಚಿದ್ದಾರೆ. ಈ ಫೋಟೋನಲ್ಲಿ ಶ್ವೇತಾ ಶ್ರೀವಾತ್ಸವ್ ಲುಕ್ ನೋಡಿದ್ರೆ, ಇವರೇನಾ ಸಿಂಪಲ್ ಬೆಡಗಿ ಶ್ವೇತಾ ಅಂತಾ ಅನಿಸುತ್ತೆ. ಅಷ್ಟು ಬೋಲ್ಡ್ ಆಗಿ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ.ಈಗಾಗಲೇ ಸಾಕಷ್ಟು ಸಿನಿಮಾ ಸೆಲಬ್ರಿಟಿಗಳ ಫೋಟೋಶೂಟ್ ಮಾಡಿರುವ ಅಭಿಷೇಕ್, ಶ್ವೇತಾ ಶ್ರೀವಾತ್ಸವ್ ಅವರ ಸ್ಟೈಲಿಷ್ ಫೋಟೋಶೂಟ್ ಮಾಡಿದ್ದಾರೆ. ಮಾಡ್ರನ್ ಕಾಸ್ಟೂಮ್ನಲ್ಲಿ ಶ್ವೇತಾ ಶ್ರೀವಾತ್ಸವ್ ಪೋಸ್ ಕೊಟ್ಟಿದ್ದಾರೆ. ಮದುವೆ ಆಗಿ ಒಂದು ಮಗುವಿನ ತಾಯಿ ಆದ್ರೂ ಶ್ವೇತಾ ಶ್ರೀವಾತ್ಸವ್ ಮಾತ್ರ ಇನ್ನೂ ಅದೇ ಗ್ಲಾಮರ್ ಉಳಿಸಿಕೊಂಡಿದ್ದಾರೆ.